Advertisement

ರಂಗೇರಿದ ಪ್ರಚಾರ: ಅಸ್ಸಾಂ ಚುನಾವಣಾ ಅಖಾಡದಲ್ಲಿ 264 ಅಭ್ಯರ್ಥಿಗಳು ಕೋಟ್ಯಧಿಪತಿಗಳು!

03:30 PM Mar 30, 2021 | Team Udayavani |

ದಿಸ್ಪುರ್(ಅಸ್ಸಾಂ): ಮೂರು ಹಂತಗಳಲ್ಲಿ ನಡೆಯಲಿರುವ 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆ ಚುನಾವಣಾ ಅಖಾಡದಲ್ಲಿ ಅಂತಿಮವಾಗಿ 946 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇದರಲ್ಲಿ ಬರೋಬ್ಬರಿ 264 ಮಂದಿ ಕೋಟ್ಯಧಿಪತಿಗಳಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಜಾರಕಿಹೊಳಿ ಸಿಡಿ ಪ್ರಕರಣ: ನ್ಯಾಯಾಧೀಶರ ಮುಂದೆ ಹಾಜರಾದ ಯುವತಿ

ಚುನಾವಣಾ ಕಣದಲ್ಲಿರುವ ಪಶ್ಚಿಮ ಕೋಖ್ರಾಜಹಾರ್ ಕ್ಷೇತ್ರದ ಯುಪಿಪಿಎಲ್ (ಯುನೈಟೆಡ್ ಪೀಪಲ್ಸ್ ಪಾರ್ಟಿ, ಲಿಬರಲ್) ಅಭ್ಯರ್ಥಿ ಮನರಂಜನ್ ಬ್ರಹ್ಮ ಒಟ್ಟು 268 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದುವ ಮೂಲಕ ಅತೀ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ.

ನಂತರ ಉಧರ್ ಬಾಂಡ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಹುಲ್ ರಾಯ್ ಆಸ್ತಿಯ ಒಟ್ಟು ಮೌಲ್ಯ 136 ಕೋಟಿ ರೂಪಾಯಿ. ಎಐಯುಡಿಎಫ್ ನ ಜಮುನಾಮುಖ್ ಕ್ಷೇತ್ರದ ಅಭ್ಯರ್ಥಿ ಸಿರಾಜುದ್ದೀನ ಅಜ್ಮಲ್ ಆಸ್ತಿಯ ಮೌಲ್ಯ 111 ಕೋಟಿ ರೂಪಾಯಿ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.

ರಾಯ್ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ, ಮಾಜಿ ಸಚಿವ ಗೌತಮ್ ರಾಯ್ ಅವರ ಪುತ್ರ. ಗೌತಮ್ ರಾಯ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ಈ ಬಾರಿ ಕಟಿಗೋರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Advertisement

ರಾಹುಲ್ ರಾಯ್ ಹಾಗು ಪತ್ನಿ ಡೈಸಿ ರಾಯ್ ಸೇರಿದಂತೆ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಡೈಸಿ ಅಲ್ಗಾಪುರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಇಬ್ಬರ ಆಸ್ತಿಯ ಒಟ್ಟು ಮೌಲ್ಯ 131 ಕೋಟಿ ರೂಪಾಯಿ.

ಮಾಜಿ ಶಾಸಕ, ಸಂಸದ, ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಸಹೋದರ ಸಿರಾಜುದ್ದೀನ್ ಅಜ್ಮಲ್ ಜಮುನಾಮುಖ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆ ಪ್ರಕಾರ, ಕಾಂಗ್ರೆಸ್ ಪಕ್ಷದ 64 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿಯ 60 ಅಭ್ಯರ್ಥಿಗಳು ಕೋಟ್ಯಧೀಶರಾಗಿದ್ದು ಎರಡನೇ ಸ್ಥಾನದಲ್ಲಿದೆ. ನೂತನವಾಗಿ ಅಸ್ತಿತ್ವಕ್ಕೆ ಬಂದ ಅಸ್ಸಾಂ ಜತಿಯಾ ಪರಿಷತ್ ನ 31 ಅಭ್ಯರ್ಥಿಗಳು, ಅಸೋಮ್ ಗಣ ಪರಿಷತ್ ನ 22 ಮಂದಿ, ಎಐಯುಡಿಎಫ್ ನ 11, ಬಿಪಿಎಫ್ ನ ಎಂಟು, ಯುಪಿಪಿಎಲ್ ನ ಒಬ್ಬ ಅಭ್ಯರ್ಥಿ ಕೋಟ್ಯಧಿಪತಿಗಳಾಗಿದ್ದು, ಉಳಿದವರೆಲ್ಲಾ ಪಕ್ಷೇತರ ಅಭ್ಯರ್ಥಿಗಳು ಎಂದು ವಿವರಿಸಿದೆ.

ಐದು ಕೋಟಿಗೂ ಮೀರಿದ ಆದಾಯದ ಕೆಟಗರಿಯಲ್ಲಿ 72 ಅಭ್ಯರ್ಥಿಗಳಿದ್ದಾರೆ, 91 ಅಭ್ಯರ್ಥಿಗಳು ಎರಡು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ. 197 ಅಭ್ಯರ್ಥಿಗಳು 50 ಲಕ್ಷದಿಂದ 2 ಕೋಟಿ ರೂಪಾಯಿವರೆಗೆ ಆದಾಯ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next