ಮೊರೊಕ್ಕೊ: ಮಧ್ಯ ಮೊರೊಕ್ಕೊದ ಅಜಿಲಾಲ್ ಪ್ರಾಂತ್ಯದಲ್ಲಿ ಭಾನುವಾರ ಬಸ್ಸೊಂದು ಅಪಘಾತಕ್ಕೀಡಾಗಿ ಕನಿಷ್ಠ 24 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ವರದಿ ಪ್ರಕಾರ ಮಧ್ಯ ಮೊರಾಕೊದ ಡೆಮ್ನೇಟ್ ಎಂಬ ಸಣ್ಣ ಪಟ್ಟಣದಲ್ಲಿರುವ ಜನ ವಾರದ ಮಾರುಕಟ್ಟೆಗೆ ಮಿನಿ ಬಸ್ಸಿನಲ್ಲಿ ತೆರಳುತ್ತಿದ್ದಾಗ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತ ಸಂಭವಿಸಿದ ಕೂಡಲೆ ಸ್ಥಳೀಯ ಅಧಿಕಾರಿಗಳು, ರಾಯಲ್ ಜೆಂಡರ್ಮೆರಿ ಮತ್ತು ನಾಗರಿಕ ರಕ್ಷಣಾ ಸೇವಾ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತಕ್ಕೆ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದು ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಇದನ್ನು ಓದಿ: ಈ ವಾರ ಸಂಸತ್ ಕುತೂಹಲ: ಸದನಕ್ಕೆ ಬರುವರೇ ರಾಹುಲ್ ಗಾಂಧಿ?