Advertisement

ಸಹಕಾರ ಸಂಘಕ್ಕೆ 2.88 ಕೋಟಿ ಲಾಭ

11:41 AM Sep 27, 2017 | Team Udayavani |

ಯಲಹಂಕ: ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘ ನಿ. 2.88 ಕೋಟಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷೆ ವಾಣಿಶ್ರೀ ಹೇಳಿದರು. ಸಮೀಪದ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ 2016-17ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿdru. 

Advertisement

ಪ್ರಸಕ್ತ ಸಾಲಿನಲ್ಲಿ 6122 ಸದಸ್ಯರು ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿದ್ದು ಸಂಘದ ಅ-ವರ್ಗದ ಸದಸ್ಯರಿಗೆ ವಿಮೆ ಕಂತನ್ನು ಸಂಘವು ತನ್ನ ಲಾಭಾಂಶದಿಂದ ತುಂಬಿಕೊಟ್ಟಿರುತ್ತದೆ ಎಂದರು. ಉಚಿತ ಪಶು ಚಿಕಿತ್ಸೆ, ನೇತ್ರ ಪರೀûಾ, ಹೃದಯ ತಪಾಸಣೆ ಹಾಗೂ ಯೋಗ ಶಿಬಿರಗಳನ್ನು ನಡೆಸಿದೆ.

ಶಿಬಿರದಲ್ಲಿ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಮರಣ ಹೊಂದಿದ ಸದಸ್ಯರ ವಾರಸುದಾರರಿಗೆ 10 ಸಾವಿರ  ಮರಣೋತ್ತರ ಪರಿಹಾರ ನೀಡಲಾಗುತ್ತಿದೆ. ರೈತ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.  ಹಾಗೂ ಶೇ.3ರ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲಗಳನ್ನು ಗರಿಷ್ಠ 20 ಲಕ್ಷದ ವರೆಗೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಸಂಘದ ಸಿಇಒ ಕೆ. ಕೃಷ್ಣಭಟ್‌ ಮಾತನಾಡಿ, ಈ ಸಾಲಿನಲ್ಲಿ 11967 ಸದಸ್ಯರಿಗೆ 71.26 ಕೋಟಿ ವಿವಿಧೋದ್ದೇಶಗಳಿಗೆ ಸಾಲ ನೀಡಲಾಗಿದೆ. 3.37 ಕೋಟಿ ಷೇರು ಬಂಡವಾಳ, 6.31 ಕೋಟಿ ಆಪದ್ಧನ ನಿಧಿ, 144.62 ಕೋಟಿ ಸದಸ್ಯರ ಠೇವಣಿ, 4.87 ಕೋಟಿ ವ್ಯಾಪಾರ ವಹಿವಾಟು ನಡೆಸಿರುತ್ತದೆ ಹಾಗೂ

ಇತರೆ ನಿಧಿಗಳೂ ಸೇರಿ 177.47 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿರುತ್ತದೆ. ಸಂಘವು 7283 ಸದಸ್ಯತ್ವವನ್ನು ಹೊಂದಿದ್ದು 26921 ಸಹ ಸದಸ್ಯತ್ವವನ್ನು ಹೊಂದಿರುತ್ತದೆ ಎಂದು ಹೇಳಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 69 ಸದಸ್ಯರ ಮಕ್ಕಳಿಗೆ 3.45 ಲಕ್ಷ ಪ್ರತಿಭಾ ಪುರಸ್ಕಾರ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next