Advertisement
ಏನಿದು ಸ್ಮಾರ್ಟ್‌ಕಾರ್ಡ್?ಸ್ಮಾರ್ಟ್‌ಕಾರ್ಡ್ ಅಂದರೆ ನಗದು ರಹಿತ ಪ್ರಯಾಣಕ್ಕೆ ಅವಕಾಶ ಎಂಬುದು ತಾತ್ಪರ್ಯ. ಇದು ಸಂಪೂರ್ಣ ಡಿಜಿಟಲ್. ಸದ್ಯ ಸಿಟಿ ಬಸ್‌ನ ಎಲ್ಲ ನಿರ್ವಾಹಕರಲ್ಲಿ “ಇಟಿಎಂ’ ಟಿಕೆಟ್ ಮೆಶಿನ್ ಇದೆ. ಈ ಕಾರ್ಡ್ ಪಡೆದವರು ನಿಗದಿತವಾಗಿ ರೀಚಾರ್ಜ್ ಮಾಡಿಕೊಂಡು ಬಸ್‌ನಲ್ಲಿ ಪ್ರಯಾಣಿಸು ವಾಗ ಕಾರ್ಡ್ ಸ್ವೆ„ಪ್ ಮಾಡಬೇಕು. ಆಗ ಪ್ರಯಾಣ ದರವು ಪ್ರಯಾಣಿಕನ ಕಾರ್ಡ್ ನಿಂದ ಕಡಿತವಾಗುತ್ತದೆ. ನಗರದ ಎಲ್ಲ ಸಿಟಿ ಬಸ್‌ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು “ಚಲೋ’ ಸಂಸ್ಥೆಯ ಸಹಯೋಗದೊಂದಿಗೆ ಸಿಟಿ ಬಸ್ ಮಾಲಕರ ಸಂಘ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ.
ಸ್ಮಾರ್ಟ್‌ಕಾರ್ಡ್ ಪಡೆಯಲು ಪ್ರಯಾ ಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ಕಂಡಕ್ಟರ್ ಅವರಲ್ಲಿ ಈ ಕಾರ್ಡ್ ಉಚಿತವಾಗಿ ಪಡೆಯಬಹುದು ಹಾಗೂ ಅವರ ಬಳಿಯೇ ಹಣ ಕೊಟ್ಟು ರೀಚಾರ್ಜ್ ಕೂಡ ಮಾಡಿಸಬಹುದು. ಜತೆಗೆ ನಗರದಲ್ಲಿ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಸಹಿತ ವಿವಿಧ ಕಡೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. 10,000ಕ್ಕೂ ಅಧಿಕ ಕಾರ್ಡ್ ಗಳನ್ನು ಪ್ರಯಾಣಿಕರಿಗೆ ನೀಡಲು ಉದ್ದೇಶಿಸಲಾಗಿದೆ. ಉತ್ತಮ ಸ್ಪಂದನೆ
ಸ್ಮಾರ್ಟ್ ಕಾರ್ಡ್’ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಪ್ರಯಾಣಿಕರು ಕಾರ್ಡ್ ಪಡೆಯಲು ಉತ್ಸುಕತೆ ತೋರುತ್ತಿದ್ದಾರೆ. ಬಸ್‌ನಲ್ಲಿ ಕಂಡಕ್ಟರ್ ಮೂಲಕವೇ ಇದೀಗ ಕಾರ್ಡ್ ವಿತರಿಸಲಾಗುತ್ತಿದೆ. ಜತೆಗೆ ರೀಚಾರ್ಜ್ ಕೂಡ ಅವರಿಂದಲೇ ಮಾಡಲಾಗುತ್ತದೆ.
- ದಿಲ್‌ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ