Advertisement

ಮಾಸ್ಕ್  ಧರಿಸದಿದ್ದರೆ 250 ರೂ. ದಂಡ ಗ್ಯಾರಂಟಿ

08:09 PM Mar 26, 2021 | Team Udayavani |

ದಾವಣಗೆರೆ: ನಾಗರಿಕರೇ, ಮನೆಯಿಂದ ಹೊರಗೆ ಹೋಗುವಾಗ ಮರೆಯದೇ ಮಾಸ್ಕ್ ಧರಿಸಿಕೊಂಡು ಹೋಗಿ. ಇಲ್ಲದಿದ್ದರೆ ಕಂಡ ಕಂಡಲ್ಲಿ ನಿಂತಿರುವ ಪೊಲೀಸರು, ಅಧಿಕಾರಿಗಳು ನಿಮ್ಮಿಂದ 250ರೂ. ದಂಡ ವಸೂಲಿ ಮಾಡುತ್ತಾರೆ!

Advertisement

ಹೌದು, ಕೋವಿಡ್ ವೈರಸ್‌ ವ್ಯಾಪಕವಾಗಿ ಹರಡುವುದನ್ನು ತಪ್ಪಿಸಲು ಜಿಲ್ಲಾಡಳಿತ, ಮಾಸ್ಕ್ ಕಡ್ಡಾಯಗೊಳಿಸಿದ್ದು ಧರಿಸದೇ ಇರುವವರಿಗೆ ದಂಡ ವಿಧಿಸಲು ಪೊಲೀಸ್‌ ಹಾಗೂ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಆದೇಶದಂತೆ ಅಧಿಕಾರಿಗಳ ತಂಡ ಈಗ ಬೀದಿಗೆ ಇಳಿದಿದ್ದು, ದಂಡ ವಸೂಲಿ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಪೊಲೀಸರು ಪ್ರತಿಯೊಂದು ರಸ್ತೆಗಳಲ್ಲಿಯೂ ನಿಂತು ಮಾಸ್ಕ್ ಹಾಕದೇ ಇರುವ ಸಾರ್ವಜನಿಕರಿಂದ 250 ರೂ. ವಸೂಲಿ ಮಾಡುತ್ತಿದ್ದರೆ, ಇತ್ತ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಹ ಮಾರುಕಟ್ಟೆ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಪಿಂಗ್‌ ಮಾಲ್‌ ಸೇರಿದಂತೆ ವಿವಿಧ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.

ಜಿಲ್ಲಾ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳೂ ಸಹ ದಂಡ ವಸೂಲಿ ಕ್ರಮಕ್ಕೆ ಮುಂದಾಗಿದ್ದು ರಸ್ತೆ, ಅಂಗಡಿ ಮುಂಗಟ್ಟು ಎಲ್ಲೆಡೆ ದಂಡ ವಸೂಲಿ ಜೋರಾಗಿರುವುದು ಕಂಡು ಬರುತ್ತಿದೆ. ದಂಡಕ್ಕೂ ಗುರಿ: ಕೋವಿಡ್‌ ಹರಡುವುದನ್ನು ತಡೆಯಲು ಮಾಸ್ಕ್ ಧರಿಸದವರನ್ನು ಪತ್ತೆ ಹಚ್ಚಿ ದಂಡ ವಿಧಿಸಲು ಸಹ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿದ್ದಾರೆ. ಪ್ರತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಿತ್ಯ 100 ಜನ ಮಾಸ್ಕ್ ರಹಿತರನ್ನು ಪತ್ತೆಹಚ್ಚಿ ದಂಡ ವಿಧಿಸಲು ಗುರಿ ನಿಗದಿಪಡಿಸಿದ್ದಾರೆ. ಅದೇ ರೀತಿ ಪ್ರತಿ ವಾರ್ಡ್‌ಗೆ 10, ಪಟ್ಟಣ ಪ್ರದೇಶದಲ್ಲಿ ನಿತ್ಯ 100, ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಕಾರಣದಿಂದಾಗಿ ಈಗ ಜಿಲ್ಲೆಯಾದ್ಯಂತ ದಂಡ ವಸೂಲಿ ಜೋರಾಗಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next