Advertisement

28 ಪೊಲೀಸ್‌ ಅಧಿಕಾರಿಗಳಿಗೆ ಐಪಿಎಸ್‌ ಭಡ್ತಿ: ಕೇಂದ್ರ ಸರಕಾರ ಆದೇಶ

07:32 PM Dec 10, 2021 | Team Udayavani |

ಬೆಂಗಳೂರು:  ಪೊಲೀಸ್‌ ಇಲಾಖೆಯ 28 ಮಂದಿ ಹಿರಿಯ  ಅಧಿಕಾರಿಗಳಿಗೆ ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಹುದ್ದೆಗೆ ಭಡ್ತಿ ನೀಡಿ ಕೇಂದ್ರ ಸರಕಾರ ಆದೇಶಿಸಿದೆ.

Advertisement

2016ನೇ ಬ್ಯಾಚ್‌ನ ಎಂ.ವಿ. ಚಂದ್ರಕಾಂತ್‌, ಎಂ.ಎಲ್‌.ಮಧುರವೀಣಾ, 2017ನೇ ಬ್ಯಾಚ್‌ನ ಚನ್ನಬಸವಣ್ಣ, ಜಯಪ್ರಕಾಶ್‌, ಕೆ.ಪಿ.ಅಂಜಲಿ, ಎಂ. ನಾರಾಯಣ, ಎಂ. ಮುತ್ತುರಾಜ್‌, ಶೇಖರ್‌ ಎಚ್‌.ಟೆಕ್ಕಣ್ಣನವರ್‌, ರವೀಂದ್ರ ಕಾಶಿನಾಥ್‌ ಗಡಾದಿ, ಅನಿತಾ ಭೀಮಪ್ಪ ಹದ್ದಣ್ಣನವರ್‌, ಎ.ಕುಮಾರಸ್ವಾಮಿ, ಸಾರಾ ಫಾತೀಮಾ, ರಶ್ಮೀ ಪರಡಿ, ಎಂ.ಎ.ಅಯ್ಯಪ್ಪ ಮತ್ತು 2019ನೇ ಬ್ಯಾಚ್‌ನ ಶಿವಕುಮಾರ್‌, ಮಲ್ಲಿಕಾರ್ಜುನ ಬಾಳದಂಡಿ, ವೈ. ಅಮರನಾಥ್‌ ರೆಡ್ಡಿ, ಪವನ್‌ ನಿಜ್ಜುರ್‌, ಬಿ.ಎಲ್‌. ಶ್ರೀಹರಿ ಬಾಬು, ಎಂ.ಎಸ್‌.ಗೀತಾ, ಯಶೋದಾ ವಂಟಗೋಡಿ, ಎಂ.ರಾಜೀವ್‌, ವಿ.ಜೆ.ಶೋಭಾರಾಣಿ, ಡಾ| ಎಸ್‌.ಕೆ. ಸೌಮ್ಯಲತಾ, ಬಿ.ಟಿ.ಕವಿತಾ, ಉಮಾ ಪ್ರಶಾಂತ್‌  ಭಡ್ತಿ ಪಡೆದವರು.

ಈ ಅಧಿಕಾರಿಗಳು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗ, ಗುಪ್ತಚರ, ವಿಶೇಷ ಕಾರ್ಯಪಡೆ ಸೇರಿ  ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:ನೆರವಿಗೆ ಬಂದ ಭಾರತೀಯ ವಿಕಾಸ ಟ್ರಸ್ಟ್; ಯಕ್ಷ ಕಲಾವಿದನ ಬದುಕಲ್ಲಿ ಬೆಳಕು!

Advertisement

Udayavani is now on Telegram. Click here to join our channel and stay updated with the latest news.

Next