Advertisement
ಅವರು ಶನಿವಾರ ಇಲ್ಲಿನ ಹಳೆಕೋಟೆ ವಾಣಿ ಪ.ಪೂ. ಕಾಲೇಜಿನ ಪಳಕಳ ಸೀತಾರಾಮ ಭಟ್ ವೇದಿಕೆಯಲ್ಲಿ ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ವತಿಯಿಂದ ನಡೆದ ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನ 25ನೇ ವರ್ಷದ ಮಕ್ಕಳ ಧ್ವನಿ- 2018 ಅನ್ನು ಉದ್ಘಾಟಿಸಿ ಮಾತನಾಡಿದರು. ಬೆಳ್ತಂಗಡಿ ಸಂಸ್ಕಾರ ಭಾರತಿ ಅಧ್ಯಕ್ಷ ರಮಾ ನಂದ ಸಾಲ್ಯಾನ್ ಅವರು ‘ರಜತಕಿರಣ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು 2017ರಲ್ಲಿ ಪುಸ್ತಕ ಪ್ರಕಟಿಸಿದ ಅವನೀ ಉಪಾಧ್ಯ ಕಾರ್ಕಳ (ಗಾಳಿಪಟ), ಮೇಘಾ ಶಿವರಾಜ್ ಕಾಸರಗೋಡು (ಒಂದು ಕ್ಷಣ ಯೋಚಿಸಿ), ಶ್ರದ್ಧಾ ಹೊಳ್ಳ ಪರಂಗೋಡು (ಸೃಷ್ಟಿಯ ಸೌಂದರ್ಯ), ಅನನ್ಯಾ ಬೆಳ್ತಂಗಡಿ (ನಾ ಕಂಡಂತೆ ನನ್ನ ಗುರುಗಳು) ಅವರಿಗೆ ಗೌರವಧನ ನೀಡಿ ಪುರಸ್ಕರಿಸಿದರು. ಸಮ್ಮಾನ
ಮಕ್ಕಳ ಸಾಹಿತ್ಯ ಸಂಗಮದ ಪೂರ್ವಾಧ್ಯಕ್ಷರಾದ ಕೂರಾಡಿ ಸದಾಶಿವ ಕಲ್ಕೂರ, ವಿ.ಮ. ಭಟ್ಟ ಅಡ್ಯನಡ್ಕ, ಇಂದಿರಾ ಹಾಲಂಬಿ, ಉಮೇಶ್ ರಾವ್ ಎಕ್ಕಾರು, ವಿ.ಬಿ. ಕುಳಮರ್ವ, ಮೋಹನ ಎಸ್. ಜೈನ್, ಜಿ.ಯು. ನಾಯಕ್, ಪ್ರೊ| ರಮೇಶ್ ಭಟ್‌ಎಸ್.ಜಿ., ಸಾವಿತ್ರಿ ಮನೋಹರ, ನೆಂಪು ನರಸಿಂಹ ಭಟ್, ನೀಲಾವರ ಸುರೇಂದ್ರ ಅಡಿಗ, ಪ್ರೊ| ಅನಂತ ಪದ್ಮನಾಭ, ಪ್ರೊ| ಜಯರಾಮ ಪೂಂಜ, ಪ್ರೊ| ಸಿ. ಉಪೇಂದ್ರ ಸೋಮಯಾಜಿ, ವಿಟ್ಠಲ ಶೆಟ್ಟಿ ಬೇಲಾಡಿ ಅವರನ್ನು ಸಮ್ಮಾನಿಸಲಾಯಿತು.ವಾಣಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ. ಸೋಮೇ ಗೌಡ, ಪೂರ್ವಾಧ್ಯಕ್ಷ ಪಿ. ಕುಶಾಲಪ್ಪ ಗೌಡ, ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ, ಮಕ್ಕಳ ಧ್ವನಿ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ರೈ ಬಾರªಡ್ಕ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಂಗಮದ ಅಧ್ಯಕ್ಷ ಬಿ. ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಮೃದುಲಾ ಸ್ವಾಗತಿಸಿ, ಸಂಗಮದ ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್ ಎಸ್.ಜಿ. ಪ್ರಸ್ತಾವಿಸಿದರು. ಉಪನ್ಯಾಸಕಿ ಅನುರಾಧಾ ಕೆ. ರಾವ್ ಸಮ್ಮಾನ ಪತ್ರ ವಾಚಿಸಿದರು. ವೇಣೂರು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಹೆಗ್ಡೆ ವಂದಿಸಿದರು. ಬೆಳ್ತಂಗಡಿ ವಾಣಿ ಪ.ಪೂ. ಕಾಲೇಜಿನ ಹಾಗೂ ಉಜಿರೆ ಎಸ್‌ಡಿಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಾದ ಹರಿಪ್ರಿಯಾ ಹಾಗು ವೈಷ್ಣವಿ ನಿರೂಪಿಸಿದರು.
Related Articles
Advertisement
ಮನೆಗಳಲ್ಲಿ ಸಾಹಿತ್ಯಿಕ ವಾತಾವರಣವಿರಲಿಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿದ್ದ ವಾಣಿ ಕಾಲೇಜಿನ ಪ್ರಜ್ಞಾ ಅವರು ಮಾತನಾಡಿ, ಮಾನವನ ಆಚಾರ-ವಿಚಾರಗಳನ್ನು ಸಾಹಿತ್ಯದ ಮೂಲಕ ಪ್ರಚಾರ ಮಾಡಿದರೆ ಮುಂದಿನ ಜನಾಂಗಕ್ಕೆ ಅನುಕೂಲ. ಗುರುಕುಲ ಪದ್ಧತಿಯ ಶಿಕ್ಷಣ ಮಾಯವಾಗಿ ಈಗ ಇಂಗ್ಲಿಷ್ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸುವ ದುರಂತ ಎದುರಾಗಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕಾರ್ಯಕ್ರಮಗಳಿಗೆ ಮಕ್ಕಳು ಬೇಕು. ಆದರೆ ನಮಗೆ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿಲ್ಲ. ಮನೆಗಳಲ್ಲಿ ಸಾಹಿತ್ಯಿಕ ವಾತಾವರಣವಿರುವಂತೆ ನೋಡಿಕೊಳ್ಳಬೇಕಾಗಿದೆ ಎಂದರು. ಸಾಹಿತ್ಯಿಕ ಪ್ರತಿಭೆ ಅನಾವರಣ
ಮಕ್ಕಳ ಧ್ವನಿ ಆರಂಭ ಮಾಡಿದ ಹಿರಿಯರ ಕಾರ್ಯ ಸ್ಮರಣೀಯ. ಇಂದಿನ ಕಾರ್ಯಕ್ರಮಕ್ಕೆ ಸಂಗಮದ ಪೂರ್ವಾಧ್ಯಕ್ಷರೆಲ್ಲರೂ ಬಂದಿರುವುದು ಇತಿಹಾಸ ನಿರ್ಮಿಸಿದೆ. ಹೆತ್ತವರು ಮಕ್ಕಳನ್ನು ವೈದ್ಯ, ಎಂಜಿನಿಯರ್, ವಕೀಲ ಇತ್ಯಾದಿ ವೃತ್ತಿಗಳಿಗೆ ಮಾತ್ರ ಪ್ರೋತ್ಸಾಹಿಸದೆ ಅವರಲ್ಲಿನ ಸಾಹಿತ್ಯಿಕ ಸುಪ್ತ ಪ್ರತಿಭೆಯನ್ನೂ ಅನಾವರಣಗೊಳ್ಳಲು ಪ್ರೇರೇಪಣೆ ನೀಡಬೇಕು.
- ಹರೀಶ ಪೂಂಜ
ಶಾಸಕರು