Advertisement

ಶಂಕಿತ ವಿಷಾಹಾರ : ರಾಜಸ್ಥಾನ ಗೋಶಾಲೆಯಲ್ಲಿ 28 ದನಗಳ ಸಾವು

06:01 PM Aug 09, 2018 | Team Udayavani |

ಜೈಪುರ : ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಗೋಶಾಲೆಯಲ್ಲಿ  ಕಳೆದ ಎರಡು ದಿನಗಳಲ್ಲಿ ಶಂಕಿತ ವಿಷಾಹಾರ ಸೇವನೆಯಿಂದ ಕನಿಷ್ಠ 28 ದನಗಳು ಸತ್ತಿರುವುದಾಗಿ ವರದಿಯಾಗಿದೆ. 

Advertisement

ಶಂಕಿತ ವಿಷಾಹಾರ ಸೇವನೆಯಿಂದ ಸುಮಾರು 300 ದನಗಳು ಅಸ್ವಸ್ಥವಾಗಿದ್ದವು. ಈ ಪೈಕಿ 28 ದನಗಳು ಕಳೆದ ಎರಡು ದಿನಗಳಲ್ಲಿ ಮೃತಪಟ್ಟವು ಎಂದು ಗೋಶಾಲೆಯ ಅಧ್ಯಕ್ಷ ದಯಾನಂದ ಖೋಖೇವಾಲ ತಿಳಿಸಿದ್ದಾರೆ. ಪ್ರತಿಷ್ಠಾನ ನಡೆಸುತ್ತಿರುವ ಈ ಗೋಶಾಲೆಯಲ್ಲಿ ಸುಮಾರು 2,000 ದನಗಳು ಇವೆ. 

ಪಶು ವೈದ್ಯರ ತಂಡವೊಂದು ಗೋಶಾಲೆಯಲ್ಲಿನ ದನಗಳ ಆರೋಗ್ಯ ತಪಾಸಣೆಯಲ್ಲಿ ನಿರತವಾಗಿದೆ ಮತ್ತು ಅಲ್ಲಿನ ಪರಿಸ್ಥಿತಿಯನ್ನುಅವಲೋಕಿಸುತ್ತಿದೆ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಮದನ್‌ಲಾಲ್‌ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next