Advertisement
– ಹೀಗೊಂದು ಗೊಂದಲ ಅನೇಕರಲ್ಲಿದೆ. ಆದರೆ, ಉಪೇಂದ್ರ ಅವರಲ್ಲಿ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರವಿದೆ. ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ, ಪಾರ್ಕಿಂಗ್ ಬಾಯ್, ಕ್ಯಾಂಟಿನ್, ಬ್ಲ್ಯಾಕ್ ಟಿಕೆಟ್ ಮಾರುವಾತ ಸೇರಿದಂತೆ ಸಿನಿಮಾಕ್ಕೆ ಸಂಬಂಧಪಟ್ಟ ಎಲ್ಲರೂ ಒಳ್ಳೆಯ ಹಣ ಮಾಡಿದಾಗ ಮಾತ್ರ ಅದು ಸಿನಿಮಾವೊಂದರ ಗೆಲುವು. ಉಪೇಂದ್ರ ಈ ಮಾತು ಹೇಳಲು ಕಾರಣ ‘ಐ ಲವ್ ಯು’ ಚಿತ್ರ. ಆರ್.ಚಂದ್ರು ನಿರ್ಮಾಣ, ನಿರ್ದೇಶನದ ‘ಐ ಲವ್ ಯು’ ಚಿತ್ರಕ್ಕೆ ಈಗ 25ರ ಸಂಭ್ರಮ. ಈ ಚಿತ್ರ ಸಿನಿಮಾದ ಎಲ್ಲಾ ವರ್ಗದವರು ಖುಷಿಯಾಗುವಂತೆ ಮಾಡಿದೆಯಂತೆ. ಇತ್ತೀಚೆಗೆ ಚಿತ್ರತಂಡ ಈ ಸಂಭ್ರಮವನ್ನು ಹಂಚಿಕೊಳ್ಳಲು ಮಾಧ್ಯಮದ ಮುಂದೆ ಬಂದಿತ್ತು. ಈ ವೇಳೆ ಉಪ್ಪಿ ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡರು. ‘ನಿರ್ಮಾಪಕ ಸಿನಿಮಾವನ್ನು ಹಂಚಿಕೆದಾರನಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವುದು ನಿಜವಾದ ಗೆಲುವಲ್ಲ. ಸಿನಿಮಾ ಬಿಡುಗಡೆಯಾಗಿ ಎಲ್ಲಾ ವಿಧಗಳಲ್ಲೂ ಯಶಸ್ಸು ಕಾಣುವುದು ನಿಜವಾದ ಗೆಲುವು. ಈ ಚಿತ್ರ ಗೆಲ್ಲುತ್ತದೆ ಎಂದು ನನಗೆ ಅಣ್ಣನ ಮಗ ನಿರಂಜನ್ ಹೇಳಿದ. ಆ ನಂತರ ವಿತರಕರಾದ ಮೋಹನ್ ದಾಸ್ ಪೈ, ಧೀರಜ್ ಕೂಡಾ ಅದೇ ಮಾತು ಹೇಳಿದರು. ನಿರ್ದೇಶಕ ಚಂದ್ರು ಅವರು ಆರಂಭದಲ್ಲಿ ಏನು ಹೇಳಿದ್ದಾರೋ ಅದರಂತೆ ಸಿನಿಮಾ ಮಾಡಿದ ಪರಿಣಾಮ ಸಿನಿಮಾ ಗೆದ್ದಿದೆ. ಇವತ್ತು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಂದೊಂದು ಸಿನಿಮಾಗಳ ಗೆಲುವು ಕೂಡಾ ಚಿತ್ರರಂಗದ ಗೆಲುವು ಇದ್ದಂತೆ’ ಎಂದರು ಉಪೇಂದ್ರ. ನಿರ್ದೇಶಕ ಕಂ ನಿರ್ಮಾಪಕ ಆರ್.ಚಂದ್ರು ಕೂಡಾ ಚಿತ್ರದ ಗೆಲುವಿನ ಬಗ್ಗೆ ಖುಷಿಪಟ್ಟರು. ಉಳಿದಂತೆ ಚಿತ್ರತಂಡದ ಸದಸ್ಯರು ಕೂಡಾ ತಮ್ಮ ಸಂಭ್ರಮ ಹಂಚಿಕೊಂಡರು. Advertisement
ಉಪ್ಪಿ ಲವ್ ಸ್ಟೋರಿಗೆ 25ರ ಸಂಭ್ರಮ
12:13 AM Jul 05, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.