Advertisement

2,800 ಕೋಟಿ ರೂ. ಹೆದ್ದಾರಿ ಯೋಜನೆಗಳಿಗೆ ಪಿಎಂ ಚಾಲನೆ

11:36 PM Mar 11, 2024 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿ-748-ಎ ನಲ್ಲಿನ ಬೆಳಗಾವಿ-ಹುನಗುಂದ- ರಾಯಚೂರು ಸೆಕ್ಷನ್‌ಗೆ ಸಂಬಂಧಿಸಿದ 6 ಪ್ಯಾಕೇಜ್‌ಗಳೂ ಸೇರಿ ರಾಜ್ಯಕ್ಕೆ ಸಂಬಂಧಿಸಿದಂತೆ 2,750 ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳಿಗೆ ಪ್ರಧಾನಿ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ.

Advertisement

ಹರಿಯಾಣದಲ್ಲಿ ವರ್ಚುವಲ್‌ ಮೂಲಕ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಈ ಪೈಕಿ ನಗರ ರಸ್ತೆ ವಿಸ್ತರಣೆ ಅನ್ವಯ ಕರ್ನಾಟಕದ ದಾಬಸ್‌ಪೇಟೆ-ಹೊಸಕೋಟೆ ಸೆಕ್ಷನ್‌ ಪ್ಯಾಕೇಜ್‌ ಕೂಡ ಸೇರಿದೆ.

ರಾಷ್ಟ್ರೀಯ ಹೆದ್ದಾರಿ ವಿಭಾಗದಲ್ಲಿ ಕರ್ನಾಟಕಕ್ಕೆ 6, ಆಂಧ್ರಪ್ರದೇಶಕ್ಕೆ 14, ಹರಿಯಾಣಕ್ಕೆ 3 ಹಾಗೂ ಪಂಜಾಬ್‌ಗ 2 ಪ್ಯಾಕೇಜ್‌ಗಳ ಸಹಿತ ಇನ್ನೂ 39 ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ನಗರ ರಸ್ತೆ ವಿಸ್ತರಣೆ ಅನ್ವಯ ಕರ್ನಾಟಕ 1 ಪ್ಯಾಕೇಜ್‌, ದಿಲ್ಲಿಗೆ ಸಂಬಂಧಿಸಿದ 3, ಉತ್ತರ ಪ್ರದೇಶಕ್ಕೆ ಸಂಬಂಧಿಸಿದ 3, ಹಿಮಾಚಲ ಮತ್ತು ಆಂಧ್ರಪ್ರದೇಶಕ್ಕೆ ಸಂಬಂಧಿಸಿದ ತಲಾ 1 ಪ್ಯಾಕೇಜ್‌ ಹಾಗೂ ಇನ್ನೂ 42 ಪ್ಯಾಕೇಜ್‌ಗಳಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ.

ವಂದೇ ಭಾರತ್‌ ರೈಲು ಸಂಚಾರಕ್ಕೆ ಇಂದು ಪ್ರಧಾನಿ ಹಸಿರು ನಿಶಾನೆ
ಬೆಂಗಳೂರು: ದೊಡ್ಡಬಳ್ಳಾಪುರದ ವಡ್ಡರಹಳ್ಳಿ ಮಲ್ಟಿಮಾಡಲ್‌ ಕಾರ್ಗೋ ಟರ್ಮಿನಲ್‌ ಹಾಗೂ ಪೆನುಕೊಂಡ ಬಳಿ ನವೀಕರಣಗೊಂಡ ಆಟೋಮೊಬೈಲ್‌ ಗೂಡ್‌ಶೆಡ್‌ ಲೋಕಾರ್ಪಣೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಆನ್‌ಲೈನ್‌ ಮೂಲಕ ಚಾಲನೆ ನೀಡಲಿದ್ದಾರೆ. ಇದೇ ವೇಳೆ ತಿರುವನಂತಪುರ- ಕಾಸರಗೋಡು ವಂದೇ ಭಾರತ್‌ ರೈಲು ಸಂಚಾರ ಮಂಗಳೂರಿಗೆ ವಿಸ್ತರಣೆಗೆ ಹಸುರು ನಿಶಾನೆ ತೋರಲಿದ್ದಾರೆ.

ನಾಗವಾರದ ಥಣಿಸಂದ್ರದಲ್ಲಿ 270 ಕೋಟಿ ರೂ. ವೆಚ್ಚದ ವಂದೇ ಭಾರತ್‌ ಸ್ಲಿàಪರ್‌ ರೈಲುಗಳ ನಿರ್ವಹಣೆ ಕೇಂದ್ರಕ್ಕೆ ಶಂಕುಸ್ಥಾಪನೆ, ಚೆನ್ನೈ- ಕಲಬುರಗಿ, ಮೈಸೂರು-ಚೆನ್ನೈ ಎರಡು ಹೊಸ ವಂದೇ ಭಾರತ್‌ ರೈಲು ಸಂಚಾರಕ್ಕೆ ಹಸುರು ನಿಶಾನೆ ಸಿಗಲಿದೆ. ಇದೇ ವೇಳೆ ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಬೆಂಗಳೂರು ನೈಋತ್ಯ ರೈಲ್ವೇ ವ್ಯಾಪ್ತಿಯ ಹೊಸ 40 ಮಳಿಗೆ, 2 ಜನೌಷಧ ಕೇಂದ್ರ ಲೋಕಾರ್ಪಣೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next