Advertisement
ನಗರಾಭಿವೃದ್ಧಿ ಇಲಾಖೆಯು ಹಲವು ಅನಗತ್ಯ ಮತ್ತು ಪುನರಾವರ್ತಿತ ಯೋಜನೆಗಳಿವೆ ಎಂಬ ಕಾರಣಕ್ಕೆ 254 ಕೋಟಿಯಷ್ಟು ಮೊತ್ತ ಕಡಿತಗೊಳಿಸಿ, 11,715.2 ಕೋಟಿ ರೂ. ಆಯವ್ಯಯಕ್ಕೆ ಬುಧವಾರ ಅನುಮೋದನೆ ನೀಡಿದೆ. ಮೇ 7ರಂದು ಪ್ರಸ್ತಾವನೆ ಕಳುಹಿಸಲಾಗಿತ್ತು. 8ರಂದು ನಗರಾಭಿವೃದ್ಧಿ ಇಲಾಖೆ ತಲುಪಿತ್ತು. 13ರಂದು ಅನುಮೋದನೆಗೊಂಡು ಪಾಲಿಕೆಗೆ ವಾಪಸ್ ಬಂದಿದೆ. ಈ “ತ್ವರಿತ ಅನುಮೋದನೆ’ ಸ್ವತಃ ಅಧಿಕಾರಿಗಳನ್ನೂ ಹುಬ್ಬೇರಿಸುವಂತೆ ಮಾಡಿದೆ.
Related Articles
Advertisement
ಮಾಹಿತಿ ನೀಡದೆ ಬಜೆಟ್ ಪರಿಷ್ಕರಣೆ!: ಬೆಂಗಳೂರು: ಬಿಬಿಎಂಪಿಯ 2020-21ನೇ ಸಾಲಿನ ಆಯವ್ಯಯದಲ್ಲಿ ಹಲವು ಬದಲಾವಣೆಗಳಾಗಿವೆ. ಆದರೆ, ಈ ಬದಲಾವಣೆಗಳ ಬಗ್ಗೆ ಬಜೆಟ್ ಮಂಡನೆ ಮಾಡಿದ ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರಿಗೇ ಮಾಹಿತಿ ನೀಡಿಲ್ಲ! ಈ ಸಂಬಂಧ ಉದಯವಾಣಿಯೊಂದಿಗೆ ಮಾತನಾಡಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು, ಏ.20ರಂದು 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿತ್ತು.
ಸದ್ಯ ಈ ಬಜೆಟ್‌ನಲ್ಲಿ ಹಲವು ಬದಲಾವಣೆಗಳು ಮಾಡಲಾಗಿದ್ದು, ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಏನು ಬದಲಾವಣೆ ಮಾಡಲಾಗಿದೆ ಎನ್ನುವ ಬಗ್ಗೆ ಬಜೆಟ್ ಮಂಡನೆ ಮಾಡಿದ ನನಗೇ ಮಾಹಿತಿ ನೀಡದೆ ಮೇಯರ್ ಹಾಗೂ ಉಪಮೇಯರ್ ಬದಲಾವಣೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಜೆಟ್ ಮಂಡನೆ ಮಾಡುವ ವೇಳೆ ಪ್ರತಿ ಹಂತದಲ್ಲೂ ಮೇಯರ್ ಎಂ.ಗೌತಮ್‌ಕುಮಾರ್ ಅವರ ಗಮನಕ್ಕೆ ತರಲಾಗಿತ್ತು. ಈ ಸಂಬಂಧ ಮೂರು ಬಾರಿ ಮೇಯರ್ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ಆದರೆ, ಬಜೆಟ್ ಅನುಮೋದನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವ ವೇಳೆ ನನಗೆ ಮಾಹಿತಿಯೇ ನೀಡಿಲ್ಲ ಎಂದು ದೂರಿದರು.
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿದ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರು, ಬಿಬಿಎಂಪಿಯ 2020-21ನೇ ಸಾಲಿನ ಬಜೆಟ್ ಅನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದ್ದು, ಅಂದಾಜು 600 ಕೋಟಿ ರೂ. ಏರಿಕೆಯಾಗುವ ಸಾಧ್ಯತೆ ಇದೆ. ಬಜೆಟ್‌ನಲ್ಲಿ ಘೋಷಣೆ ಮಾಡಿದ ಯಾವುದೇ ಪ್ರಸ್ತಾವನೆಗಳನ್ನು ಅಥವಾ ಯೋಜನೆಗಳನ್ನು ಕೈಬಿಟ್ಟಿಲ್ಲ. ಆದರೆ, ಕಾಂಗ್ರೆಸ್ ಶಾಸಕರು ಇರುವ ವಿಧಾನಸಭಾ ಕ್ಷೇತ್ರಗಳಿಗೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಎಲ್ಲೆಲ್ಲಿ ದೂರು ಕೇಳಿ ಬಂದಿದ್ದವೂ ಅಲ್ಲಿ ಸರಿಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.