Advertisement

271 ಭಾರತೀಯರ ಗಡೀಪಾರಿಗೆ ಅಮೆರಿಕ ಸಜ್ಜು

03:50 AM Mar 26, 2017 | |

ಹೊಸದಿಲ್ಲಿ / ವಾಷಿಂಗ್ಟನ್‌: ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿರುವ ಅಮೆರಿಕದ ಟ್ರಂಪ್‌ ಆಡಳಿತವು ಅಲ್ಲಿ ವಾಸಿಸುತ್ತಿರುವ 270ಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಗಡೀಪಾರು ಮಾಡಲು ಮುಂದಾಗಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ರಾಜ್ಯಸಭೆಯಲ್ಲಿ ಈ ವಿಚಾರ ತಿಳಿಸಿದ್ದಾರೆ.

Advertisement

ಇತ್ತೀಚೆಗೆ ಅಮೆರಿಕ ಸರಕಾರವು 271 ಮಂದಿಯ ಹೆಸರುಗಳ ಪಟ್ಟಿಯನ್ನು ನಮಗೆ ಕಳುಹಿಸಿದ್ದು, ಅಕ್ರಮ ವಲಸಿ ಗರಾದ ಅವರನ್ನು ಗಡೀಪಾರು ಮಾಡುವು ದಾಗಿ ಹೇಳಿದೆ. ಆದರೆ ಈ ವಾದವನ್ನು ತಿರಸ್ಕರಿಸಲಾಗಿದ್ದು,  ಗಡೀಪಾರಿಗೆ ಒಳಗಾಗ ಲಿರುವವರು ಭಾರತೀಯರೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ, ಅವರ ಕುರಿತು ಹೆಚ್ಚಿನ ಮಾಹಿತಿಯನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದೇವೆ ಎಂದು ಸುಷ್ಮಾ ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿರುವ ಪ್ಯೂ ರಿಸರ್ಚ್‌ ಸೆಂಟರ್‌ ಪ್ರಕಾರ, 2009ರಿಂದ 2014ರ ಅವಧಿಯಲ್ಲಿ ಅಮೆರಿಕದಲ್ಲಿರುವ ಅಕ್ರಮ ವಲಸಿಗ ಭಾರತೀಯರ ಸಂಖ್ಯೆ ಬರೋಬ್ಬರಿ 1.30 ಲಕ್ಷದಷ್ಟು ಹೆಚ್ಚಾಗಿದೆ. ಒಟ್ಟಾರೆ 5 ಲಕ್ಷದಷ್ಟು ಭಾರತೀಯರು ಅಕ್ರಮವಾಗಿ ನೆಲೆಸಿದ್ದಾರೆ.

ಇನ್ನು ವೀಸಾ ಪಡೆಯೋದೇ ಕಷ್ಟ: ವೀಸಾ ನೀಡುವಾಗ ಹೆಚ್ಚಿನ ನಿಗಾ ವಹಿಸುವಂತೆ ಟ್ರಂಪ್‌ ಆಡಳಿತವು ಆದೇಶಿಸಿರುವುದು ಭಾರತೀಯರು ಸಹಿತ ಅಮೆರಿಕದ ಕನಸು ಕಂಡ ಅನೇಕರಿಗೆ ಭ್ರಮನಿರಸನ ಉಂಟುಮಾಡುವುದಂತೂ ನಿಜ. ಏಕೆಂದರೆ, ವೀಸಾದ ಮೇಲೆ ಹೆಚ್ಚಿನ ನಿಗಾ ಎಂಬ ಸರಕಾರದ ಆದೇಶವು ಇನ್ನು ಅಮೆರಿಕದ ವೀಸಾ ಪಡೆಯುವುದನ್ನೇ ಕಷ್ಟಕರವಾಗಿ ಸಲಿದೆ. ವೀಸಾ ವಿತರಣೆ ವೇಳೆ ಮಾನದಂಡವಾಗಿ ಪರಿಗಣಿಸಲ್ಪಡುವ ಅಂಶಗಳನ್ನು ಪಟ್ಟಿ ಮಾಡುವಂತೆ ಜಾರಿ ನಿರ್ದೇಶನಾ ಲಯ ಮತ್ತು ಗುಪ್ತಚರ ಸಂಸ್ಥೆಗಳಿಗೆ ಸರಕಾರ ಸೂಚಿಸಿದೆ.

ವೀಸಾಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರರ ವಶದಲ್ಲಿರುವ ಯಾವುದಾದರೂ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದನೋ ಎಂಬ ಮಾಹಿತಿ ಸಂಗ್ರಹವೂ ಈ ಮಾನದಂಡಗಳಲ್ಲಿ ಒಂದು. ಅರ್ಜಿದಾರ ಯಾವತ್ತಾದರೂ ಇರಾಕ್‌, ಲಿಬಿಯಾ, ಸಿರಿಯಾ ಮತ್ತಿತರ ಪ್ರದೇಶಗಳಲ್ಲಿ ಕೆಲಸ ಮಾಡಿದ್ದರೆ ಅಥವಾ ಪ್ರಯಾಣ ಬೆಳೆಸಿದ್ದರೆ ಅಂಥವರಿಗೆ ವೀಸಾ ಸಿಗುವುದಿಲ್ಲ. ಅಷ್ಟೇ ಅಲ್ಲ, ಅರ್ಜಿದಾರರ ಪ್ರಯಾಣ ಇತಿಹಾಸ, 15 ವರ್ಷಗಳ ಉದ್ಯೋಗದ ಮಾಹಿತಿ, ಎಲ್ಲ ಫೋನ್‌ ನಂಬರ್‌ಗಳು, ಇಮೇಲ್‌ ವಿಳಾಸಗಳು, 5 ವರ್ಷಗಳ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗ‌ಳನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಇಂಥ ಎಲ್ಲ ಮಾನದಂಡಗಳಲ್ಲೂ ಪಾಸ್‌ ಆಗಿ ಬಂದರಷ್ಟೇ ವೀಸಾ, ಇಲ್ಲದಿದ್ದರೆ ಕನಸು ಭಗ್ನ.

Advertisement

ಭಾರತೀಯ ಮೂಲದ ಯುವತಿಗೆ  ದೇಶಬಿಟ್ಟು ತೊಲಗೆಂದ ಭೂಪ!
ನ್ಯೂಯಾರ್ಕ್‌: ಅಮೆರಿಕದಲ್ಲಿ ಜನಾಂಗೀಯ ದ್ವೇಷ ಮುಂದುವರಿದಿದ್ದು, ಇದರ ತಾಪವೀಗ ಸಿಕ್ಖ್- ಅಮೆರಿಕನ್‌ ಯುವತಿಯೊಬ್ಬಳಿಗೆ ತಟ್ಟಿದೆ. ಈಕೆಯನ್ನು ಮಧ್ಯಪೂರ್ವ ದೇಶದವಳೆಂದು ತಿಳಿದ ವ್ಯಕ್ತಿಯೊಬ್ಬ “ಲೆಬನಾನ್‌ಗೆ ವಾಪಸು ಹೋಗು. ನೀನು ಈ ದೇಶಕ್ಕೆ ಸೇರಿದವಳಲ್ಲ’ ಎಂದು ಕೂಗಿ ಅಬ್ಬರಿಸಿದ್ದಾನೆ. ಯುವತಿ ತನ್ನಷ್ಟಕ್ಕೆ ತಾನು ಫೋನಿನತ್ತ ನೋಡುತ್ತಿದ್ದಾಗ, ಅಮೆರಿಕನ್‌ ಪ್ರಜೆಯೊಬ್ಬ ಹೀಗೆ ವರ್ತಿಸಿದ್ದು, ಹುಡುಗಿ ಭೀತಿಗೊಂಡು ಕಣ್ಣೀರು ಹಾಕಿದ್ದಾಳೆ. ಯುವತಿ ತಾನು ಲೆಬನಾನ್‌ಗೆ ಸೇರಿದವಳಲ್ಲ. ನಾನು ಅಮೆರಿಕದ ಇಂಡಿಯಾನಾ ರಾಜ್ಯದ ಪ್ರಜೆ ಎಂದಿದ್ದಾಳೆ. ನ್ಯೂಯಾರ್ಕ್‌ ಟೈಮ್ಸ್‌ನ ವೆಬ್‌ಸೈಟಿನಲ್ಲಿ ಇದರ ವಿಡಿಯೋವನ್ನು “ದಿಸ್‌ ವೀಕ್‌ ಇನ್‌ ಹೇಟ್‌’ ಎಂಬ ವಿಭಾಗದಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next