Advertisement

28 ದಿನಗಳ ಕ್ವಾರಂಟೈನ್‌ ಸೂಚನೆ: ಸುರೇಶ್‌ ಕುಮಾರ್‌

12:05 AM Apr 14, 2020 | Sriram |

ಬೆಂಗಳೂರು: ಕೋವಿಡ್ 19 ಸೋಂಕು ಲಕ್ಷಣಗಳು 14 ದಿನಗಳ ಬಳಿಕವೂ ಕಂಡು ಬರುವ ಹಿನ್ನೆಲೆ ಎಲ್ಲರಿಗೂ 28 ದಿನಗಳ ಕ್ವಾರಂಟೈನ್‌ಗೆ ಸೂಚಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದರು.

Advertisement

ಸೋಂಕಿತ ಪ್ರಕರಣಗಳ ಪೈಕಿ 218ನೇ ಸೋಂಕಿತ ಮಾ.21ರಂದು ಇಂಡೋನೇಶ್ಯಾದಿಂದ ಆಗಮಿಸಿ ದ್ದರು. 58 ವರ್ಷದ ಈ ವ್ಯಕ್ತಿಗೆ ವಿದೇಶ
ದಿಂದ ಆಗಮಿಸಿದ 22 ದಿನಗಳ ಬಳಿಕ ಎ.12 ರಂದು ಸೋಂಕು ದೃಢಪಟ್ಟಿತ್ತು. ಹೀಗಾಗಿ 14 ದಿನಗಳ ಬಳಿಕವೂ ಸೋಂಕಿನ ಲಕ್ಷಣ ಗೋಚರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎರಡನೇ ಹಂತದ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಸೂಚಿಸಲಾಗುತ್ತಿದೆ. ವಿದೇಶ ಪ್ರಯಾಣದ ಹಿನ್ನೆಲೆ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸೋಂಕು ಹೆಚ್ಚಾಗಿ ಹರಡಿರುವ ಪ್ರದೇಶದಲ್ಲಿ ತೀವ್ರವಾಗಿ ಪರೀಕ್ಷೆ ನಡೆಸಲು ರ್‍ಯಾಂಡಮ್‌ ಪರೀಕ್ಷೆಗೆ ಚಿಂತನೆ ನಡೆಸಿದ್ದೇವೆ. ಆದರೆ ಪರೀಕ್ಷಾ ಕಿಟ್‌ಗಳು ಇನ್ನೂ ಬಾರದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಸದ್ಯದಲ್ಲೇ ಪರೀಕ್ಷಾ ಕಿಟ್‌ಗಳು ಬರುವ ಸಾಧ್ಯತೆ ಇದೆ. ಕಿಟ್‌ಗಳು ಬಂದ ಮೇಲೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next