Advertisement

26,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ

12:30 AM Jan 24, 2019 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಒಂದು ದಿನಕ್ಕೆ 25,490 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿ ಯಾಗುತ್ತಿದೆ. ಆಘಾತಕಾರಿ ಸಂಗತಿಯೆಂದರೆ ಈ ಪೈಕಿ ಶೇ. 40ರಷ್ಟನ್ನು ಸಂಗ್ರಹಿಸುವುದಿಲ್ಲ. ಇವೆಲ್ಲವೂ ಕೆರೆ, ನಾಲೆಗಳು ಹಾಗೂ ಚರಂಡಿ ಗಳಲ್ಲಿ ಸಿಕ್ಕಿಕೊಂಡು ಸಮಸ್ಯೆ ಒಡ್ಡುತ್ತಿರುತ್ತವೆ. ಇವು ಮಣ್ಣು, ನೀರು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Advertisement

ದೆಹಲಿಯಲ್ಲಿ ಅತಿ ಹೆಚ್ಚು ಅಂದರೆ 689 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾದರೆ, ಚೆನ್ನೈ (429), ಕೋಲ್ಕತಾ (425), ಮುಂಬಯಿ (408) ಹಾಗೂ ಬೆಂಗಳೂರಿನಲ್ಲೂ (313) ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅಷ್ಟೇ ಅಲ್ಲ, ಮೊದಲ ಐದು ನಗರಗಳು ಒಟ್ಟು ಶೇ. 50ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಉತ್ಪಾದಿಸುತ್ತವೆ.

ಸಿಪಿಸಿಬಿ ದೇಶದ ಪ್ರಮುಖ 60 ನಗರಗಳಲ್ಲಿ ಈ ಅಧ್ಯಯನವನ್ನು ನಡೆಸಲಾಗಿದೆ. ಈ ನಗರಗಳಲ್ಲೇ ದಿನವೊಂದಕ್ಕೆ 4059 ಟನ್‌ ತ್ಯಾಜ್ಯ ಉತ್ಪಾದನೆಯಾಗಲಿದೆ. ಅಧ್ಯಯನದ ಪ್ರಕಾರ 10,376 ಟನ್‌ ಕಸವನ್ನು ಸಂಗ್ರಹಿಸದೇ ಬಿಡಲಾಗುತ್ತಿದೆ. ಒಮ್ಮೆ ಬಳಕೆ ಮಾಡುವ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಅನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಅಧ್ಯಯನ ನಡೆಸಲಾಗಿದೆ. 2022ರ ವೇಳೆಗೆ ಸಂಪೂರ್ಣವಾಗಿ ಪ್ಲಾಸ್ಟಿಕ್‌ ನಿಷೇಧ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಈ ಅಧ್ಯಯನ ಮಹತ್ವದ ಪೂರಕ ದತ್ತಾಂಶವನ್ನು ಒದಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next