Advertisement
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ವ್ಯಾಪ್ತಿಗೆ ಬರುವ ಕೆ.ಆರ್.ಪುರ, ಶಿವಾಜಿನಗರ, ಯಶವಂತಪುರ ಹಾಗೂ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಿಗೆ ಡಿ.5 ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ. ಈ ವೇಳೆ 26,233 ಯುವ ಮತದಾರು ತಮ್ಮ ಮತದಾನದ ಹಕ್ಕು ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
Related Articles
Advertisement
ಆದರೆ, ಉಳಿದ ಕ್ಷೇತ್ರಗಳ ಮೇಲೂ ಚುನಾವಣಾ ಆಯೋಗ ಗಮನಹರಿಸಲಿದೆ. ಪಕ್ಕದ ಕ್ಷೇತ್ರಗಳಿಂದ ಚುನಾವಣೆ ನಡೆಯುವ ಕ್ಷೇತ್ರಗಳ ಮತದಾರರಿಗೆ ಆಮಿಷ ಒಡ್ಡುವ ಕುರಿತು ದೂರು ಕೇಳಿಬಂದರೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಚುನಾವಣೆ ನಡೆಯುವ ಕ್ಷೇತ್ರದ ಪಕ್ಕದಲ್ಲಿರುವ ಕ್ಷೇತ್ರದ ಮದ್ಯದಂಗಡಿ, ಅಲ್ಲಿಗೆ ಸರಬರಾಜು ಮಾಡಲಾಗುತ್ತಿರುವ ಮದ್ಯ, ಬ್ಯಾಂಕ್ ಖಾತೆಗಳನ್ನು ನಗದು ಜಮಾವಣೆಯ ಬಗ್ಗೆ ನಿಗಾ ವಹಿಸುವುದಕ್ಕೆ ಸೂಚಿಸಿದೆ ಎಂದರು.
ವಿಧಾನಸಭಾ ಕ್ಷೇತ್ರವಾರು ಮತಗಟ್ಟೆ ವಿವರಕ್ಷೇತ್ರ ಒಟ್ಟು ಮತಗಟ್ಟೆ ಸಂಖ್ಯೆ ಸೂಕ್ಷ್ಮ ಮತಗಟ್ಟೆ ಸಂಖ್ಯೆ ಅತಿ ಸೂಕ್ಷ್ಮ ಮತಗಟ್ಟೆ ಸಂಖ್ಯೆ
ಕೆ.ಆರ್.ಪುರ 437 88 05
ಯಶವಂತಪುರ 461 106 15
ಮಹಾಲಕ್ಷ್ಮೀ ಲೇಔಟ್ 270 74 0
ಶಿವಾಜಿನಗರ 193 16 24
ಒಟ್ಟು 1,361 284 44 ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ
ಕ್ಷೇತ್ರ ಪುರುಷ ಮಹಿಳಾ ಇತರೆ ಒಟ್ಟು
ಕೆ.ಆರ್.ಪುರ 2,55,465 2,32,228 164 4,87,857
ಯಶವಂತಪುರ 2,48,842 2,32,066 45 4,80,953
ಮಹಾಲಕ್ಷಿ¾ ಲೇಔಟ್ 1,47,353 1,38,474 42 2,85,869
ಶಿವಾಜಿನಗರ 98,024 95,816 04 1,93,844
ಒಟ್ಟು 7,49,684 6,98,584 255 14,48,523 ಚುನಾವಣೆ ಪ್ರಕ್ರಿಯೆ
ಡಿ.5 ಮತದಾನ
ಡಿ.9 ಮತ ಎಣಿಕೆ
ಡಿ.11 ಚುನಾವಣೆ ಪ್ರಕ್ರಿಯೆ ಪೂರ್ಣ ಯಾವ ಕ್ಷೇತ್ರದಲ್ಲಿ ಎಲ್ಲಿ ಮತ ಎಣಿಕೆ?
ವಿಧಾನಸಭಾ ಕ್ಷೇತ್ರ- ಮತ ಎಣಿಕೆ ಕೇಂದ್ರ
ಕೆ.ಆರ್.ಪುರ- ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್.
ಯಶವಂತಪುರ- ಆರ್.ವಿ. ಎಂಜಿನಿಯರಿಂಗ್ ಕಾಲೇಜು, ಆರ್.ವಿ.ನಿಕೇತನ್, ಮೈಸೂರು ರಸ್ತೆ, ಕೆಂಗೇರಿ.
ಮಹಾಲಕ್ಷ್ಮಿಲೇಔಟ್-ವಿಠಲ್ ಮಲ್ಯ ರಸ್ತೆಯ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್.
ಶಿವಾಜಿನಗರ- ಅರಮನೆ ರಸ್ತೆಯ ಮೌಂಟ್ ಕಾರ್ಮಲ್ ಪಿ.ಯು ಕಾಲೇಜು. ಹೊಸ ಮತದಾರರ ವಿವರ
ಕ್ಷೇತ್ರ ಒಟ್ಟು ಅರ್ಜಿ ಅನುಮೋದಿತ ಅರ್ಜಿ ತಿರಸ್ಕರಿಸಿದ ಅರ್ಜಿ ಮತದಾರರ ಪಟ್ಟಿಗೆ ಸೇರ್ಪಡೆ ಸಂಖ್ಯೆ
ಕೆ.ಆರ್.ಪುರ 14,036 12,445 816 12,069
ಯಶವಂತಪುರ 8,481 7,606 55 7,134
ಮಹಾಲಕ್ಷ್ಮೀ ಲೇಔಟ್ 4,720 4,506 193 4,011
ಶಿವಾಜಿನಗರ 5,919 5,301 348 3,019
ಒಟ್ಟು 33,156 29,858 1,412 26,233 ಕ್ಷೇತ್ರ ಕಣದಲ್ಲಿರುವ ಅಭ್ಯರ್ಥಿಗಳು
ಕೆ.ಆರ್.ಪುರ 13
ಯಶವಂತಪುರ 12
ಮಹಾಲಕ್ಷ್ಮೀ ಲೇಔಟ್ 12
ಶಿವಾಜಿನಗರ 19
ಒಟ್ಟು 56