ನವದೆಹಲಿ: ಕರ್ನಾಟಕ ಸೇರಿದಂತೆ 10 ರಾಜ್ಯಗಳ 28 ಆಹಾರ ಸಂಸ್ಕರಣಾ ಯೋಜನೆಗಳಿಗೆ ಕೇಂದ್ರ ಸರ್ಕಾರ 107.42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ನರೇಂದ್ರ ಸಿಂಗ್ ತೋಮರ್ ನೇತೃತ್ವದಲ್ಲಿ ಶನಿವಾರ ನಡೆದ ಅಂತರ ಸಚಿವಾಲಯದ ಅನುಮೋದನಾ ಸಮಿತಿ (ಐಎಂಎಸಿ) ಸಭೆಯಲ್ಲಿ ಯೋಜನೆಗಳಿಗೆ ಅನುಮತಿ ಸಿಕ್ಕಿದೆ. ಈ ಯೋಜನೆ ಮೂಲಕ 10 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.
ಯಾವ ರಾಜ್ಯಕ್ಕೆ ಪ್ರಯೋಜನ?: ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಉತ್ತರಖಂಡ, ಅಸ್ಸಾಂ ಮತ್ತು ಮಣಿಪುರಗಳಿಗೆ ಯೋಜನೆಗಳ ಲಾಭ ಸಿಗಲಿದೆ.
ಇದನ್ನೂ ಓದಿ:ಕೋವಿಡ್ ಸೋಂಕಿತರ ಸಮಸ್ಯೆಗೆ ಔಷಧಿ ಸಂಶೋಧನೆ: ಭಾರತೀಯ ಮೂಲದ ವೈದ್ಯೆಯ ಸಾಧನೆ !
“28 ಯೋಜನೆಗಳ ಜಾರಿಗೆ ಒಟ್ಟು 320.33 ಕೋಟಿ ರೂ. ವೆಚ್ಚವಾಗಲಿದ್ದು, ಆರಂಭಿಕ ಅನುದಾನವಾಗಿ ಸಿಇಎಫ್ಪಿಪಿಸಿ ಯೋಜನೆ ಅಡಿಯಲ್ಲಿ 107.42 ಕೋಟಿ ರೂ. ಬಿಡುಗಡೆ ಮಾಡಲಾಗಿದೆ’ ಎಂದು ಐಎಂಎಸಿ ತಿಳಿಸಿದೆ.