Advertisement

ಚಿಕ್ಕಬಳ್ಳಾಪುರಕ್ಕೆ‌ಶಾಪವಾದ ಮುಂಬೈ ನಂಜು: ಸೋಂಕಿತರ ಸಂಖ್ಯೆ 125 ಕ್ಕೆ ಏರಿಕೆ

02:54 PM May 24, 2020 | keerthan |

ಚಿಕ್ಕಬಳ್ಳಾಪುರ: ಆಂಧ್ರ ಪ್ರದೇಶದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಹಾರಾಷ್ಟ್ರ ನಂಜು ಸ್ಟೋಟಗೊಳ್ಳುತ್ತಲೇ ಇದೆ. ವಲಸೆ ಕಾರ್ಮಿಕರ ಆಗಮನದ ಬಳಿಕ ಸತತ ಮೂರನೇ ದಿನವು ಹೊಸದಾಗಿ 26 ಸೋಂಕಿತರ‌ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕೋವಿಡ್-9 ಸೋಂಕಿತರ ಸಂಖ್ಯೆ 125 ಕ್ಕೆ ಏರಿದೆ.

Advertisement

ಕಳೆದ ಶುಕ್ರವಾರ ಒಂದೇ ದಿನ 47, ಶನಿವಾರ 26 ಪ್ರಕರಣಗಳು ಕಂಡು ಬಂದಿದ್ದವು. ಇಂದು ಹೊಸದಾಗಿ 26 ಪ್ರಕರಣಗಳು ದಾಖಲಾಗಿದ್ದು ಸಂಜೆ ವರದಿಯಲ್ಲಿ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

ಮೇ 21ರ ವರೆಗೂ ಕೇವಲ 26 ಕೋವಿಡ್-19 ಪ್ರಕರಣ ಹೊಂದಿದ್ದ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಒಟ್ಟು 99 ಪ್ರಕರಣಗಳು ಹೆಚ್ಚಾಗಿವೆ.

ರಾಜ್ಯದಲ್ಲಿ ಇಂದು 97 ಹೊಸ ಪ್ರಕರಣಗಳ ಕಾರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 2056ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ634 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 42 ಜನರು ಸೋಂಕಿನ ಕಾರಣದಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next