Advertisement

ದೋಹಾದಲ್ಲಿ ಬೀದಿ ನಾಯಿಗಳ ಮಾರಣಹೋಮ

08:07 PM Jul 20, 2022 | Team Udayavani |

ದೋಹಾ: ಯಾವುದೋ ಒಂದು ಬೀದಿ ನಾಯಿ ತಮ್ಮ ಮಕ್ಕಳಿಗೆ ಕಚ್ಚಿದ್ದಕ್ಕೆ ಉದ್ರಿಕ್ತಗೊಂಡ ಆ ಮಕ್ಕಳ ಪೋಷಕರ ತಂಡವೊಂದು ಆ ಪ್ರಾಂತ್ಯದಲ್ಲಿದ್ದ ಬಹುತೇಕ ಬೀದಿ ನಾಯಿಗಳನ್ನು ಕೊಂದಿರುವ ಘಟನೆ ಕತಾರ್‌ನ ದೋಹಾದಲ್ಲಿ ನಡೆದಿದೆ.

Advertisement

ಘಟನೆಯಲ್ಲಿ 29 ನಾಯಿಗಳು ಸತ್ತಿದ್ದು, ಇವುಗಳಲ್ಲಿ ನಾಯಿ ಮರಿಗಳೂ ಸೇರಿವೆ. ಇತರ ನಾಯಿಗಳು ಗಾಯಗೊಂಡಿವೆ.

ಈ ನಾಯಿಗಳು ದೋಹಾದಲ್ಲಿರುವ ಕಾರ್ಖಾನೆಯೊಂದರ ಕಾಂಪೌಂಡ್‌ನ‌ಲ್ಲಿ ಆಶ್ರಯ ಪಡೆದಿದ್ದು ಅವುಗಳಿಗೆ ಕಾರ್ಖಾನೆಯ ನೌಕರರು ಹಾಗೂ ಸುತ್ತಲಿನ ಮನೆಗಳವರು ಊಟ ಹಾಕಿ ಸಾಕುತ್ತಿದ್ದರು.

ಉದ್ರಿಕ್ತ ಗುಂಪು ಕಾರ್ಖಾನೆಯ ಭದ್ರತಾ ಸಿಬ್ಬಂದಿಗೆ ಬೆದರಿಕೆ ಹಾಕಿ ಒಳಗೆ ನುಗ್ಗಿ ನಾಯಿಗಳ ಮೇಲೆ ಗುಂಡು ಹಾರಿಸಿದ್ದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next