Advertisement

ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ಅನುದಾನ

01:00 PM Nov 01, 2019 | Suhan S |

ಬನಹಟ್ಟಿ: ತೇರದಾಳ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 25 ಕೋಟಿ ವಿಶೇಷ ಅನುದಾನ ನೀಡಿದೆ. ಅದರಲ್ಲಿ ರಬಕವಿ ಬನಹಟ್ಟಿ ಅಭಿವೃದ್ಧಿಗೆ 6 ಕೋಟಿ ಅನುದಾನದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿದ್ದುಸವದಿ ತಿಳಿಸಿದರು.

Advertisement

ಗುರುವಾರ ಸ್ಥಳೀಯ ಕಾಡಸಿದೇಶ್ವರ ದೇವಸ್ಥಾನದ ಬೃಹತ್‌ಚರಂಡಿ ಮೇಲಿನ ಸೇತುವೆ ಕುಸಿದು ಬಿದ್ದಿದ್ದು, ನೂತನಸೇತುವೆ ನಿರ್ಮಾಣದ ತುರ್ತು ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದ ಅನೇಕ ಕಡೆಗಳಲ್ಲಿ ರಸ್ತೆಗಳು ಹಾಳಾಗಿದ್ದು, ಪ್ರಮುಖ ರಸ್ತೆಗಳದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಚರಂಡಿಮತ್ತು ಸೇತುವೆ ನಿರ್ಮಾಣವನ್ನು 1ಕೋಟಿ ವೆಚ್ಚದಲ್ಲಿಕೈಗೊಳ್ಳಲಾಗುವುದು. 39 ಲಕ್ಷ ವೆಚ್ಚದಲ್ಲಿ ಸ್ಮಶಾನದ ತಡೆಗೋಡೆ ನಿರ್ಮಾಣ, ರಬಕವಿಯ ಕುಸ್ತಿ ಮೈದಾನದ ಅಭಿವೃದ್ಧಿಗಾಗಿ 62 ಲಕ್ಷ ರೂ. ಮತ್ತು ಬನಹಟ್ಟಿಯ ಕನ್ನಡ ಗಂಡು ಮತ್ತು ಹೆಣ್ಣುಮಕ್ಕಳ ಸರ್ಕಾರಿ ಶಾಲೆಗಳಕಾಂಪೌಂಡ್‌ ಎತ್ತರ ಮಾಡುವ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದರು.

ಈ ಸೇತುವೆ ದೇವಸ್ಥಾನಕ್ಕೆ ಮತ್ತು ನಗರಪ್ರವೇಶದಮಹತ್ವದ ಸೇತುವೆಯಾಗಿತ್ತು. ಈ ಸೇತುವೆ ನಿರ್ಮಾಣ ಅಗತ್ಯವಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳಿಸುವಂತೆ ಪತ್ರಿಕೆ ವರದಿ ಪ್ರಕಟಿಸಿತ್ತು. ಶ್ರೀಶೈಲ ಧಬಾಡಿ, ಶ್ರೀಪಾದ ಬಾಣಕಾರ, ಮಲ್ಲಿಕಾರ್ಜುನ ಬಾಣಕಾರ, ರಾಜು ಅಂಬಲಿ, ಪ್ರವೀಣ ಧಬಾಡಿ, ರಾಜು ಬಾಣಕಾರ, ಪೌರಾಯುಕ್ತ ಮೋಹನಜಾಧವ, ಇಂಜಿನಿಯರ್‌ ಬಸವರಾಜ ಶರಣಪ್ಪನವರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next