Advertisement
ರಾಜ್ಯದಲ್ಲಿ ಮೂರೂವರೆ ವರ್ಷ ಗಳಲ್ಲಿ ಒಟಿಪಿ, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಫಿಶಿಂಗ್ ವಂಚನೆಗೆ ಸಂಬಂಧಿಸಿ 254 ಕೋಟಿ ರೂ. ಸೈಬರ್ ಕಳ್ಳರ ಪಾಲಾಗಿದೆ. ಕನ್ನ ಹಾಕಿದ ಕೂಡಲೇ ಪೊಲೀಸರಿಗೆ ದೂರು ಕೊಟ್ಟರೂ ಜಪ್ತಿ ಯಾದದ್ದು ಕೇವಲ 87.7 ಕೋಟಿ ರೂ. ಮಾತ್ರ.
ಸೈಬರ್ ವಂಚನೆಯಾದ 1 ಗಂಟೆ ಗೋಲ್ಡನ್ ಅವರ್. ಈ ಅವಧಿಯಲ್ಲಿ ವಂಚನೆಗೊಳಗಾದವರು ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸ ಬಹುದು. ಹಣ ವರ್ಗಾವಣೆಯಾದ ಖಾತೆಯನ್ನು ಮುಟ್ಟುಗೋಲು ಹಾಕಿ ಸೈಬರ್ ಕಳ್ಳರ ಖಾತೆಯಿಂದ ಜಪ್ತಿ ಮಾಡಲು ಸಾಧ್ಯ. ಕೋರ್ಟ್ ಅನು ಮತಿ ಮೇರೆಗೆ ವಂಚನೆಗೊಳಗಾದ ವರಿಗೆ ಹಣ ಮರಳಿಸಲಾಗುತ್ತದೆ. ಅಂತರ್ಜಾಲ ಇಂದಿನ ಜೀವನಶೈಲಿ ಯಲ್ಲಿ ಅನಿವಾರ್ಯ ಅವಲಂಬನೆ. ಹಾಗಾಗಿ ಅಂತರ್ಜಾಲದ ಬಳಕೆದಾ
ರರ ಸಂಖ್ಯೆ ಹೆಚ್ಚು ತ್ತಿದೆ. ಅದರ ಬೆನ್ನಿಗೇ ವಂಚನೆ ಗೊಳಗಾಗುವರ ಸಂಖ್ಯೆಯೂ ಏರಿಕೆ ಯಾಗುತ್ತಿದೆ.
ಹಾಗಾಗಿ ವಿದೇಶದಲ್ಲೋ ಅಥವಾ ಉತ್ತರ ಭಾರತದಲ್ಲೋ ಕುಳಿತು ವಂಚಿಸುತ್ತಿರುವ ಸೈಬರ್ ಕಳ್ಳರಿಗೆ ಕರ್ನಾಟಕವೇ ನೆಚ್ಚಿನ ತಾಣ. ಬಹು ಮಾನ, ಉಡು ಗೊರೆ, ಡೇಟಿಂಗ್, ಸಾಲ ನೀಡಿಕೆ, ಕೌನ್ ಬನೇಗಾ ಕರೋಡ್ ಪತಿ, ಭಾರಿ ಮೊತ್ತದ ಲಾಟರಿ ಬಹುಮಾನ-ಎಂದೆಲ್ಲಾ ಆಮಿಷ ವೊಡ್ಡಿ ವಂಚನೆಗೊಳಗಾಗುತ್ತಿರುವ ಪ್ರಕರಣಗಳು ದುಪ್ಪಟ್ಟಾಗಿವೆ.
Related Articles
Advertisement
ನಾವು ಎಚ್ಚರ ವಹಿಸಬೇಕಾದದ್ದು01 ಮೊದಲಿಗೆ ಈ ಉಡುಗೊರೆ, ನಿಮ್ಮ ಮೊಬೈಲ್ ಸಂಖ್ಯೆಗೆ ಬಹು ಮಾನ, ನನಗೆ ಕಷ್ಟವಿದೆ ಸಹಾಯ ಮಾಡಿ ಎನ್ನುವಂಥ ಆಹ್ವಾನಗಳು, ಆನ್‌ಲೈನ್ ಲಾಟರಿಯಂಥ ಯಾವುದೇ ಅನಪೇಕ್ಷಿತ ಸಂದೇಶಗಳು, ಕರೆ
ಹಾಗೂ ಇಮೇಲ್‌ಗಳನ್ನು ಪ್ರತಿಕ್ರಿಯಿಸುವ ಮೂಲಕ ಪ್ರೋತ್ಸಾಹಿಸಲೇಬಾರದು.
02 ಅಕಸ್ಮಾತ್ ಯಾವುದೇ ಸಂಬಂಧದ ವ್ಯವ ಹಾರಗಳಿಗೆ ಹೊರಗಿನವರು ಒಟಿಪಿ ಕೇಳಿದರೆ ಹಂಚಿಕೊಳ್ಳಲೇಬಾರದು. ಬ್ಯಾಂಕ್‌ಗಳು ಹೇಳುವಂತೆ ಅವರ್ಯಾರೂ (ಬ್ಯಾಂಕಿನ ಸಿಬಂದಿ) ಗ್ರಾಹಕರ ಒಟಿಪಿಗಾಗಿ ಕರೆ ಮಾಡುವುದಿಲ್ಲ.
03ಇಷ್ಟೆಲ್ಲ ಆದ ಮೇಲೂ ವಂಚನೆಗೊಳಗಾದರೆ ಕೂಡಲೇ ಹತ್ತಿರದ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾಕ್ಷ್ಯಾಧಾರಗಳನ್ನು ಪತ್ತೆ ಹಚ್ಚಿ ಸೈಬರ್ ಕ್ರೈಂ ಪ್ರಕರಣವನ್ನು ಭೇದಿಸುವುದು ಸುಲಭವಲ್ಲ. ಸಾರ್ವಜನಿಕರು ಈ ಬಗ್ಗೆ ಜಾಗೃತರಾದರೆ ಸೈಬ ರ್ ಕ್ರೈಂ ತಡೆಗಟ್ಟಬಹುದು.
-ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್, ಹೆ. ಪೊಲೀಸ್ ಆಯುಕ್ತ. -ಅವಿನಾಶ್ ಮೂಡಂಬಿಕಾನ