Advertisement

ಮೀರಾಗಾಂವ್‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 27ನೇ ವಾರ್ಷಿಕ ಮಹೋತ್ಸವ

05:10 PM Jun 17, 2018 | |

ಮುಂಬಯಿ: ದೇವರ ಉತ್ಸವಗಳು ಜಾತಿ, ಮತ, ಪಂಥಗಳನ್ನು ಒಗ್ಗೂಡಿಸುವ ವಿಶೇಷತೆ ಹೊಂದಿವೆ. ನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿರಿಮೆಯ ದೇವಸ್ಥಾನ ಶಕ್ತಿ ಕೇಂದ್ರವಾಗಿದೆ. ಇಲ್ಲಿನ ಯಜ್ಞ, ಯಾಗಾದಿಗಳು ಪ್ರಕೃತಿ ಶುದ್ಧೀಕರಣದೊಂದಿಗೆ ಮಾನವನ ಧನಾತ್ಮಕ ಚಿಂತನೆಗಳನ್ನು ವೃದ್ಧಿಸುತ್ತವೆ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್‌ ಇದರ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾದ‌ìನ್‌ ಭಟ್‌ ಅವರು ನುಡಿದರು.

Advertisement

ಜೂ. 14ರಂದು ಮೀರಾರೋಡ್‌ ಪೂರ್ವದ ಮೀರಾಗಾಂವ್‌ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 27 ನೇ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮೀರಾರೋಡ್‌ ಪರಿಸರದ ಭಕ್ತಾದಿಗಳ ಅಪೂರ್ವ ಸಹಕಾರದಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪವಿತ್ರ ಕ್ಷೇತ್ರ ವಾಗಿ ಬಿಂಬಿತವಾಗಿದೆ. ತವರೂರ ಸಂಸ್ಕೃತಿಯಂತೆ ಇಲ್ಲಿ ಪ್ರತಿಯೊಂದು ದೇವತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 27 ವರ್ಷಗಳನ್ನು ಪೂರೈಸಿದ ದೇವಸ್ಥಾನದ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರು, ಪರಿವಾರ ದೇವರುಗಳಾದ ಶ್ರೀದುರ್ಗೆ, ಶ್ರೀಮಹಾಗಣಪತಿ, ಶ್ರೀ ಆಂಜನೇಯ ಮತ್ತು ನವಗ್ರಹಗಳು ಸುಖ, ಸಮೃದ್ಧಿ, ಶಾಂತಿಯನ್ನು ಕರುಣಿಸಲಿ ಎಂದು ನುಡಿದು ಹಾರೈಸಿದರು.

ದೇವಸ್ಥಾನದ ಸ್ಥಾಪಕ ಕೃಷ್ಣ ಶೆಟ್ಟಿ, ಆಡಳಿತ ಟ್ರಸ್ಟಿ ಶಿಮಂತೂರು ಮಜಲಗುತ್ತು ರಂಜನ್‌ ಶೆಟ್ಟಿ ಬಾಬಾ, ಸಾಣೂರು ಸಾಂತಿಂಜ ಜನಾದ‌ìನ ಭಟ್‌ ಅವರ ಮುಂದಾಳತ್ವದಲ್ಲಿ ವೇದಮೂರ್ತಿ ಕಾಪು ಕಲ್ಯ ರಜನೀಶ್‌ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ದುರ್ಗಾ ಹೋಮ, ನವಕ ಪ್ರಧಾನ ಹೋಮ, ಅಭಿಷೇಕ, ಪ್ರಸನ್ನ ಪೂಜೆ, ರುದ್ರಾಭಿಷೇಕ, ನವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಮಹಾರಂಗ ಪೂಜೆ ಇನ್ನಿತರ ಪೂಜಾ ಕೈಂಕರ್ಯಗಳು  ಪ್ರಧಾನ ಅರ್ಚಕ ಮಾಧವ ಭಟ್‌ ಅವರ ಪೌರೋಹಿತ್ಯದಲ್ಲಿ ನೆರವೇರಿತು. ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಮಾಧವ ಭಟ್‌ ಅವರು ನೀಡಿರುವ ಶ್ರೀದೇವರ ಪಾಣಿ ಪೀಠಕ್ಕೆ ಬೆಳ್ಳಿ ಕವನ ಸಮರ್ಪಿಸಲಾಯಿತು.

ರಾತ್ರಿ ಕುಂಟಾಡಿ ಸುರೇಶ್‌ ಭಟ್‌ ಅವರಿಂದ ದೇವರ ಬಲಿ ಉತ್ಸವ ನಡೆಯಿತು. 

Advertisement

ಕೊನೆಯಲ್ಲಿ ಜರಗಿದ ಅನ್ನಸಂತರ್ಪಣೆಯಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ನ ಸರ್ವ ಸದಸ್ಯರು, ಮೀರಾರೋಡ್‌ ಪರಿಸರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕನ್ನಡೇತರರು, ರಾಜಕೀಯ ಮುಖಂಡರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಅರ್ಚಕ ವೃಂದದಲ್ಲಿ ಸಾಂತಿಂಜ ಸುಬ್ರಹ್ಮಣ್ಯ ಭಟ್‌, ವಿಟuಲ್‌ ಭಟ್‌, ವಾಸುದೇವ ಭಟ್‌, ದೇವರಾಜ್‌ ನೆಲ್ಲಿ, ನಾಗರಾಜ ಭಟ್‌, ರಾಘವೇಂದ್ರ ಭಟ್‌, ಬಾಲಚಂದ್ರ ಭಟ್‌, ಅನಂತ ಭಟ್‌, ಮಧ್ವರಾಜ್‌ ಭಟ್‌, ಶ್ರೀನಿವಾಸ ಭಟ್‌, ಯತಿರಾಜ ಉಪಾಧ್ಯಾಯ, ಯಕ್ಷಗಾನ ಭಾಗವತಿಕೆಯಲ್ಲಿ ಎಳ್ಳಾರೆ ಶಂಕರನಾರಾಯಣ ನಾಯಕ್‌, ಭರತನಾಟ್ಯನಲ್ಲಿ  ಖುಷಿ ಶೆಟ್ಟಿ, ಭಜನೆಯಲ್ಲಿ ಶ್ರೀಧರ ಶೆಟ್ಟಿ ತಂಡದವರು ಸಹಕರಿಸಿದರು. 
ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next