Advertisement

ಮಹಾರಾಷ್ಟ್ರದ 2 ಸಂಸತ್‌ ಕ್ಷೇತ್ರ ಉಪಚುನಾವಣೆ: 25 ಮಂದಿ ಕಣದಲ್ಲಿ

03:27 PM May 15, 2018 | udayavani editorial |

ಮುಂಬಯಿ : ಮಹಾರಾಷ್ಟ್ರದ ಭಂಡಾರಾ-ಗೋಂಡಿಯಾ ಮತ್ತು ಪಾಲಗಢ ಲೋಕಸಭಾ ಕ್ಷೇತ್ರಕ್ಕೆ ಇದೇ ಮೇ 28ರಂದು ನಡೆಯುವ ಉಪಚುನಾವಣೆಯ ಕಣದಲ್ಲಿ  25 ಅಭ್ಯರ್ಥಿಗಳು ಇದ್ದಾರೆ. 

Advertisement

ಭಂಡಾರಾ – ಗೋಂಡಿಯಾ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಸೆಣಸಲಿದ್ದಾರೆ; ಪಾಲಗಢ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

ಭಂಡಾರಾ – ಗೋಂಡಿಯಾ ಲೋಕಸಭಾ ಕ್ಷೇತ್ರದ ಹಾಲಿ ಬಿಜೆಪಿ ಸದಸ್ಯ ನಾನಾ ಪಟೋಳೆ ಅವರು ರಾಜೀನಾಮೆ ನೀಡಿದ್ದ ಪ್ರಯುಕ್ತ ಮತ್ತು ಪಾಲಗಢ ಕ್ಷೇತ್ರದ ಬಿಜೆಪಿ ಸಂಸದ ಚಿಂತಾಮಣ್‌ ವಾಂಗಾ ಅವರು ನಿಧನ ಹೊಂದಿದ ಪ್ರಯುಕ್ತ ಉಪಚುನವಾಣೆ ನಡೆಯುವುದು ಅನಿರ್ವಾಯವಾಗಿದೆ. 

ಎನ್‌ಸಿಪಿ ಜತೆಗೆ ಕಾಂಗ್ರೆಸ್‌ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ, ಪಾಲಗಢದಲ್ಲಿ ಕಾಂಗ್ರೆಸ್‌ ಮತ್ತು ಭಂಡಾರಾ ಗೋಂಡಿಯಾ ಕ್ಷೇತ್ರದಲ್ಲಿ ಎನ್‌ಸಿಪಿ ಸ್ಪರ್ಧಿಸಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next