Advertisement

25 ಮಂದಿ ಬಂಧನ, ಹಲವು ವಾಹನ ವಶ

07:40 AM Apr 17, 2018 | |

ಕಾಸರಗೋಡು: ಜಮ್ಮು-ಕಾಶ್ಮೀರ ಕಥುವಾದಲ್ಲಿ 8ರ ಬಾಲಕಿಯ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಪ್ರತಿಭಟಿಸಿ ಸೋಮವಾರ ಹರತಾಳ ಎಂಬ ರೀತಿಯಲ್ಲಿ ನಕಲಿ ಪ್ರಚಾರ ಮಾಡಿದ 25 ಮಂದಿಯನ್ನು ಬಂಧಿಸಿದ್ದಾಗಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ.ಸೈಮನ್‌ ಹೇಳಿದ್ದಾರೆ. 

Advertisement

ಹರತಾಳ ಆಹ್ವಾನಿಸಿದವರು ಹಿಂಸೆಯಲ್ಲಿ ತೊಡಗಿದಾಗ ಅವ‌ರ ಬೈಕ್‌ಗಳನ್ನು ಮತ್ತು ರಿಕ್ಷಾಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

ಸೋಮವಾರ ಕೇರಳ ಸ್ತಬ್ಧ ಗೊಳ್ಳಲಿದೆ ಎಂದೂ ರವಿವಾರ ರಾತ್ರಿ 12 ರಿಂದ ಸೋಮವಾರ ರಾತ್ರಿ 12 ಗಂಟೆಯ ವರೆಗೆ ಹರತಾಳ ಎಂದೂ ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಂದೇಶ ರವಾನಿಸಿದ್ದರು. ಕೆಲವರು ವಾಯಸ್‌ ಸಂದೇಶದಲ್ಲೂ ಹರತಾಳಕ್ಕೆ ಆಹ್ವಾನ ನೀಡಿದ್ದರು. ಇಂತಹ ಕಿಡಿಗೇಡಿಗಳು ಬಂಧಿತರಲ್ಲಿ ಒಳಗೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳ, ಸಂಘಟನೆಗಳ ಬೆಂಬಲವಿಲ್ಲದೆ ಜನಪರ ಹರತಾಳಕ್ಕೆ ಸಹಕರಿಸಬೇಕೆಂದು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹರಿಯಬಿಟ್ಟು ಸಾಮಾಜಿಕ ಜಾಲ ತಾಣದ ಶಕ್ತಿಯನ್ನು ಪ್ರದರ್ಶಿಸಬೇಕೆಂದು ನಕಲಿ ಸಂದೇಶದಲ್ಲಿ ಹೇಳಲಾಗಿದೆ. 

ಈ ಸಂದೇಶ ನಕಲಿ ಎಂದು ಅರಿಯದೆ ಹಲವರು ಫೇಸ್‌ಬುಕ್‌ನಲ್ಲೂ, ವಾಟ್ಸಫ್‌ನಲ್ಲೂ ಪ್ರಚಾರ ಮಾಡಿದ್ದಾರೆ. ಈ ನಕಲಿ ಸಂದೇಶವನ್ನು ಸೃಷ್ಟಿಸಿದ ನಾಲ್ವರನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ರವಿವಾರ ರಾತ್ರಿ 10.05 ಗಂಟೆಗೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಉಪ್ಪಳ ಕುಕ್ಕಾರಿನ ಜನಪ್ರಿಯ ಬಸ್‌ ತಂಗುದಾಣ ಪರಿಸರದಲ್ಲಿ ನಾಲ್ವರ ತಂಡ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಈ ನಾಲ್ವರು ಸಿಸಿಟಿವಿ ಕೆಮರಾದಲ್ಲಿ ದಾಖಲಾಗಿದ್ದಾÃ ಇವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಕಾಸರಗೋಡಿನಲ್ಲಿ ಪೊಲೀಸ್‌ ಬೆಂಗಾವಲಿನೊಂದಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಹಿತ ಖಾಸಗಿ ವಾಹನಗಳು ಓಡಾಡಿವೆ. ಕೆಲವು ಅಂಗಡಿ, ಹೊಟೇಲ್‌ಗ‌ಳು ತೆರೆದಿವೆ. ಅಘೋಷಿತ ಹರತಾಳಕ್ಕೆ ಅನುಮತಿ ನೀಡಲಾಗದು ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಸಂದೇಶಗಳನ್ನು ರವಾನಿಸಿ ಹರತಾಳ ನಡೆಲು ಅವಕಾಶ ನೀಡದು. ಫೇಸ್‌ಬುಕ್‌, ವಾಟ್ಸಫ್‌ಗಳನ್ನು ವೀಕ್ಷಿಸುತ್ತಿ ದ್ದೇವೆಂದು  ಪೊಲೀಸರು ತಿಳಿಸಿದ್ದಾರೆ. ಕಾಸರಗೋಡಿನಲ್ಲಿ ಹರತಾಳ  ಇಲ್ಲ ಎಂದು ಡಿವೈಎಸ್‌ಪಿ ಸುಕುಮಾರನ್‌ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next