Advertisement

ಶರಣ ಸಂಸ್ಥಾನದಿಂದ 25 ಲಕ್ಷ ರೂ. ದೇಣಿಗೆ; ಡಾ|ಶರಣಬಸವಪ್ಪ ಅಪ್ಪ

03:04 PM Jan 16, 2021 | Team Udayavani |

ಕಲಬುರಗಿ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ಭವ್ಯ ಮಂದಿರದ ನಿ ರ್ಮಾಣಕ್ಕೆ ಶರಣಬಸವೇಶ್ವರ ಸಂಸ್ಥಾನದ ಪೀಠಾಧ್ಯಕ್ಷರು, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿ ಪತಿಗಳಾದ ಮಹಾದಾಸೋಹಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರು 25 ಲಕ್ಷ ರೂ. ದೇಣಿಗೆ ಘೋಷಿಸಿದರು. ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ನಿಧಿ ಸಮರ್ಪಣ ಅಭಿಯಾನದ ಕರ್ನಾಟಕ ರಾಜ್ಯ ಮಾರ್ಗದರ್ಶಕ ಮಂಡಳಿಯ ಪ್ರಮುಖರೂ ಆದ ಪೂಜ್ಯ ಅಪ್ಪ ಅವರು, ಶುಕ್ರವಾರ ನಗರದ ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದಲ್ಲಿ ಶ್ರೀರಾಮಜನ್ಮ ಭೂಮಿ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಿ, ದೇಣಿಗೆ ರಸೀದಿ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರ ಅತ್ಯಾಧುನಿಕ ಶಿಲ್ಪಕಲೆಯಾಗಲಿದೆ. ಶರಬಸವೇಶ್ವರರು ಸರ್ವದರಲ್ಲಿ ದಾಸೋಹ ಕಾರ್ಯಕೈಗೊಂಡವರು. ಶರಣಬಸವೇಶ್ವರ ಸಂಸ್ಥಾನದಿಂದ ಪ್ರವಾಹ ಮತ್ತು ಕೊರೊನಾ ಸಂದರ್ಭದಲ್ಲಿ ಸರ್ಕಾರಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಲಾಗಿತ್ತು. ಈಗಲೂ ಸಂಸ್ಥಾನದ ವತಿಯಿಂದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ 25 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ತಿಳಿಸಿದರು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯು ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣದಲ್ಲಿಯ ಶ್ರೇಷ್ಠ ವ್ಯಕ್ತಿಯಾದ ರಾಮ ಜನ್ಮ ತಾಳಿದ ಭೂಮಿ ಎಂಬ ಹೆಗ್ಗಳಿಕೆಯ ಸಂಕೇತವಾಗಿದೆ. ಅಯೋಧ್ಯೆಯು ಪ್ರಾಚೀನ ನಗರಗಳಲೊಂದಾಗಿದೆ. ಇದು ಭಾರತದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಎಂದೂ ಪುರಾಣಗಳಲ್ಲಿ ಉಲ್ಲೇಖೀಸಲಾಗಿದೆ.

ರಾಮ ಮಂದಿರ ನಿರ್ಮಾಣವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ಧರ್ಮದ ಶಾಶ್ವತ ಭಕ್ತಿಯ ಸಂಕೇತವಾಗಿದೆ. ಮಂದಿರ ನಿರ್ಮಾಣಕ್ಕೆ ನಿಧಿ
ಸಮರ್ಪಿಸುವುದರ ಜತೆಗೆ ಈ ನಿಧಿ ಸಮರ್ಪಣ ಅಭಿಯಾನ ಮಹತ್ಕಾರ್ಯಕ್ಕೆ ಚಾಲನೆ ನೀಡಿರುವುದು ಖುಷಿ ತಂದಿದೆ ಎಂದರು.

ರಾಮ ಮಂದಿರ ನಿರ್ಮಾಣವಾದ ಮೇಲೆ ಕೇವಲ ಅಯೋಧ್ಯೆ ಅಷ್ಟೆ ಅಲ್ಲ ದೇಶದ ಎಲ್ಲ ಆಯಾಮಗಳಲ್ಲೂ ಹೊಸ ಸ್ಫೂರ್ತಿ ಹಾಗೂ ಅವಕಾಶಗಳನ್ನು ತೆರೆದಂತಾಗುತ್ತದೆ. ಪ್ರಪಂಚಾದಂತ್ಯದ ಜನರು ಮತ್ತು ಭಕ್ತ ಸಮೂಹ ಶ್ರೀರಾಮನ ದರ್ಶನಕ್ಕಾಗಿ ಭಾರತಕ್ಕೆ ಆಗಮಿಸುವದರಿಂದ ದೇಶದ ಪವಿತ್ರ ಯಾತ್ರಾ ಸ್ಥಳಗಳ ಮಹತ್ವ ಇನ್ನೂ ಇಮ್ಮಡಿಸುತ್ತದೆ. ಎಲ್ಲರೂ ಮುಕ್ತ ಮನಸ್ಸಿನಿಂದ ದೇಣಿಗೆ ಸಮರ್ಪಣ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

Advertisement

ಆರ್‌ಎಸ್‌ಎಸ್‌ ಪ್ರಮುಖ ಕೃಷ್ಣಜೋಷಿ ಮಾತನಾಡಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಯೋಜನೆಯ ಅನ್ವಯ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆ ಮತ್ತು ತನ್ನ ಸಂಪೂರ್ಣ ಸಹಯೋಗ ನೀಡಲು ವಿಶ್ವ ಹಿಂದೂ ಪರಿಷತ್‌ ನಿರ್ಧರಿಸಿದೆ. ರಾಜ್ಯದಲ್ಲಿ 27,500 ಹಳ್ಳಿಗಳನ್ನು, ಸುಮಾರು 90 ಲಕ್ಷ ರಾಮ ಭಕ್ತರನ್ನು ತಲುಪುವ ಹಾಗೂ ರಾಮಮಂದಿರಕ್ಕೆ ಧನ ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದರು.

ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ರಾಮಜನ್ಮಭೂಮಿ ಟ್ರಸ್ಟ್‌ನ ವಿಶ್ವಸ್ಥರಲ್ಲಿ ಒಬ್ಬರಾಗಿದ್ದಾರೆ. 10 ರೂ. 100 ರೂ. 1,000 ರೂ. ಮುದ್ರಿತ ಕೂಪನ್‌ಗಳ ಸಹಾಯದಿಂದ ಧನ ಸಂಗ್ರಹಣೆ ನಡೆಯಲಿದೆ. 2,000 ರೂ.ಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ
ನೀಡಲಾಗುವದು. ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್‌ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದಾಗಿದೆ ಎಂದೂ ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್‌ ಮಾತೋಶ್ರೀ ಡಾ| ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ನಿಧಿ ಸಮರ್ಪಣೆಯ ಕರ್ನಾಟಕ ರಾಜ್ಯದ ಮಾರ್ಗದರ್ಶಕ ಮಂಡಳಿಯ ಗೊಬ್ಬರವಾಡಿಯ ಸದ್ಗುರು ಸೇವಾಲಾಲ್‌ ಗುರುಪೀಠದ ಬಳಿರಾಮ ಮಹಾರಾಜರು, ನಿವೃತ್ತ ಆರೋಗ್ಯ ಅಧಿಕಾರಿ ಡಾ| ಮಲ್ಲಿಕಾರ್ಜುನ ಮುಕ್ಕಾ, ಶರಣಬಸವ ವಿವಿಯ ಕುಲಸಚಿವ ಡಾ| ಅನಿಲ್‌ಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರಿ, ಡೀನ್‌ ಲಕ್ಷ್ಮೀಪಾಟೀಲ್‌ ಮಾಕಾ, ಸಂಸದ ಡಾ| ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ, ಇನ್‌ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್‌ ತೇಲ್ಕೂರ, ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್‌ ಸದಸ್ಯರಾದ ಶಶೀಲ್‌ ನಮೋಶಿ, ಬಿ.ಜಿ.ಪಾಟೀಲ್‌, ಕುಡಾ ಅಧ್ಯಕ್ಷ ದಯಾಘನ್‌ ಧಾರವಾಡಕರ್‌, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌, ವಿಎಚ್‌ಪಿ ಜಿಲ್ಲಾಧ್ಯಕ್ಷ ಸುಭಾಷ ಕಾಂಬಳೆ, ಸೇವಾ ಭಾರತಿ ಅಧ್ಯಕ್ಷ ರಮೇಶ ತಿಪ್ಪನೂರ, ರಮೇಶ ಪಾಟೀಲ್‌, ಡಾ| ಶಿವಶರಣ, ಮಾರ್ಥಾಂಡ ಶಾಸ್ತ್ರೀ, ಪ್ರಲ್ಹಾದ ಪೂಜಾರಿ, ರವಿ ಲಾತೂರಕರ್‌, ಮಲ್ಲಿಕಾರ್ಜುನ ಅವರಾದಿ ಇದ್ದರು.

ಮಹಾದಾಸೋಹಿ ಶರಣಬಸವೇಶ್ವರರು ಸಕಲ ಜೀವರಾಶಿಗೆ ಒಳಿತು ಮಾಡಿ, ಕಾಯಕ ದಾಸೋಹ ಮಾಡಿದರು. ಶರಣರಂತೆ ರಾಮನ ಜೀವನ ಸಹ ಎಲ್ಲರಿಗೂ
ಆದರ್ಶವಾಗಿದೆ. ಜಾತಿ ಧರ್ಮ ಭೇದವಿಲ್ಲದೇ ರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣ ಅಭಿಯಾನದಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು.
ಡಾ| ಶರಣಬಸವಪ್ಪ ಅಪ್ಪ,
ಪೀಠಾಧ್ಯಕ್ಷರು, ಶರಣಬಸವೇಶ್ವರ ಸಂಸ್ಥಾನ

ಜನ್ಮಭೂಮಿ ಅಯೋಧ್ಯೆಯ ರಾಮ ಮಂದಿರವು ಜನ ಮಂದಿರವಾಗಬೇಕು. ಈ ನಿಟ್ಟಿನಲ್ಲಿ ಮಂದಿರ ನಿರ್ಮಾಣಲ್ಲಿ ಪ್ರತಿಯೊಬ್ಬರ ಪಾಲು ಇರಲಿ ಎಂಬ ಉದ್ದೇಶದಿಂದ ನಿಧಿ ಸಮರ್ಪಣ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ಜ.17ರಂದು ಕಲಬುರಗಿ ಜಿಲ್ಲಾದ್ಯಂತ ನಿಧಿ ಸಮರ್ಪಣ ಅಭಿಯಾನ ನಡೆಯಲಿದೆ. ಸುಮಾರು 5 ಸಾವಿರ ಸ್ವಯಂ ಸೇವಕರು ಬೆಳಗ್ಗೆ 8ಗಂಟೆಯಿಂದ ರಾತ್ರಿ 8ರ ವರೆಗೆ ಎಲ್ಲ ಮನೆ-ಮನೆಗಳಿಗೆ ಆಗಮಿಸಿ ನಿಧಿ ಸಮರ್ಪಿಸಿಕೊಳ್ಳಲಿದ್ದಾರೆ.
ಕೃಷ್ಣಜೋಷಿ, ಆರ್‌ಎಸ್‌ಎಸ್‌ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next