Advertisement

Adult Film Star: ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನೀಲಿ ಚಿತ್ರತಾರೆ

06:16 PM Jan 12, 2024 | Team Udayavani |

ನವದೆಹಲಿ: ಖ್ಯಾತ ನೀಲಿ ಚಿತ್ರತಾರೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಪೆರು ದೇಶದ ಥೈನಾ ಫೀಲ್ಡ್ಸ್‌ (24) ಶವವಾಗಿ ಪತ್ತೆಯಾದ ವಯಸ್ಕ ನಟಿ. ಇತ್ತೀಚೆಗೆ ಅವರು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಲಾ ರಿಪಬ್ಲಿಕಾ ತಿಳಿಸಿದೆ.

ಫೀಲ್ಡ್ಸ್ ಸಾವನ್ನಪ್ಪಿದ್ದಾರೆ ಎನ್ನುವ ವಿಚಾರವನ್ನುಫೀಲ್ಡ್ಸ್ ಅವರ ಸಹನಟಿ ಅಲೆಜಾಂಡ್ರಾ ಸ್ವೀಟ್ ಅವರು, ಲಾ ರಿಪಬ್ಲಿಕಾ ಜೊತೆಗಿನ ಸಂದರ್ಶನದ ವೇಳೆ ಹೇಳಿದ್ದಾರೆ. “ನಾನು ಈ ಸುದ್ದಿಯಿಂದ ದುಃಖಿತನಾಗಿರುವುದರಿಂದ ನಾನು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ಫೀಲ್ಡ್ಸ್‌ನ ಆಪ್ತರಲ್ಲಿ ಒಬ್ಬರಾಗಿದ್ದ ಅಲೆಜಾಂಡ್ರಾ ಸ್ವೀಟ್ ಔಟ್‌ಲೆಟ್‌ಗೆ ತಿಳಿಸಿದ್ದಾರೆ.

ಅವಳಿಗಾಗಿ ಪ್ರಾರ್ಥಿಸಿ, ಅವಳೀಗ ಪುಟ್ಟ ದೇವತೆ ಎಂದು ಸ್ವೀಟ್‌ ತನ್ನ ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ.

ವಯಸ್ಕ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಮಿಲ್ಕಿ ಪೆರು ಫೀಲ್ಡ್ಸ್ ಸಾವಿಗೆ ಸಂತಾಪ ಸೂಚಿಸಿದೆ.

Advertisement

ವಯಸ್ಕ ಇಂಡಸ್ಟ್ರಿ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಫೀಲ್ಡ್ಸ್:  ಫೀಲ್ಡ್ಸ್‌ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿಂದೆ ಅವರು, “ ನಾನು ವಯಸ್ಕ ಚಲನಚಿತ್ರೋದ್ಯಮದಲ್ಲಿ “ಬಹಳ ಬಲವಾದ” ಲೈಂಗಿಕ ಕಿರುಕುಳವನು ಎದುರಿಸುತ್ತಿದ್ದೇನೆ” ಎಂದಿದ್ದರು.

ತನ್ನ ಮೊದಲ ಹೆಸರನ್ನು ಹೇಳಿ, (ಅಬಿಗೈಲ್) “ವಯಸ್ಕ ಚಿತ್ರದಲ್ಲಿ ತೊಡಗಿಸಿಕೊಂಡ ಬಳಿಕ ನಾನು ಲೈಂಗಿಕ ಕಿರುಕುಳ ಮತ್ತು ನಿಂದನೆಯನ್ನು ಅನುಭವಿಸಿದ್ದೇನೆ. ಮೊದಲಿಗೆ ಅನೇಕರು ನನ್ನನ್ನು ನೇಮಿಸಿಕೊಂಡು ನನ್ನೊಂದಿಗೆ ಅವರು ಬಯಸಿದ್ದನ್ನು ಮಾಡಬಹುದು ಎಂದು ಭಾವಿಸಿದ್ದರು. ಆದರೆ ನಾನು ಮನೆಗೆ ಬಂದು ಸ್ನಾನ ಮಾಡಿ ಅಳುತ್ತಿದ್ದೆ. ಇದು ನನ್ನೊಂದಿಗೆ ಅನೇಕ ಬಾರಿ ಸಂಭವಿಸಿದೆ. ಸಮಾಜದಲ್ಲಿ ಮಹಿಳೆಯೊಬ್ಬಳು ವಯಸ್ಕ ಚಿತ್ರದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಕಷ್ಟ.” ಎಂದಿದ್ದರು.

ಇದಾದ ಬಳಿಕ ಫೀಲ್ಡ್ಸ್‌ ಅವರು ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವರದಿ ತಿಳಿಸಿದೆ.

ಫೀಲ್ಡ್ಸ್‌ ಅವರಿಗೆ ಟಿಕ್‌ ಟಾಕ್‌ ನಲ್ಲಿ‌ 225,000 ಫಾಲೋವರ್ಸ್‌ ಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next