Advertisement

ಮೊದಲ ಮತದಾರರಿಗೆ 25% ರಿಯಾಯಿತಿ

09:11 PM Apr 12, 2019 | Team Udayavani |

ಕೇಕ್‌ವಾಲಾ ಬೇಕರಿ, ಈಶಾನ್ಯ ರೆಸ್ಟೋರೆಂಟ್‌ ಮತ್ತು ರೂಫ್ಟಾಪ್‌ ಕೆಫೆ ಈ ಮೂರು ತಾಣಗಳಲ್ಲೂ ಮತ ಹಾಕಿದವರಿಗೆ ಬಿಲ್‌ನಲ್ಲಿ ಶೇ.10ರಷ್ಟು ರಿಯಾಯಿತಿ ನೀಡುತ್ತಿದ್ದಾರೆ. ಏಪ್ರಿಲ್‌ 18ರಂದು, ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಮಾತ್ರ ಈ ರಿಯಾಯಿತಿ ಲಭ್ಯ.

Advertisement

ನಾಗರಿಕರು ಮತ ಹಾಕುವಂತೆ ಪ್ರೋತ್ಸಾಹಿಸಲು, ಮತದಾನದ ಮಹತ್ವವನ್ನು ಸಾರಲು ಈ ರಿಯಾಯಿತಿ ನೀಡುತ್ತಿದ್ದೇವೆ ಎನ್ನುವುದು ಮೂರು ಸಂಸ್ಥೆಗಳ ಕಾರ್ಯಧ್ಯಕ್ಷರಾದ ಶ್ರೀನಿವಾಸ್‌ ರಾವ್‌ ಅವರ ಮಾತು. ಬಿಲ್‌ ಮೊತ್ತ 10 ರು. ಇರಲಿ ಸಾವಿರ ರುಪಾಯಿಯೇ ಇರಲಿ ಮತ ಹಾಕಿದವರು ಮತ ಹಾಕಿದ ಗುರುತನ್ನು ತೋರಿಸಿದರೆ ರಿಯಾಯಿತಿ ಪಡೆದುಕೊಳ್ಳಬಹುದು.

ಇದಿಷ್ಟೇ ಅಲ್ಲದೆ ಮೊದಲ ಬಾರಿ ಮತ ಹಾಕುತ್ತಿರುವವರಿಗೆ ಬಿಲ್‌ನಲ್ಲಿ ಶೇ. 25ರಷ್ಟು ರಿಯಾಯಿತಿ ಇದೆ. ಅವರು ಬೆರಳ ಗುರುತಿನ ಜೊತೆ ವೋಟರ್‌ ಐಡಿ ತೋರಿಸಿದರೆ ಸಾಕು 25ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.

ಎಲ್ಲಿ?: ಕೇಕ್‌ವಾಲಾ, ಜಯನಗರ 4ನೇ ಬ್ಲಾಕ್‌, ಜಯನಗರ 4ನೇ ಟಿ ಬ್ಲಾಕ್‌, ಜೆ.ಪಿ.ನಗರ 2ನೇ ಫೇಸ್‌, ಎಚ್‌.ಅಸ್‌.ಆರ್‌ ಲೇಔಟ್‌ ಸೆಕ್ಟರ್‌ 4, ಈಶಾನ್ಯ ರೆಸ್ಟೋರೆಂಟ್‌, ಜಯನಗರ 4ನೇ ಟಿ ಬ್ಲಾಕ್‌, ರೂಫ್ಟಾಪ್‌ ಕೆಫೆ, ಜಯನಗರ 4ನೇ ಬ್ಲಾಕ್‌

ಯಾವಾಗ?: ಏಪ್ರಿಲ್‌ 18

Advertisement
Advertisement

Udayavani is now on Telegram. Click here to join our channel and stay updated with the latest news.

Next