Advertisement

ಒಂದೇ ತಿಂಗಳಲ್ಲಿ 25,000 ಸರ್ಕಾರಿ ಕೆಲಸ: ಪ್ರಸ್ತಾವನೆಗೆ ಪಂಜಾಬ್‌ ಸಂಪುಟ ಅನುಮೋದನೆ

10:39 PM Mar 19, 2022 | Team Udayavani |

ಚಂಡೀಗಢ: ಪಂಜಾಬ್‌ನ ಮುಖ್ಯಮಂತ್ರಿ ಭಗವಂತ ಮಾನ್‌ ಶನಿವಾರ ತಮ್ಮ ಸಚಿವ ಸಂಪುಟಕ್ಕೆ 10 ನೂತನ ಸಚಿವರುಗಳೊಂದಿಗೆ ಮೊದಲ ಸಭೆ ನಡೆಸಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 25,000 ಕೆಲಸ ಸೃಷ್ಟಿಸಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Advertisement

ಪಂಜಾಬ್‌ ಪೊಲೀಸ್‌ ಇಲಾಖೆಯಲ್ಲಿ 10,000 ಕೆಲಸ ಮತ್ತು ಇತರೆ ಇಲಾಖೆಗಳಲ್ಲಿ ಒಟ್ಟು 15,000 ಕೆಲಸ ಸೃಷ್ಟಿಸಲು ಉದ್ದೇಶಿಸಲಾಗಿದೆ. ಒಂದು ತಿಂಗಳೊಳಗೆ ನೇಮಕಾತಿಯ ಬಗ್ಗೆ ಸೂಚನೆ ಹೊರಡಿಸಲು ಆದೇಶಿಸಲಾಗಿದೆ.

ಪ್ರಮಾಣ ವಚನ ಸ್ವೀಕಾರ: ಮುಖ್ಯಮಂತ್ರಿ ಸೇರಿ 18 ಸಚಿವ ಸ್ಥಾನವಿರುವ ಪಂಜಾಬ್‌ ವಿಧಾನಸಭೆಗೆ 10 ಸಚಿವರನ್ನು ಆಯ್ಕೆ ಮಾಡಲಾಗಿದ್ದು, ಅವರೆಲ್ಲರು ಶನಿವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟದಲ್ಲಿ ಇಬ್ಬರು ಸಚಿವರು ಮಾತ್ರವೇ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದವರಾಗಿದ್ದಾರೆ. ಉಳಿದವರೆಲ್ಲರೂ ಮೊದಲನೇ ಬಾರಿ ಶಾಸಕರಾಗಿ ಚುನಾಯಿತರಾದವರು. ಸಂಪುಟದಲ್ಲಿ ಓರ್ವ ಮಹಿಳಾ ನಾಯಕಿಗೆ ಸಚಿವ ಸ್ಥಾನ ಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next