Advertisement
ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಶೇ. 70ರಷ್ಟು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರೇ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸ ಖಾಯಂಗೊಳ್ಳದೆ ಕಡಿಮೆ ವೇತನ, ಕೆಲಸದ ಅಭದ್ರತೆ, ಮೂಲ ಸೌಲಭ್ಯ ಕೊರತೆಯಿಂದ ಇವರು ಸಂಕಷಕ್ಕೆ ಸಿಲುಕಿದ್ದಾರೆ.ಇದರ ಬೆನ್ನಲ್ಲೇ ಸರಕಾರದ ಕದ ತಟ್ಟಿ ಕೆಲಸ ಖಾಯಂಗೊಳಿಸಬೇಕು, “ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡುವಂತೆ ನೌಕರರು ಪಟ್ಟು ಹಿಡಿದಿದ್ದಾರೆ. ನಿರ್ಲಕ್ಷಿಸಿದರೆ ಕೆಲಸಕ್ಕೆ ಸಾಮೂಹಿಕ ಗೈರಾಗಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಏಕಾಏಕಿ ಕೆಲಸ ಮೊಟಕುಗೊಳಿಸಿದರೆ ಸರಕಾರಿ ಆಸ್ಪತ್ರೆಗಳ ಸೇವೆ ಮೇಲೆ ಪರಿಣಾಮ ಬೀರಲಿದೆ.
ಬಿಜೆಪಿ ಸರಕಾರದ ಆಡಳಿತ ಅವಧಿಯಲ್ಲಿ ಕೆಲಸ ಖಾಯಂಗೊಳಿಸುವಂತೆ ಎನ್‌ಎಚ್‌ಎಂ ನೌಕರರು ಪ್ರತಿಭಟನೆ ನಡೆಸಿದ್ದ ವೇಳೆ ಹಾಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಹಾಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ಕೊಟ್ಟು ಕೆಲಸ ಖಾಯಮಾತಿಯ ಆಶ್ವಾಸನೆ ಕೊಟ್ಟಿ ದ್ದರು. ಅಧಿಕಾರಕ್ಕೆ ಬಂದ ಕೂಡಲೇ ಎಲ್ಲ ಎನ್‌ಎಚ್‌ಎಂ ನೌಕರರ ಕೆಲಸವನ್ನು ಖಾಯಂಗೊಳಿಸುವುದಾಗಿ ಪ್ರಣಾಳಿಕೆಯಲ್ಲೂ ಉಲ್ಲೇಖಿಸಲಾಗಿತ್ತು. ಆದರೆ ಇತ್ತೀಚೆಗೆ ಆರೋಗ್ಯ ಸಚಿವರು, “ಎನ್‌ಎಚ್‌ಎಂ ಕೇಂದ್ರ ಸರಕಾರದ ಯೋಜನೆಯಾಗಿದ್ದು, ಸಿಎಸ್‌ಆರ್ ನಿಯಮದಲ್ಲಿ ಅವರ ಕೆಲಸ ಖಾಯಂ ಮಾಡಲು ಅನುಮತಿ ಇಲ್ಲ. ಕೆಲವೇ ವರ್ಷಗಳಲ್ಲಿ ಯೋಜನೆ ರದ್ದಾದರೆ ಎನ್‌ಎಚ್‌ಎಂ ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ’ ಎಂದು ತಿಳಿಸಿರುವುದಾಗಿ ಆರೋಗ್ಯ ಇಲಾಖೆಯ ಗುಣಮಟ್ಟ ಭರವಸೆಯ ಜಿಲ್ಲಾ ಸಲಹೆ ಗಾರರು “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಮಣಿಪುರದಲ್ಲಿ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಕೆಲಸ ಖಾಯಂಗೊಳಿಸಲಾಗಿದೆ. ರಾಜಸ್ಥಾನ, ಒಡಿಶಾ, ಹಿಮಾಚಲ ಪ್ರದೇಶ, ಅಸ್ಸಾಂ, ಪಂಜಾಬ್, ಮಹಾರಾಷ್ಟ್ರದಲ್ಲಿ ಕೆಲಸ ಖಾಯಂಗೊಳಿಸುವ ಪ್ರಕ್ರಿಯೆ ನಡೆಯುತ್ತಿವೆ.
Advertisement
ಕರ್ನಾಟಕದ ಪ್ರತೀ ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 500-800 ಎನ್‌ಎಚ್‌ಎಂ ಸಿಬಂದಿ 15-20 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇವರ ವೇತನ 15 ಸಾವಿರ ರೂ. ದಾಟಿಲ್ಲ. ಕೇಂದ್ರದಿಂದ ಶೇ. 60 ಹಾಗೂ ರಾಜ್ಯವು ಶೇ. 40ರಷ್ಟು ನೀಡಲಾಗುತ್ತಿದೆ. ಎನ್‌ಎಚ್‌ಎಂ ಗುತ್ತಿಗೆಯಡಿ 9 ಸಾವಿರ ನರ್ಸ್‌ಗಳು, 6 ಸಾವಿರ ಕಮ್ಯೂನಿಟಿ ಹೆಲ್ತ್ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.
ಆರೋಗ್ಯ ಇಲಾಖೆಯಲ್ಲಿ 13,622 ಹುದ್ದೆ ಖಾಲಿರಾಜ್ಯದಲ್ಲಿ ಶೇ. 70ರಷ್ಟು ಎನ್‌ಎಚ್‌ಎಂ ಒಳಗುತ್ತಿಗೆ ನೌಕರರನ್ನು ನೇಮಿಸಿ ಕೊಂಡರೂ ಆರೋಗ್ಯ ಇಲಾಖೆಯ ಸರಕಾರಿ ಆಸ್ಪತ್ರೆ, ವಿಭಾಗಗಳಲ್ಲಿ 13,622 ಹುದ್ದೆ ಗಳು ಖಾಲಿಯಿವೆ. 3,636 ಪ್ರೈಮರಿ ಹೆಲ್ತ್ ಕೇರ್ ಆಫೀಸರ್, 2,849 ಹೆಲ್ತ್ ಇನ್‌ಸ್ಪೆಕ್ಟಿಂಗ್ ಆಫೀಸರ್, 2,272 ನರ್ಸ್ ಗಳು, 1,239 ಫಾರ್ಮಸಿ ಆಫೀಸರ್, 1,723 ಲ್ಯಾಬ್ ಟೆಕ್ನಿಕಲ್ ಆಫೀಸರ್, 572 ತಜ್ಞ ವೈದ್ಯರು, 914 ಜನರಲ್ ಡ್ನೂಟೀಸ್ ಮೆಡಿಕಲ್ ಆಫೀಸರ್ ಹುದ್ದೆ ಭರ್ತಿ ಯಾಗ ಬೇಕಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇವಲ 24 ಸಾವಿರ ರೂ. ಮಾಸಿಕ ವೇತನಕ್ಕೆ ಆಯುಷ್ ವೈದ್ಯರನ್ನೇ ನೇಮಿಸಲಾಗಿದೆ. ಸರಕಾರಿ ನೇಮಕಾತಿ ಪ್ರಕ್ರಿಯೆ, ಅರ್ಹತೆಯ ಆಧಾರದಲ್ಲೇ ಎನ್‌ಎಚ್‌ಎಂ ನೌಕರರನ್ನು ನೇಮಿಸಲಾಗಿದೆ. ಪ್ರತೀ ನೌಕರನಿಗೂ ಟಾಸ್ಕ್ ನೀಡ ಲಾಗಿದ್ದು, ಸರಕಾರಿ ನೌಕರರಿಗಿಂತ ಹೆಚ್ಚಿನ ಕೆಲಸ ಮಾಡಬೇಕಿದೆ. ಕೆಲಸದಲ್ಲಿ ಕೊಂಚ ಏರುಪೇ ರಾ ದರೂ ಕೆಲಸದಿಂದ ವಜಾ ಮಾಡಲಾಗುತ್ತದೆ.
– ಡಾ| ವಿನೋದ್ ಜಾಧವ್, ಸಲಹೆಗಾರ, ರಾಜ್ಯ ಎನ್‌ಎಚ್‌ಎಂ ಒಳಗುತ್ತಿಗೆ ನೌಕರರ ಸಂಘ ಬೇರೆ ರಾಜ್ಯಗಳಲ್ಲಿ ಎನ್‌ಎಚ್‌ಎಂ ನೌಕರರಿಗೆ ನೀಡಿರುವ ಸವಲತ್ತುಗಳ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸ ಲಾಗಿದೆ. ಅವರ ಕೆಲಸ ಖಾಯಂಗೊಳಿಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ನಡೆದಿಲ್ಲ.
– ಡಿ. ರಂದೀಪ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ -ಅವಿನಾಶ ಮೂಡಂಬಿಕಾನ