ಚಾಮರಾಜನಗರ: ನಾಲ್ಕು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 24 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಒಟ್ಟು 78 ಪ್ರಕರಣಗಳಾಗಿದ್ದು, ಇದರಲ್ಲಿ 77 ಸಕ್ರಿಯ ಪ್ರಕರಣಗಳಾಗಿವೆ.
ಒಟ್ಟು 1037 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 1012 ಮಾದರಿಗಳ ವರದಿ ನೆಗೆಟಿವ್ ಆಗಿದೆ. 77 ಮಂದಿ ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ.
ಶುಕ್ರವಾರ ವರದಿಯಾಗಿರುವ ಪ್ರಕರಣಗಳಲ್ಲಿ 11 ಮಂದಿ ಗುಂಡ್ಲುಪೇಟೆಯವರು, 7 ಮಂದಿ ಚಾಮರಾಜನಗರ, 5 ಕೊಳ್ಳೇಗಾಲ ಹಾಗೂ 1 ಯಳಂದೂರಿನವರು. ಈ ಪೈಕಿ 7 ಮಂದಿ ಸೋಂಕಿತರು ಬೆಂಗಳೂರಿನಿಂದ ಪ್ರಯಾಣ ಮಾಡಿ ಬಂದವರಾಗಿದ್ದರೆ, ಇಬ್ಬರು ಮೈಸೂರಿನಿಂದ ಪ್ರಯಾಣ ಮಾಡಿ ಬಂದವರು. ಗುಂಡ್ಲುಪೇಟೆಯ ಬಹುತೇಕ ಪ್ರಕರಣಗಳು ಮಹದೇವ ಪ್ರಸಾದ್ ನಗರದವು. ಕಂಟೈನ್‌ಮೆಂಟ್ ವಲಯದಲ್ಲಿ ಸೋಂಕಿತರಾಗಿರುವವರಿಂದ ಹರಡಿರುವಂಥವು.
ಶುಕ್ರವಾರ ವರದಿಯಾಗಿರುವ 24 ಪ್ರಕರಣಗಳ ಸೋಂಕಿತರ ವಿವರ ಇಂತಿದೆ: ರೋಗಿ ಸಂಖ್ಯೆ 56: 62 ವರ್ಷದ ವೃದ್ಧ, ಚಾಮರಾಜನಗರ. ರೋಗಿ ಸಂಖ್ಯೆ 57: 25 ವರ್ಷದ ಯುವಕ, ಚಾಮರಾಜನಗರ. ರೋಗಿ ಸಂಖ್ಯೆ 58: 32 ವರ್ಷದ ಬಟ್ಟೆ ಅಂಗಡಿ ಸಹಾಯಕಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 59: 32 ವರ್ಷದ ಮೆಕಾನಿಕ್ ಗುಂಡ್ಲುಪೇಟೆ. ರೋಗಿ ಸಂಖ್ಯೆ 60: 58 ವರ್ಷದ ದನದ ವ್ಯಾಪಾರಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 61: 40 ವರ್ಷದ ಪುರುಷ ಗುಂಡ್ಲುಪೇಟೆ. ರೋಗಿ ಸಂಖ್ಯೆ 62: 50 ವರ್ಷದ ಅಂಗಡಿ ವ್ಯಾಪಾರಿ ಗುಂಡ್ಲುಪೇಟೆ. ರೋಗಿ ಸಂಖ್ಯೆ 63: 31 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 64: 30 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 65: 25 ವರ್ಷದ ಯುವತಿ ಗುಂಡ್ಲುಪೇಟೆ, ರೋಗಿ ಸಂಖ್ಯೆ 66: 46 ವರ್ಷದ ಸಾಮಾಜಿಕ ಕಾರ್ಯಕರ್ತ ಯಳಂದೂರು. ರೋಗಿ ಸಂಖ್ಯೆ 67: 23 ವರ್ಷದ ಮೆಕಾನಿಕ್ ಗುಂಡ್ಲುಪೇಟೆ, ಸಂಖ್ಯೆ 68: 29 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 69: 18 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 70: 60 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 71: 45 ವರ್ಷದ ಕೂಲಿ ಕೆಲಸದ ಮಹಿಳೆ, ಚಾಮರಾಜನಗರ. ಸಂಖ್ಯೆ 72: 32 ವರ್ಷದ ಯುವತಿ, ಚಾಮರಾಜನಗರ. ಸಂಖ್ಯೆ 73: 30 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 74: 54 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 75: 20 ವರ್ಷದ ಯುವಕ ಗುಂಡ್ಲುಪೇಟೆ. ಸಂಖ್ಯೆ 76: 4 ವರ್ಷದ ಮಗು, ಗುಂಡ್ಲುಪೇಟೆ. ಸಂಖ್ಯೆ 77: 49 ವರ್ಷದ ಆಟೋ ಚಾಲಕ, ಚಾಮರಾಜನಗರ. ಸಂಖ್ಯೆ 78: 38 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 79: 28 ವರ್ಷದ ಯುವಕ ಕೊಳ್ಳೇಗಾಲ