Advertisement

ಹೊಸದಿಲ್ಲಿ: ಕಾನೂನು ಗಾಳಿಗೆ ತೂರಿ ಪಟಾಕಿ ಸಿಡಿಸಿದ 261 ಮಂದಿ ಬಂಧನ

09:39 AM Oct 29, 2019 | sudhir |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆ ದಿನದಿಂದ ದಿನಕ್ಕೆ ಕೈ ಮೀರುತ್ತಿದೆ. ಇದನ್ನು ತಡೆಗಟ್ಟಲು ದಿಲ್ಲಿ ಸರಕಾರ ಕೆಲವೊಂದು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದಿದೆ. ಪ್ರತಿ ವರ್ಷ ದೀಪಾವಳಿ ಬಳಿಕದ ತಿಂಗಳಲ್ಲಿ ದಿಲ್ಲಿ ಕಳಪೆ ವಾಯು ಸಮಸ್ಯೆಯನ್ನು ಎದುರಿಸುತ್ತದೆ. ಇದನ್ನು ನಿವಾರಿಸಲು ಸರಕಾರ ಬಿಗಿನ ಕ್ರಮಗಳನ್ನು ಕೈಗೊಂಡಿದೆ.

Advertisement

ದಿಲ್ಲಿಯಲ್ಲಿ ಪಟಾಕಿ ಬಳಕೆಗೆ ಕಾರ್ಯಸೂಚಿ ಇದೆಯಾದರೂ ಜನರು ತಮ್ಮ ಹಬ್ಬದ ಸಂಭ್ರಮದಲ್ಲಿ ಅವುಗಳನ್ನು ಮರೆತಿದ್ದಾರೆ. ಪರಿಣಾಮವಾಗಿ ಪಟಾಕಿಗಳು ಸಿಡಿಯುತ್ತಲೇ ಇದ್ದು, ಮಾಲಿನ್ಯಕಾರಕ ಹೊಗೆ ಗಾಳಿಯೊಂದಿಗೆ ಸೇರಿಕೊಂಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಮೀರಿ ಹಾನಿಕಾರಕ ಪಟಾಕಿಯನ್ನು ಸಿಡಿಸಿದ ಕಾರಣ ದಿಲ್ಲಿಯ 160 ಜನರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗಿದೆ. ಇನ್ನು ಹಸುರು ಪಟಾಕಿಯನ್ನು ದಿಲ್ಲಿಯಲ್ಲಿ ಪಟಾಕಿ ಸಿಡಿಸಲು 2 ಗಂಟೆಗಳ ಅವಧಿಯನ್ನು ಮಾತ್ರ ಸೀಮಿತಗೊಳಿಸಲಾಗಿದೆ. ಅದನ್ನು ಮೀರಿದ ಜನರ ಮೇಲೂ ಕಾನೂನು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ದಿಲ್ಲಿಯಾದ್ಯಂತ 371 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಸುಮಾರು 3,500 ಕೆ.ಜಿ. ನಿಷೇಧಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.

44 ಮಂದಿಯನ್ನು ಪಟಾಕಿ ನ್ಪೋಟಿಸಿದ ಕಾರಣ ಬಂಧಿಸಲಾಗಿದ್ದು, 56 ಜನರನ್ನು ನಿಷೇಧಿತ ಪಟಾಕಿಯನ್ನು ಸಂಗ್ರಹಿಸಿ ಮಾರಾಟ ಮಾಡಿದ ಪರಿಣಾಮ ಬಂಧಿಸಲಾಗಿದೆ. ಕಾನೂನನ್ನು ಗಾಳಿಗೆ ತೂರಿ ಪಟಾಕಿ ಸಿಡಿಸಿಲಾಗಿದೆ ಎಂದು 940 ಕರೆಗಳು ದಿಲ್ಲಿ ಪೊಲೀಸ್‌ ಸ್ಟೇಶನ್‌ಗೆ ಬಂದಿವೆ. ಪಟಾಕಿ ಸಿಡಿಸಲು ಇದ್ದ ಸಮಯವನ್ನು ಮೀರಿ ಪಟಾಕಿ ಹೊಡೆದವರ ಮೇಲೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 210 ಮಂದಿಯನ್ನು ಬಂಧಿಸಲಾಗಿದೆ. ಈ ಬಾರಿಯ ದೀಪಾವಳಿಯಲ್ಲಿ 433 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 261 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 9,758 ಕೆ.ಜಿ. ತೋಕದ ನಿಷೇಧಿತ ಪಟಾಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ದಿಲ್ಲಿಯಲ್ಲಿ ಪ್ರತಿ ವರ್ಷ ದೀಪಾವಳಿ ಸಂದರ್ಭ ವಾಯು ಗುಣಮಟ್ಟ ಕಳಪೆಯಾಗುತ್ತಾ ಹೋಗುತ್ತದೆ. ಈ ವರ್ಷ ಸರಕಾರ ಬಿಗಿ ಕಾನೂನು ಕ್ರಮವನ್ನು ಕೈಗೊಂಡಿದ್ದು, ಎಲ್ಲೂ ವಾಯು ಮಾಲಿನ್ಯಕ್ಕೆ ಅವಕಾಶ ಕೊಡಲಾಗುತ್ತಿಲ್ಲ. ಆದರೂ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಸೀಮಿತ ಅವಧಿಯನ್ನು ನೀಡಲಾಗಿದೆ.

ಈ ವರ್ಷ ದೀಪಾವಳಿಯ ಸಂದರ್ಭ ಅದು ಮುಂದುವರೆದಿದ್ದು, ಕಳೆದೆರಡು ವಾರಕ್ಕೆ ಹೋಲಿಸಿದರೆ ಈ ವಾರ ಉಸಿರಾಡುವ ಗಾಳಿ ತೀರಾ ಕಳಪೆ ಮಟ್ಟವನ್ನು ತಳೆದಿದೆ. ಆದರೆ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪರಿಸ್ಥಿತಿ ಸುಧಾರಿಸಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next