Advertisement

ರಾಯಗಢ ಕಟ್ಟಡ ಕುಸಿತ: 25 ಜನರ ರಕ್ಷಣೆ ; ಇನ್ನೂ 50 ಜನ ಸಂಕಷ್ಟದಲ್ಲಿ

12:21 AM Aug 25, 2020 | Hari Prasad |

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ 5 ಮಹಡಿಯ ಕಟ್ಟಡ ಕುಸಿದ ಘಟನೆ ಸಂಭವಿಸಿದೆ.

Advertisement

ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಕನಿಷ್ಟ 50 ಜನರು ಸಿಲುಕಿರಬಹುದೆಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಮುಂಬಯಿಯಿಂದ ಸುಮಾರು 170 ಕಿಲೋಮೀಟರ್ ದೂರದಲ್ಲಿರುವ ರಾಯಗಢ ಜಿಲ್ಲೆಯಲ್ಲಿನ ಮಹಾಡ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

‘ತಾರಿಖ್ ಗಾರ್ಡನ್’ ಎಂಬ ಈ ಕಟ್ಟಡ ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಕುಸಿದು ಬಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯದ ಮಾಹಿತಿಯಂತೆ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.

ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮಹಾಡ್, ಶ್ರಿವರ್ಧನ್ ಮತ್ತು ಮನ ಗಾಂವ್ ವಿಭಾಗಗಳಿಂದ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡರು.

Advertisement

ಕುಸಿದುಬಿದ್ದಿರುವ ಅವಶೇಷಗಳಿಡಿಯಿಂದ ಈಗಾಗಲೇ 25 ಜನರನ್ನು ರಕ್ಷಿಸಲಾಗಿದೆ.

10 ವರ್ಷಗಳಿಗೂ ಹಳೆಯದಾಗಿರುವ ಈ ಬಹುಮಹಡಿ ಕಟ್ಟಡದಲ್ಲಿ 40 ಅಪಾರ್ಟ್ ಮೆಂಟ್ ಗಳಿದ್ದವು. ಮೊದಲ ಮೂರು ಮಹಡಿಗಳು ಕುಸಿಯತೊಡಗುತ್ತಿದ್ದಂತೆಯೇ ಕೆಲವರು ಕಟ್ಟಡದಿಂದ ಹೊರಗೆ ಓಡಿ ಬಂದು ತಮ್ಮ ಪ್ರಾಣಗಳನ್ನು ಉಳಿಸಿಕೊಂಡರು.

ಇದೀಗ NDRF ತಂಡವೂ ಸಹ ರಕ್ಷಣಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಎಂದು ರಾಯ್ ಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next