Advertisement

ಕೊಚ್ಚಿಯಲ್ಲಿ ವೆನಜುವೆಲಾ ಪ್ರಜೆ ಅರೆಸ್ಟ್‌: 2.7 ಕಿಲೋ ಕೊಕೇನ್‌ ವಶ

05:16 PM Sep 01, 2018 | Team Udayavani |

ಚೆನ್ನೈ: ಇಂದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೆನಜುವೆಲಾ ಪ್ರಜೆಯನ್ನು ಮಾದಕ ದ್ರವ್ಯ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ 2.7 ಕಿಲೋ ಕೊಕೇನ್‌ ವಶಪಡಿಸಿಕೊಂಡರು. 

Advertisement

ಖಚಿತ ಮಾಹಿತಿಯ ಆಧಾರದಲ್ಲಿ ಚೆನ್ನೈ ಎನ್‌ಸಿಬಿ ವಲಯದ ಅಧಿಕಾರಿಗಳ ತಂಡ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೆನಜುವೆಲಾ ಪ್ರಜೆ ವಿಕ್ಟರ್‌ ಡೇವಿಡ್‌ ರೊಮೆರೋ ಇನ್‌ಫಾಂಟೆ ಎಂಬಾತನನ್ನು ಬಂಧಿಸಿ ಆತನ ಬಳಿ ಇದ್ದ 2.7 ಕಿಲೋ ಕೊಕೇನ್‌ ವಶಪಡಿಸಿಕೊಂಡಿತು ಎಂದು ಎನ್‌ಸಿಬಿ ವಲಯ ನಿರ್ದೇಶಕ ಎ ಬ್ರೂನೋ ಹೊರಡಿಸಿದ ಪ್ರಟನೆಯಲ್ಲಿ ತಿಳಿಸಿದ್ದಾರೆ.

ಆರೋಪಿ ವಿಕ್ಟರ್‌ ಬ್ರಝಿಲ್‌ನ ಸಾವೋ ಪಾವ್‌ಲೋ ದಿಂದ ದೋಹಾ ಮೂಲಕ ಖಾಸಗಿ ವಿಮಾನದಲ್ಲಿ ಟೂರಿಸ್ಟ್‌ ವೀಸಾದಲ್ಲಿ ಪ್ರಯಾಣಿಸಿ ಕೊಚ್ಚಿಗೆ ಆಗಮಿಸಿದ್ದ. ತಾನು ಕಳ್ಳಸಾಗಣೆ ಮಾಡಿ ತಂದಿದ್ದ ಕೊಕೇನನ್ನು ಇಲ್ಲಿ ಸಂಬಂಧಿತರಿಗೆ ತಲುಪಿಸಿ ಆತ ದೇಶ ಬಿಡುವವನಿದ್ದ ಎಂದು ತಿಳಿದು ಬಂದಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next