Advertisement

ರಾಜ್ಯದಲ್ಲಿಂದು 40741 ಜನ ಗುಣಮುಖ : 26811 ಕೋವಿಡ್ ಹೊಸ ಪ್ರಕರಣ ಪತ್ತೆ

08:43 PM May 26, 2021 | Team Udayavani |

ಬೆಂಗಳೂರು :  ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಯಾದಾಗಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹಾಗೂ ಇದರ ಜೊತೆಗೆ ಸೋಂಕಿನಿಂದ ಗುಣಮುಖರಾಗುತ್ತಿರುವರ ಸಂಖ್ಯೆ ಏರುತ್ತಲೆ ಹೋಗುತ್ತಿದೆ.

Advertisement

ಇಂದು ಸಂಜೆ ( ಮೇ.26) ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ರಾಜ್ಯದಲ್ಲಿ ಕಳೆದ 24 ಗಂಟೆಗಳ ( ದಿನಾಂಕ :25.05.2021, 00:00 ರಿಂದ 23:59ರವರೆಗೆ) ಅವಧಿಯಲ್ಲಿ 26811 ಜನರಿಗೆ ಕೋವಿಡ್ ಪಾಸಿಟಿವ್  ಸೋಂಕು ತಗುಲಿರುವುದು ದೃಢ ಪಟ್ಟಿದೆ. ಇದೆ ಅವಧಿಯಲ್ಲಿ 530 ಜನರು ಮಹಾಮಾರಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಗುಣಮುಖರಾದವರ ಸಂಖ್ಯೆ ಹೆಚ್ಚು  :

ಕಳೆದ ಕೆಲ ದಿನಗಳಿಂದ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಂದು ಕೂಡ 40741 ಜನರು ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಒಟ್ಟು 2062910 ಜನರು ಗುಣಮುಖರಾಗಿದ್ದಾರೆ.

ಜಿಲ್ಲಾವಾರು ಕೋವಿಡ್-19 ಅಂಕಿ-ಸಂಖ್ಯೆಗಳು :

Advertisement

ಬಾಗಲಕೋಟೆ-245, ಬಳ್ಳಾರಿ-796, ಬೆಳಗಾವಿ-1205, ಬೆಂಗಳೂರು ಗ್ರಾಮಾಂತರ-740, ಬೆಂಗಳೂರು ನಗರ-6433, ಬೀದರ್-61, ಚಾಮರಾಜನಗರ-425, ಚಿಕ್ಕಬಳ್ಳಾಪುರ-313, ಚಿಕ್ಕಮಗಳೂರು-585, ಚಿತ್ರದುರ್ಗ-431, ದಕ್ಷಿಣ ಕನ್ನಡ-729, ದಾವಣಗೆರೆ-1309, ಧಾರವಾಡ-853, ಗದಗ-393, ಹಾಸನ-1471, ಹಾವೇರಿ-330, ಕಲಬುರಗಿ-175, ಕೊಡಗು-296, ಕೋಲಾರ-907, ಕೊಪ್ಪಳ-491, ಮಂಡ್ಯ-805, ಮೈಸೂರು-2792, ರಾಯಚೂರು-265,  ರಾಮನಗರ-240, ಶಿವಮೊಗ್ಗ-839, ತುಮಕೂರು-1399, ಉಡುಪಿ-973, ಉತ್ತರ ಕನ್ನಡ-786, ವಿಜಯಪುರ-337, ಯಾದಗಿರಿ-187.

Advertisement

Udayavani is now on Telegram. Click here to join our channel and stay updated with the latest news.

Next