ಬಸ್ರೂರು: ಬಸ್ರೂರು ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ 2.40 ಲಕ್ಷ ರೂ. ಮೌಲ್ಯದ ವಿವಿಧ ಶಿಕ್ಷಣ ಪರಿಕರಗಳ ಕೊಡುಗೆಗಳನ್ನು ಜು. 26ರಂದು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಸಮವಸ್ತ್ರ, ನೋಟ್ಸ್ ಪುಸ್ತಕ ಮತ್ತಿತರ ವಿವಿಧ ಕೊಡುಗೆಗಳನ್ನು ಕೊಟ್ಟ ದಾನಿ ಆನಂದ ಸಿ. ಕುಂದರ್ ಅವರು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಕೊಟ್ಟ ಈ ಎಲ್ಲ ಕೊಡುಗೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಿವೆ. ವಿದ್ಯಾಭ್ಯಾಸದ ದೃಷ್ಟಿಯಿಂದ ಈ ಪರಿಕರಗಳು ಮಹತ್ವ ಪಡೆಯುತ್ತದೆ. ಇದು ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿಯಾಗಿದೆ. ಬಿ.ಎಂ.ಶಾಲೆಯ ವಿದ್ಯಾರ್ಥಿಗಳಿಗೆ ವಾಹನ ಸೌಲಭ್ಯ ವ್ಯವಸ್ಥೆಯನ್ನೂ ಮಾಡಿರುವುದು ಗಮನಾರ್ಹ. ಯಾವುದೇ ಆಂಗ್ಲ ಮಾಧ್ಯಮ ಶಾಲೆಗಳಿಗೂ ಕಡಿಮೆಯಿಲ್ಲದಂಥಹ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆಯ ಬೆಳವಣಿಗೆಗೆ ಸದಾ ಸಿದ್ಧನಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಉಳ್ಳೂರು ಶ್ರೀ ದುರ್ಗಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕಿ ಜಯಲಕ್ಷ್ಮೀ ಬಾಲಚಂದ್ರ ಶೆಟ್ಟಿ ಅವರು ಕೊಡ ಮಾಡಿದ ಸ್ಕೂಲ್ ಬ್ಯಾಗ್‌ಗಳು, ಕೆ.ಆರ್.ನಾಯಕ್ ಅವರು ಕೊಡಮಾಡಿದ ಶೂ, ಸಾಕ್ಸ್, ಬೆಲ್ಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧಿœ ಯೋಜನೆ ಎ ಒಕ್ಕೂಟದ ವತಿಯಿಂದ ಕಂಪ್ಯೂಟರ್, ಪ್ರಿಂಟರ್, ಕಂಡೂÉರು ಐಶ್ವರ್ಯ ಫೈನಾನ್ಸ್ ವತಿಯಿಂದ ವಿದ್ಯಾರ್ಥಿ ವೇತನ, ಉಡುಪಿ ಪರ್ಯಾಯ ಅಧೋಕ್ಷಜ ಮಠದಿಂದ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕುಂದಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಶಾಲಾ ಹಳೆ ವಿದ್ಯಾರ್ಥಿ ರಾಜೇಂದ್ರ ಶೆಟ್ಟಿಗಾರ್, ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಶೆಟ್ಟಿ, ಮಾಜಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ರಮೇಶ್ ಶೆಟ್ಟಿ, ಬಸ್ರೂರು ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಬಿ., ಹಳೆವಿದ್ಯಾರ್ಥಿ ಉಮಾನಾಥ್ ನಾಯಕ್,ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಜ್ಯೋತಿ ಉಪಸ್ಥಿತರಿದ್ದು ಶುಭಕೋರಿದರು.
ಶಾಲಾ ಆಡಳಿತ ಮಂಡಳಿ ಸದಸ್ಯ ದಯಾನಂದ ಬಳ್ಕೂರು ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಕೆ.ವಿ. ಬಾಲಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಉದಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಎಂ.ಬಿ.ಲಮಾಣಿ ವಂದಿದಿಸಿದರು. ಶಾಲಾ ಶಿಕ್ಷಕರು ಮಕ್ಕಳು, ಹೆತ್ತವರು ಉಪಸ್ಥಿತರಿದ್ದರು