Advertisement

ಮೀರಾರೋಡ್‌ ಮಹಾಲಿಂಗೇಶ್ವರ ದೇಗುಲ 27ನೇ ವಾರ್ಷಿಕೋತ್ಸವ 

02:05 PM Jun 20, 2018 | Team Udayavani |

ಮುಂಬಯಿ: ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ ಆಡಳಿತದಲ್ಲಿರುವ ಶ್ರೀ ಮಹಾಲಿಂಗೇ ಶ್ವರ ದೇವಸ್ಥಾನ ಮೀರಾ ಕೋ. ಆಪರೇಟಿವ್‌ ಹೌಸಿಂಗ್‌ ಸೊಸೈಟಿ ಲಿಮಿಟೆಡ್‌ ಇದರ 27ನೇ ವಾರ್ಷಿಕ ವರ್ಧಂತಿ ಉತ್ಸವವು ಜೂ. 14 ರಂದು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ದಿನವೀಡಿ ನಡೆದು ರಾತ್ರಿ ಸಮಾಪ್ತಿಗೊಂಡಿತು.

Advertisement

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ ಭಟ್‌ ಅವರು ಶ್ರೀ ದೇವರ ಪಾಣಿಪೀಠಕ್ಕೆ ಬೆಳ್ಳಿಯ ಕವಚವನ್ನು ಅರ್ಪಿಸಿದರು. ಪೂಜಾ ವಿಧಿ-ವಿಧಾನಗಳು ವೇದಮೂರ್ತಿ ಕಾಪುಕಲ್ಯಾ ರಜನೀಶ್‌ ತಂತ್ರಿಯವರ  ನೇತೃತ್ವದಲ್ಲಿ ನಡೆಯಿತು. ಅನ್ನದಾನಕ್ಕೆ ಕೈಗಾರಿಕೋದ್ಯಮಿಗಳಾದ ಪೊಲ್ಯ ಮಹೇಶ್‌ ಶೆಟ್ಟಿ, ಸುಪ್ರಿಯಾ ಶೆಟ್ಟಿ, ರೇವಾ ಎಂ. ಶೆಟ್ಟಿ, ನಾರಾಯಣ ಪೂಜಾರಿ, ಹೊಟೇಲ್‌ ಉದ್ಯಮಿಗಳಾದ ಕಿಶೋರ್‌ ಶೆಟ್ಟಿ ಮಿಯ್ನಾರು, ಕರುಣಾಕರ ಶೆಟ್ಟಿ ಅವರು ಸಹಕರಿಸಿದರು.

ದಿನಪೂರ್ತಿ ನಡೆದ ಪೂಜಾ ಕಾರ್ಯದಲ್ಲಿ ದೇವಸ್ಥಾನದ ಸ್ಥಾಪಕ ಕೃಷ್ಣ ಜಿ. ಶೆಟ್ಟಿ, ದೇವಸ್ಥಾನದ ಆಡಳಿತ ಟ್ರಸ್ಟಿ ಶಿಮಂತೂರು ಮಜಲಗುತ್ತು ರಂಜನ್‌ ಶೆಟ್ಟಿ (ಬಾಬಾ), ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ದನ್‌ ಭಟ್‌, ಟ್ರಸ್ಟಿಗಳಾದ ಅನಿಲ್‌ ಶೆಟ್ಟಿ, ಪ್ರಸನ್ನ ಶೆಟ್ಟಿ ಕುರ್ಕಾಲ್‌, ಪ್ರಸನ್ನ ಶೆಟ್ಟಿ ಬೋಳ, ಸತ್ಪಾಲ್‌, ವೆಂಕಟೇಶ್‌ ಪಾಟೀಲ್‌, ಐಕಳ ಆನಂದ ಶೆಟ್ಟಿ, ಶಿಮಂತೂರು ಮಜಲಗುತ್ತು ಚಂದ್ರ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ಟ್ರಸ್ಟ್‌ ಇದರ ಸರ್ವ ಸದಸ್ಯರು, ಮೀರಾ ಸೊಸೈಟಿ ಸಮಿತಿಯ ಸದಸ್ಯರು ಯಶಸ್ವಿಯಾಗಿ ಸಹಕರಿಸಿದರು. ಪೂಜಾ ಕಾರ್ಯದಲ್ಲಿ ಮೀರಾ-ಭಾಯಂದರ್‌ ಪರಿಸರದ ಅಪಾರ ಭಕ್ತಾದಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯ ನೇತಾರರು, ಧಾರ್ಮಿಕ ಮುಖಂಡರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next