Advertisement
ಅಷ್ಟೇ ಅಲ್ಲ, ಆಕ್ರೋಶಭರಿತ ಚೀನವು ತೈವಾನ್ ಜಲಸಂಧಿಗೆ ಅತ್ಯಂತ ಸಮೀಪದಲ್ಲೇ ದೀರ್ಘವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿಕೊಂಡು ಸೇನಾ ಕವಾಯತನ್ನೂ ನಡೆಸುವ ಮೂಲಕ ಅಪಾಯಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಚೀನದಲ್ಲಿರುವ ಅಮೆರಿಕ ರಾಯಭಾರಿಯನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆಯನ್ನೂ ವ್ಯಕ್ತಪಡಿಸಿದೆ. ತೈವಾನ್ ವಿರುದ್ಧ ನಿರ್ಬಂಧದ ಅಸ್ತ್ರವನ್ನೂ ಪ್ರಯೋಗಿಸಿದೆ.
ಪ್ರತೀಕಾರದ ಕ್ರಮವಾಗಿ ತೈವಾನ್ ವಿರುದ್ಧ ಚೀನ ನಿರ್ಬಂಧದ ಅಸ್ತ್ರ ಪ್ರಯೋಗಿಸಿದೆ. ತೈವಾನ್‌ಗೆ ನೈಸರ್ಗಿಕ ಮರಳು ರಫ್ತು ಹಾಗೂ ಹಣ್ಣು, ಮೀನು ಮತ್ತಿತರ ಉತ್ಪನ್ನಗಳ ಆಮದನ್ನು ಸ್ಥಗಿತಗೊಳಿಸಿದೆ. ಬಿಸ್ಕಿಟ್ ಮತ್ತು ಪೇಸ್ಟ್ರಿ ರಫ್ತು ಮಾಡುವ 35 ತೈವಾನ್‌ನ ರಫ್ತುದಾರರಿಗೂ ನಿರ್ಬಂಧ ಹೇರಲಾಗಿದೆ. ಸ್ವಾತಂತ್ರ್ಯ ಪರ ಹೋರಾಟಗಾರರಿಗೆ ಬೆಂಬಲ ನೀಡುತ್ತಿರುವ 2 ಪ್ರತಿಷ್ಠಾನಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಚೀನಾ ಘೋಷಿಸಿದೆ.
Related Articles
– ಶಶಿ ತರೂರ್, ಕಾಂಗ್ರೆಸ್ ಸಂಸದ
Advertisement
ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಮತ್ತು ಅಟಲ್ ಬಿಹಾರಿ ವಾಜಪೇಯಿಯವರ ಮೂರ್ಖತನದಿಂದಾಗಿ ಟಿಬೆಟ್ ಮತ್ತು ತೈವಾನ್ ಅನ್ನು ಚೀನದ ಭಾಗವೆಂದೇ ಭಾರತೀಯರು ಪರಿಗಣಿಸುವಂತಾಯಿತು.– ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ