Advertisement

2,42,653 ಹಿರಿಯ ನಾಗರಿಕರ ಪರೀಕ್ಷೆ : ಬಿಎಂಸಿ

07:21 AM Jun 02, 2020 | Suhan S |

ಮುಂಬಯಿ, ಜೂ. 1: ಕೋವಿಡ್‌ -19ರ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿರುವ ಮುಂಬಯಿ ಮಹಾನಗರ ಪಾಲಿಕೆಯು ಎಪ್ರಿಲ್‌ 25 ರಿಂದ ಈ ವರೆಗೆ 2,42,653 ಹಿರಿಯ ನಾಗರಿಕರನ್ನು ಪರೀಕ್ಷಿಸಿದ್ದು, ಅವರಲ್ಲಿ ಮೇ 31 ರವರೆಗೆ 1,615 ಮಂದಿಗೆ ಕೋವಿಡ್ ಪಾಸಿಟಿವ್‌ ಇರುವ ಬಗ್ಗೆ ಮಾಹಿತಿ ಲಭಿಸಿದೆ.

Advertisement

ಅವರ ರಕ್ತದ ಆಮ್ಲಜನಕದ ಶುದ್ಧತ್ವ ಮಟ್ಟವು ಶೇ. 95 ಕ್ಕಿಂತ ಕಡಿಮೆಯಿದ್ದು ಕಡಿಮೆ ಆಮ್ಲಜನಕದ ಮಟ್ಟವನ್ನು ಹೊಂದಿರುವವರಿಗೆ ಬಿಎಂಸಿ ಆಮ್ಲಜನಕ ಚಿಕಿತ್ಸೆಯನ್ನು ವಿವಿಧ ಆಸ್ಪತ್ರೆಗಳಲ್ಲಿ ಪ್ರಾರಂಭಿಸಿದೆ. ನಗರದಲ್ಲಿ ನಡೆದ ಎಲ್ಲಾ ಕೋವಿಡ್‌ -19 ಸಾವುಗಳಲ್ಲಿ ಶೇ. 67 ರಷ್ಟು ಪ್ರಕರಣಗಳು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಗಳು ಮತ್ತು ದೀರ್ಘ‌ಕಾಲದ ಉಸಿರಾಟದ ಕಾಯಿಲೆಗಳಿಂದ ಬಳಲುತಿದ್ದರು ಎಂದು ಬಿಎಂಸಿ ತಿಳಿಸಿದೆ.

ಹೆಚ್ಚಿನ ಅಪಾಯದ ವಿಭಾಗದಲ್ಲಿರುವವರನ್ನು ಗುರುತಿಸಲು ಮುಂಬಯಿ ಪಾಲಿಕೆಯ ಸಮುದಾಯ ಆರೋಗ್ಯ ಸ್ವಯಂಸೇವಕರ 400 ತಂಡಗಳು ಮತ್ತು ಆಶಾ ಕಾರ್ಯಕರ್ತೆಯರು ಮನೆ-ಮನೆಗೆ ಸಮೀಕ್ಷೆಗಳನ್ನು ಪ್ರಾರಂಭಿಸಿದ್ದಾರೆ. ಹಿರಿಯ ನಾಗರಿಕರ ತಪಾಸಣೆಗೆ ಒತ್ತು ನೀಡುತ್ತಿರುವ ಇವರು ನಾಡಿ ಆಕ್ಸಿಮೀಟರ್‌ಗಳನ್ನು ಬಳಸುತ್ತಾರೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ನಾವು 1,600 ಕ್ಕೂ ಹೆಚ್ಚು ದುರ್ಬಲ ಹಿರಿಯ ನಾಗರಿಕರನ್ನು ಗುರುತಿಸಲು ಮತ್ತು ಸರಿಯಾದ ಸಮಯದಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆಯನ್ನು ಯಶಸ್ವಿಯಾಗಿ ಒದಗಿಸಲು ಸಾಧ್ಯವಾಯಿತು. ನಮ್ಮ ತಂಡಗಳು ಸುಮಾರು 14,07,726 ಮನೆಗಳಿಗೆ ಭೇಟಿ ನೀಡಿ 2.42 ಲಕ್ಷ ಹಿರಿಯ ನಾಗರಿಕರನ್ನು ಪರೀಕ್ಷಿಸಿವೆ. ಈ ಸ್ಕ್ರೀನಿಂಗ್‌ ವಿಧಾನವಿಲ್ಲದಿದ್ದರೆ, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಮರಣ ಪ್ರಮಾಣವನ್ನು ನಿಯಂತ್ರಿಸುವುದು ಕಷ್ಟಕರವಾಗಿತ್ತು ಎಂದು ಬಿಎಂಸಿ ಆರೋಗ್ಯ ವಿಭಾಗದ ಉಪನಿರ್ದೇಶಕ ಡಾ| ದಕ್ಷ ಶಾ ಹೇಳಿದ್ದಾರೆ.

ಸಮೀಕ್ಷೆಯನ್ನು ನಡೆಸುವ ತಂಡಗಳು ಏಕಾಏಕಿ, ಹಿರಿಯ ನಾಗರಿಕರನ್ನು ಹೇಗೆ ನೋಡಿ ಕೊಳ್ಳಬೇಕು ಮತ್ತು ನಿವಾಸಿಯೊಬ್ಬರು ರೋಗಲಕ್ಷಣಗಳನ್ನು ಬೆಳೆಸಿಕೊಂಡರೆ ಎಲ್ಲಿ ವರದಿ ಮಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶೇ. 67 ರಷ್ಟು ಪ್ರಕರಣಗಳಲ್ಲಿ ಸಾವನ್ನಪ್ಪಿದ ರೋಗಿಗಳಲ್ಲಿ ಕೊಮೊರ್ಬಿಡಿಟಿ ಗಳಿದ್ದರೆ, ಶೇ. 26 ರಷ್ಟು ಮಂದಿಯಲ್ಲಿ ಮಧು ಮೇಹ, ಶೇ. 24 ರಷ್ಟು ಮಂದಿಯಲ್ಲಿ ಅಧಿಕ ರಕ್ತದೊತ್ತಡ, ಶೇ. 32 ರಷ್ಟು ಮಂದಿಯಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಗುರುತಿಸಲಾಗಿದೆ.

Advertisement

ಸಾವನ್ನಪ್ಪಿರುವವರಲ್ಲಿ ಸುಮಾರು ಶೇ. 8 ರಷ್ಟು ಹೃದಯ ಕಾಯಿಲೆಗಳನ್ನು ಹೊಂದಿದ್ದರು ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next