Advertisement

ಅಂಜನಾದ್ರಿ ಬೆಟ್ಟಕ್ಕೆ ಮೂಲಸೌಕರ್ಯ ಕಲ್ಪಿಸಲು 240 ಕೋಟಿ ರೂ. ಯೋಜನೆ: ಆನಂದ್‌ ಸಿಂಗ್‌

06:23 PM Jul 08, 2022 | Team Udayavani |

ಬೆಂಗಳೂರು: ಹನುಮನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟಕ್ಕೆ ರಸ್ತೆ ಸೇರಿ ಮೂಲ ಸೌಕರ್ಯ ಕಲ್ಪಿಸಲು 240 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದಸಿಂಗ್‌ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಂಜನಾದ್ರಿ ಬೆಟ್ಟದ ಅಭಿವೃದ್ದಿಗೆ ಈ ಹಿಂದೆ 100 ಕೋಟಿ ರೂ. ನೀಡಲು ಸರ್ಕಾರ ನಿರ್ಧರಿಸಿತ್ತು.ಆದರೆ ಇದೀಗ ಬೆಟ್ಟಕ್ಕೆ ರಸ್ತೆ ಸೌಲಭ್ಯವನ್ನು ಕಲ್ಪಿಸಿಕೊಡಲು 140 ಕೋಟಿ ರೂ. ಹೆಚ್ಚುವರಿ ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ನೂತನ ರಸ್ತೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿರುವ ಹೊಸಳ್ಳಿಯಿಂದ ಹಿಡಿದು ಅಂಜನಾದ್ರಿ ಬೆಟ್ಟದವರೆಗೆ ಸಾಗುತ್ತದೆ. ರಸ್ತೆ ನಿರ್ಮಾಣ ಕಾರ್ಯಕ್ಕೆ 140 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಪ್ರಾಚ್ಯವಸ್ತು ಇಲಾಖೆಗೆ ಸೂಚನೆ ನೀಡಿ,ಅಂಜನಾದ್ರಿ ಬೆಟ್ಟ ಹನುಮಜನ್ಮ ಸ್ಥಳ ಎಂಬ ಬಗ್ಗೆ ಇರುವ ದಾಖಲೆಯನ್ನು ಅಂಜನಾದ್ರಿ ಬೆಟ್ಟದಲ್ಲಿ ಪ್ರದರ್ಶಿಸಲು ತಿಳಿಸಲಾಗಿದೆ ಎಂದರು.

ಸುಮಾರು ಅರವತ್ತು ಎಕರೆ ಪ್ರದೇಶದಲ್ಲಿ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿ ಪಡಿಸುತ್ತಿದ್ದು.ಭೂಮಿ ಒದಗಿಸಲು ಮುಂದೆ ಬಂದಿರುವ ರೈತರು ತಮಗೆ ಹೆಚ್ಚಿನ ಪರಿಹಾರ ಒದಗಿಸಬೇಕು ಮತ್ತು ಬೆಟ್ಟದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿದಾರರಾಗಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.ಸರ್ಕಾರ ಆ ಕುರಿತು ಪರಿಶೀಲಿಸುತ್ತಿದೆ ಎಂದು ಹೇಳಿದರು.

Advertisement

ಹಂಪಿ,ಪಟ್ಟದಕಲ್ಲು ಸೇರಿದಂತೆ ರೂಪಿಸಲಾಗುತ್ತಿರುವ ಪ್ರವಾಸೋದ್ಯಮದ ಕ್ಲಸ್ಟರ್‌ ನಲ್ಲಿ ಅಂಜನಾದ್ರಿ ಬೆಟ್ಟವನ್ನು ಸೇರಿಸಲಾಗುವುದು ಎಂದು ಹೇಳಿದರು.

ಲಲಿತ್‌ ಮಹಲ್‌ ಖಾಸಗಿಗೆ
ಆದಾಯದ ತೀವ್ರ ಕೊರತೆ ಎದುರಿಸುತ್ತಿರುವ ಮೈಸೂರಿನ ಲಲಿತ ಮಹಲ್‌ ಪ್ಯಾಲೇಸ್‌ ಹೋಟೆಲ್‌ ಸುತ್ತ ಮಧ್ಯಪ್ರದೇಶ,ರಾಜಸ್ತಾನ ರಾಜ್ಯಗಳ ಮಾದರಿಯಲ್ಲಿ ಟೆಂಟ್‌ ನಿರ್ಮಿಸಲು ಅವಕಾಶ ಕಲ್ಪಿಸಲಾಗುವುದು. ಲಲಿತ ಮಹಲ್‌ ಹೋಟೆಲ್‌ ವ್ಯಾಪ್ತಿಯಲ್ಲಿ 54 ಎಕರೆ ಜಾಗವಿದ್ದು,ಪ್ರವಾಸಿಗಳನ್ನು ಆಕರ್ಸಿಸುವ,ಆ ಮೂಲಕ ಹೆಚ್ಚು ಆದಾಯ ಪಡೆಯುವ ದೃಷ್ಟಿಯಿಂದ ಟೆಂಟ್‌ ನಿರ್ಮಿಸಲು ಅವಕಾಶ ಮಾಡಿಕೊಡಲಾಗುವುದು ಎಂದರು.

ಲಲಿತ್‌ ಮಹಲ್‌ ಹೋಟೆಲ್‌ ನಲ್ಲಿ ಸದ್ಯಕ್ಕಿರುವ ಕೊಠಡಿಗಳು ಮದುವೆಯಂತಹ ಸಮಾರಂಭಗಳಿಗೆ ಬರುವವರಿಗೆ ಸಾಲುತ್ತಿಲ್ಲ ಎಂದ ಅವರು,ಕನಿಷ್ಟ ಪಕ್ಷ ನೂರು ಕೊಠಡಿಗಳ ಸೌಲಭ್ಯವಾದರೂ ಇದ್ದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಲಲಿತ್‌ ಮಹಲ್‌ ಹೋಟೆಲ್‌ ಖಾಸಗಿಯವರಿಗೆ ವಹಿಸಿಕೊಡಲು ಸರ್ಕಾರ ನಿರ್ಧರಿಸಿದ್ದು ಇದಕ್ಕೆ ಪೂರಕವಾಗಿ ಜಾಗತಿಕ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ.ಈ ಸಂಬಂಧ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ನಿರ್ಣಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next