Advertisement

ಖಾಸಗಿ ಪ್ರಯೋಗಾಲಯಗಳಲ್ಲಿ 2,500 ರೂ. ನಿಗದಿ

10:09 AM Jun 20, 2020 | Suhan S |

ಮುಂಬಯಿ, ಜೂ. 19: ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಕೊರೊನಾ ಪರೀಕ್ಷೆಗಳಿಗೆ ರಾಜ್ಯ ಸರಕಾರ 2,200 ರೂ. ಮತ್ತು 2,800 ರೂ. ನಿಗದಿ ಪಡಿಸಿತ್ತು. ಆದರೆ ರೋಗಿ ಸ್ವತಃ ಪರೀಕ್ಷೆಗಾಗಿ ನೇರ ಪ್ರಯೋಗಾಲಯಕ್ಕೆ ಹೋಗುವವರಿಂದ ಪ್ರಯೋಗಾಲಯವು 2800 ರೂ. ತೆಗೆದುಕೊಳ್ಳುವ ಬದಲು 2,500 ರೂ. ಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಟೋಪೆ ಹೇಳಿದ್ದಾರೆ.

Advertisement

ರಾಜ್ಯ ಸರಕಾರ ಕೆಲವು ದಿನಗಳ ಹಿಂದೆ ಕೋವಿಡ್ ಪರೀಕ್ಷೆಗಳ ದರವನ್ನು ನಿಗದಿಪಡಿಸಿತ್ತು. ಪ್ರಯೋಗಾಲಯ, ಆಸ್ಪತ್ರೆಯಿಂದ ರೋಗಿಯ ಸ್ವ್ಯಾಬ್‌ ತೆಗೆದುಕೊಳ್ಳಲು 2,200 ರೂ. ಮತ್ತು ರೋಗಿಯ ಮನೆಗೆ ಹೋಗಿ ಪರೀಕ್ಷೆಗೆ ಸ್ವ್ಯಾಬ್‌ ತೆಗೆದುಕೊಳ್ಳಲು 2,500 ರೂ. ಪಡೆಯುವಂತೆ ದರ ನಿಗದಿ ಪಡಿಸಿತ್ತು. ಆದರೆ ಕೆಲವು ಸಂದರ್ಭಗಳಲ್ಲಿ, ರೋಗಿಗಳು ಸ್ವತಃ ಪರೀಕ್ಷೆಗಾಗಿ ನೇರ ಪ್ರಯೋಗಾಲಯಕ್ಕೆ ಹೋಗುತ್ತಾರೆ. ಪ್ರಯೋಗಾಲವು ಪರೀಕ್ಷೆಗಾಗಿ ಅವರಿಂದ 2,800 ರೂ. ಪಡೆಯುತ್ತದೆ. ವಾಸ್ತವಿಕವಾಗಿ ರೋಗಿಯು ಸ್ವತಃ ನೇರ ಹೋಗುವುದರಿಂದ ಪ್ರಯೋಗಾಲಯಕ್ಕೆ ಪಿಪಿಇ ಕಿಟ್‌ನ ವೆಚ್ಚ ಮತ್ತು ಸಾರಿಗೆ ವೆಚ್ಚ ಬರುವುದಿಲ್ಲ. ಆ ಸಂದರ್ಭದಲ್ಲಿ ಪ್ರಯೋಗಾಲಯವು ರೋಗಿಗಳಿಂದ 2,500 ರೂ.ಗಳನ್ನು ಪಡೆಯಬೇಕು ಎಂದು ನಿರ್ಧರಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರವು ರೂ . 2,200ರಿಂದ 2,800 ರೂ.ಗಳ ನಡುವೆ ಒಂದು ಹಂತವಾಗಿ 2,500 ರೂಗಳನ್ನು ನಿಗದಿಪಡಿಸಿದೆ ಎಂದು ರಾಜೇಶ್‌ ಟೋಪೆ ಮಾಹಿತಿ ನೀಡಿದ್ದಾರೆ.

ಮುಂಬಯಿ ಜನತೆಗೆ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್‌ ಲಭ್ಯವಾಗಲಿದೆ. ಪ್ರತಿ ವಾರ್ಡ್ ನಲ್ಲಿ ಆ್ಯಂಬುಲೆನ್ಸ್‌ಗಳು ಲಭ್ಯವಾಗುವಂತೆ ಪ್ರಯತ್ನಿಸಲಾಗುತ್ತಿದೆ. ಪ್ರಸ್ತುತ 500 ಆ್ಯಂಬುಲೆನ್ಸ್ ಗಳು ಲಭ್ಯವಿದ್ದು, ಮಹೀಂದ್ರಾ ಗ್ರೂಪ್‌ನಿಂದ 50 ಆ್ಯಂಬುಲೆನ್ಸ್‌ಗಳನ್ನು ಖರೀದಿಸಲಾಗಿದ್ದು, ಈ ವಾರದಲ್ಲಿ 150 ಆ್ಯಂಬುಲೆನ್ಸ್‌ಗಳು ಲಭ್ಯವಾಗಲಿವೆ. ಇದರ ಜತೆಗೆ ಮುಂಬಯಿ ಜನರ ಆರೋಗ್ಯ ಸೌಲಭ್ಯಕ್ಕೆ 650 ಆ್ಯಂಬುಲೆನ್‌ Õಗಳು ಲಭ್ಯವಿರುತ್ತವೆ. ನಾಗರಿಕರು ವಾರ್ಡ್ ನಲ್ಲಿರುವ ವಾರ್‌ ಕೊಠಡಿಯನ್ನು ಸಂಪರ್ಕಿಸಿ ಆ್ಯಂಬ್ಯುಲೆನ್ಸ್ ನೋಂದಾಯಿಸಿಕೊಳ್ಳಬೇಕು. ಈ ಸೇವೆ ನಾಗರಿಕರಿಗೆ ಉಚಿತವಾಗಿ ಲಭ್ಯವಿರುತ್ತದೆ ಎಂದು ಆರೋಗ್ಯ ಸಚಿವ ಟೋಪೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next