Advertisement

ರಾಜ್ಯದಲ್ಲಿ 257 ಹೊಸ ಕೋವಿಡ್ ಪ್ರಕರಣ ಪತ್ತೆ; ಉಡುಪಿಯಲ್ಲಿ ಒಂದೇ ದಿನ 92 ಪ್ರಕರಣ

07:54 PM Jun 04, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 257 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

ಈ ಮೂಲಕ ರಾಜ್ಯದಲ್ಲಿ ಒಟ್ಟು 4320 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾದಂತಾಗಿದೆ.

ಗುರುವಾರ ಒಂದೇ ದಿನ ಉಡುಪಿ ಜಿಲ್ಲೆಯೊಂದರಲ್ಲೇ 92 ಪ್ರಕರಣಗಳು ವರದಿಯಾಗಿದ್ದರೆ ರಾಯಚೂರಿನಲ್ಲಿ 88 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿವೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು 2651 ಸಕ್ರಿಯ ಕೋವಿಡ್ ಸೋಂಕಿನ ಪ್ರಕರಣಗಳು ಇವೆ. ಹಾಗೂ ಕಳೆದ 24 ಗಂಟೆಗಳ ಅವಧಿಯಲ್ಲಿ ಕರ್ನಾಟಕದಲ್ಲಿ 4 ಜನರು ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ ಮತ್ತು ಈ ಮೂಲಕ ನಮ್ಮಲ್ಲಿ ಇಲ್ಲಿಯವರೆಗೆ ಕೋವಿಡ್ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 57ಕ್ಕೇರಿದಂತಾಗಿದೆ.

ಇನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 13 ಜನ ಕೋವಿಡ್ ಸೋಂಕಿತರು ತೀವ್ರ ನಿಗಾ ‍ಘಟಕಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Advertisement

ಜಿಲ್ಲಾವಾರು ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಉಡುಪಿ (564) ಪ್ರಥಮ ಸ್ಥಾನದಲ್ಲಿದ್ದರೆ, ಕಲಬುರಗಿ (510) ದ್ವಿತೀಯ ಸ್ಥಾನದಲ್ಲಿದೆ. ಇನ್ನು ಒಟ್ಟು 424 ಪ್ರಕರಣಗಳೊಂದಿಗೆ ಬೆಂಗಳೂರು ನಗರ ತೃತೀಯ ಸ್ಥಾನದಲ್ಲಿದೆ. ಬಳಿಕದ ಏಳು ಸ್ಥಾನಗಳಲ್ಲಿ ರಾಯಚೂರು (356), ಮಂಡ್ಯ (317), ಯಾದಗಿರಿ (299), ಬೆಳಗಾವಿ (222), ಹಾಸನ (197), ದಾವಣಗೆರೆ (179) ಹಾಗೂ ಬೀದರ್ (175) ಜಿಲ್ಲೆಗಳಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಟ್ಟು 4 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು ಇದೀಗ ಜಿಲ್ಲೆಯಲ್ಲಿ ಒಟ್ಟು 135 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ.

ಇಂದು ಒಂದೇ ದಿನ 106 ಕೋವಿಡ್ ಸೋಂಕಿತರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮತ್ತು ಮಂಡ್ಯ ಜಿಲ್ಲೆಯೊಂದರಲ್ಲೇ 52 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 20 ಸೋಂಕಿತರು ಇಂದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11 ಸೋಂಕಿತರು ಗುಣಮುಖರಾಗಿದ್ದಾರೆ.

ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಇಂದಿನವರೆಗೆ ಒಟ್ಟು 146667 ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗಿದೆ. ಕೋವಿಡ್ ಸೋಂಕಿತರ ಸಂಪಕರ್ದಲ್ಲಿದ್ದು ಇದೀಗ ನಿಗಾವಣೆಯಲ್ಲಿ 37733 ವ್ಯಕ್ತಿಗಳಿದ್ದಾರೆ. ಇವರಲ್ಲಿ 21838 ಜನ ಪ್ರಥಮ ಸಂಪರ್ಕಿತರಾಗಿದ್ದರೆ, 15895 ಜನ ದ್ವಿತೀಯ ಸಂಪರ್ಕಿತರಾಗಿದ್ದಾರೆ.

ಇದುವರೆಗೂ ಒಟ್ಟು 347093 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಇವುಗಳಲ್ಲಿ 337154 ಮಾದರಿಗಳು ನೆಗೆಟಿವ್ ಆಗಿವೆ. ಇಂದು ಒಂದೇ ದಿನ 12268 ಮಾದರಿಗಳ ತಪಾಸಣೆ ನಡೆದಿದ್ದು 11468 ಮಾದರಿಗಳು ನೆಗೆಟಿವ್ ಆಗಿವೆ.

Advertisement

Udayavani is now on Telegram. Click here to join our channel and stay updated with the latest news.

Next