Advertisement

Rahul Gandhi ಪ್ರತಿಸ್ಪರ್ಧಿ, ಬಿಜೆಪಿ ಅಭ್ಯರ್ಥಿ ವಿರುದ್ಧ 242 ಕ್ರಿಮಿನಲ್‌ ಕೇಸ್‌!

12:51 AM Mar 30, 2024 | Team Udayavani |

ಕೊಚ್ಚಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್‌ 242 ಕ್ರಿಮಿನಲ್‌ ಕೇಸ್‌ ಎದುರಿಸುತ್ತಿದ್ದಾರೆ. ಇವರು ಕೇರಳ ಬಿಜೆಪಿಯ ಅಧ್ಯಕ್ಷರೂ ಹೌದು. ಇತ್ತೀಚೆಗೆ ಅವರೇ ಈ ಕುರಿತು ವಿವರ ಪ್ರಕಟಿಸಿದ್ದಾರೆ.

Advertisement

ಎರ್ನಾಕುಲಂ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ರಾಧಾಕೃಷ್ಣನ್‌ ವಿರುದ್ಧವೂ 211 ಪ್ರಕರಣಗಳಿವೆ. ಈ ನಾಯಕರ ವಿರುದ್ಧ ದಾಖಲಾಗಿರುವ ಬಹುತೇಕ ಕ್ರಿಮಿನಲ್‌ ಕೇಸ್‌ 2018ರ ಶಬರಿಮಲೆ ಪ್ರತಿಭಟನೆ ವೇಳೆ ದಾಖಲಾಗಿವೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಜಾರ್ಜ್‌ ಕುರಿಯನ್‌ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, “ಭಾರತದ ಕೆಲವು ಭಾಗದಲ್ಲಿ ರಾಷ್ಟ್ರವಾದಿಗಳಾಗುವುದು ಬಹಳ ಕಷ್ಟ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next