Advertisement

ಪ್ರವಾಹ ಪೀಡಿತ ಪತ್ತನಂತಿಟ್ಟ ರಕ್ಷಣಾ ಕಾರ್ಯಾಚರಣೆಗೆ 25 ಫೈಬರ್‌ ದೋಣಿ

06:00 AM Aug 19, 2018 | |

ತಿರುವನಂತಪುರ: ಪ್ರವಾಹದಿಂದ ತತ್ತರಿಸಿರುವ ಪತ್ತನಂತಿಟ್ಟಕ್ಕೆ 25 ಫೈಬರ್‌ ದೋಣಿಗಳನ್ನು ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ದೋಣಿಗಳನ್ನು ಸೇನೆ ವಿಮಾನನಿಲ್ದಾಣಕ್ಕೆ ತಂದಿದ್ದು ಅವುಗಳನ್ನು ಟ್ರಕ್‌ಗಳಲ್ಲಿ ಕಳುಹಿಸಲಾಗುವುದು. ಚಂಗನಶೆÏàರಿಯಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Advertisement

ವಿವಿಧ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿರುವವರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಶನಿವಾರ ಮುಂಜಾನೆಯಿಂದ ಈ ಕಾರ್ಯಕ್ಕೆ  ಇನ್ನಷ್ಟು ದೋಣಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪರಿಹಾರ ಕಾರ್ಯಗಳಲ್ಲಿ ಸ್ಥಳೀಯರು ಹಾಗೂ ವಿಪತ್ತು ನಿರ್ವಹಣಾ ಪಡೆ ಸಿಬಂದಿ ಕೈಜೋಡಿಸಿದ್ದಾರೆ.

ಇದೇ ಸಮಯ ತಿರುವನಂತಪುರದ ಮ್ಯೂಸಿಯಂ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಹಾಗೂ ವಿನಾಶಕ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಅಂಥ ವ್ಯಕ್ತಿಗಳ ವಿರುದ್ಧ ಜಾಮೀನುರಹಿತ ಸೆಕ್ಷನ್‌ಗಳನ್ನು ಬಳಸಲಾಗುವುದು ಮತ್ತು ಕಠಿನ ಕ್ರಮ ಜರಗಿಸಲಾಗುವುದು ಎಂದು ಇನ್ಸ್‌ಪೆಕ್ಟರ್‌ ಜನರಲ್‌ ಆಫ್ ಪೊಲೀಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next