Advertisement

ಅ.1ರಿಂದ ಆನ್‌ಲೈನ್‌ ಗೇಮ್‌ಗೆ ಶೇ.28 GST

12:17 AM Aug 03, 2023 | Team Udayavani |

ಹೊಸದಿಲ್ಲಿ: ಆನ್‌ಲೈನ್‌ ಗೇಮಿಂಗ್‌, ಕ್ಯಾಸಿನೋಗೆ ವಿಧಿಸಲಾಗಿರುವ ಶೇ.28 ಜಿಎಸ್‌ಟಿ ಅ.1ರಿಂದ ಜಾರಿಯಾಗಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ದಿಲ್ಲಿಯಲ್ಲಿ ಜಿಎಸ್‌ಟಿ ಮಂಡಳಿಯ 51ನೇ ಸಭೆಯ ಬಳಿಕ ಮಾತನಾಡಿದ ಅವರು, ನಿಯಮ ಜಾರಿಗೊಂಡು 6 ತಿಂಗಳ ಬಳಿಕ ಅದನ್ನು ಪುನರ್‌ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಕ್ಯಾಸಿನೋಗೆ ಕೂಡ ಆರಂಭದಲ್ಲೇ ಶೇ.28 ಜಿಎಸ್‌ಟಿ ವಿಧಿಸುವ ಬಗ್ಗೆ ಹಿಂದಿನ ಸಭೆಯಲ್ಲೇ ತೀರ್ಮಾನಿಸಲಾಗಿತ್ತು. ಅದರಲ್ಲಿ ಬದಲಾವಣೆ ಇಲ್ಲ ಎಂದರು.
ಗೇಮಿಂಗ್‌ ಕ್ಷೇತ್ರಕ್ಕೆ ತೆರಿಗೆ ವಿಧಿಸಿರುವುದನ್ನು ಮತ್ತೂಮ್ಮೆ ಪರಿಶೀಲಿಸಬೇಕು ಎಂದು ದಿಲ್ಲಿ, ಗೋವಾಗಳ ವಿತ್ತ ಸಚಿವರು ಆಗ್ರಹಿಸಿದರು. ಕರ್ನಾಟಕ, ಉತ್ತರ ಪ್ರದೇಶ ಸಹಿತ ಕೆಲವು ರಾಜ್ಯಗಳ ವಿತ್ತ ಸಚಿವರು ಮತ್ತು ಆಯಾ ರಾಜ್ಯಗಳ ಪ್ರತಿನಿಧಿಗಳು ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಕೂಡಲೇ ಜಾರಿ ಮಾಡಲು ಆಗ್ರಹಿಸಿದರು. ಸಿಜಿಎಸ್‌ಟಿ ಸಂಬಂಧಿಸಿದ ತಿದ್ದುಪಡಿ ಮಸೂದೆಯನ್ನು ಹಾಲಿ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಚಿವರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next