Advertisement

#OperationKaveri ಮುಂಬೈಗೆ ಸುರಕ್ಷಿತವಾಗಿ ಬಂದ ಸೂಡಾನ್‌ ನಲ್ಲಿದ್ದ 246 ಭಾರತೀಯರು

05:51 PM Apr 27, 2023 | Team Udayavani |

ಮುಂಬೈ : ಆಂತರಿಕ ಸಂಘರ್ಷದಿಂದ ನಲುಗಿರುವ ಸೂಡಾನ್‌ನಿಂದ 246 ಭಾರತೀಯರನ್ನು ಕರೆತಂದ ಭಾರತೀಯ ವಾಯುಪಡೆಯ ವಿಮಾನ ಗುರುವಾರ ಮುಂಬೈಗೆ ಬಂದಿಳಿಯಿತು.

Advertisement

ಭಾರತೀಯ ಕಾಲಮಾನ ಬೆಳಗ್ಗೆ 11 ಗಂಟೆಗೆ ಸೌದಿ ಅರೇಬಿಯಾದ ಜೆಡ್ಡಾದಿಂದ ಟೇಕಾಫ್ ಆದ ವಿಮಾನವು ಮಧ್ಯಾಹ್ನ 3.30 ರ ಸುಮಾರಿಗೆ ಇಳಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಜೆಡ್ಡಾದಿಂದ ಭಾರತೀಯರನ್ನು ತ್ವರಿತವಾಗಿ ಮನೆಗೆ ಕಳುಹಿಸುವ ನಮ್ಮ ಪ್ರಯತ್ನಗಳು ಫಲ ನೀಡುತ್ತಿವೆ. 246 ಭಾರತೀಯರು ಶೀಘ್ರದಲ್ಲೇ ಮುಂಬೈನಲ್ಲಿರುತ್ತಾರೆ, IAF C17 Globemaster ಮೂಲಕ ಪ್ರಯಾಣಿಸುತ್ತಾರೆ. ಅವರನ್ನು ಜೆಡ್ಡಾ ವಿಮಾನ ನಿಲ್ದಾಣದಲ್ಲಿ ನೋಡಲು ಸಂತೋಷವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ವಿಮಾನ ಮುಂಬೈಗೆ ಪ್ರಯಾಣ ಆರಂಭಿಸುವ ಮುನ್ನ ಟ್ವೀಟ್ ಮಾಡಿದ್ದರು.

‘ಆಪರೇಷನ್ ಕಾವೇರಿ’ ಅಡಿಯಲ್ಲಿ, ಭಾರತವು ತನ್ನ ನಾಗರಿಕರನ್ನು ಖಾರ್ಟೂಮ್ ಮತ್ತು ಇತರ ತೊಂದರೆಗೊಳಗಾದ ಪ್ರದೇಶಗಳಿಂದ ಪೋರ್ಟ್ ಸೂಡಾನ್‌ಗೆ ಬಸ್‌ಗಳಲ್ಲಿ ಕರೆದೊಯ್ಯುತ್ತಿದೆ, ಅಲ್ಲಿಂದ ಅವರನ್ನು ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ಸಾರಿಗೆ ವಿಮಾನ ಮತ್ತು ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಕರೆದೊಯ್ಯಲಾಗುತ್ತಿದೆ.

ಖಾರ್ಟೂಮ್ ಮತ್ತು ಪೋರ್ಟ್ ಸೂಡಾನ್ ನಡುವಿನ ಅಂತರವು ಸುಮಾರು 850 ಕಿಮೀ ಯಾಗಿದ್ದು, ಬಸ್‌ನಲ್ಲಿ ಪ್ರಯಾಣದ ಸಮಯ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಪರಿಗಣಿಸಿ 12 ಗಂಟೆಗಳಿಂದ 18 ಗಂಟೆಗಳವರೆಗೆ ತಗಲುತ್ತದೆ.

Advertisement

ಬುಧವಾರ ರಾತ್ರಿ, ಸುಡಾನ್‌ನಿಂದ ರಕ್ಷಿಸಲ್ಪಟ್ಟ 360 ಭಾರತೀಯರನ್ನು ಹೊತ್ತ ವಾಣಿಜ್ಯ ವಿಮಾನವು ನವದೆಹಲಿಗೆ ಬಂದಿಳಿದಿದೆ. ಸರಿಸುಮಾರು 1,700 ರಿಂದ 2,000 ಭಾರತೀಯ ಪ್ರಜೆಗಳನ್ನು ಸಂಘರ್ಷದ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಮತ್ತು ಅವರಲ್ಲಿ ಈಗಾಗಲೇ ಸೂಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ನಾಗರಿಕರು ಮತ್ತು ರಾಜಧಾನಿ ಖಾರ್ಟೂಮ್‌ನಿಂದ ಪೋರ್ಟ್ ಸುಡಾನ್‌ಗೆ ಹೋಗುತ್ತಿರುವವರು ಸೇರಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next