ಕಾರ್ಕಳ: ಕೋವಿಡ್ ಸೋಂಕಿನ ನಡುವೆಯೂ ಹೊರ ರಾಜ್ಯ / ಜಿಲ್ಲೆಗಳಿಂದ ತಾಲೂಕಿಗೆ ಆಗಮಿಸಿದ 24 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಮುಂಬಯಿಯಲ್ಲಿ ಎ. 28ರಂದು ಹೃದಯಾಘಾತದಿಂದ ನಿಧನ ಹೊಂದಿದ ಮರ್ಣೆ ಗ್ರಾಮದ ಅಜೆಕಾರು ಕುರ್ಪಾಡಿ ಮಹಾಬಲ ಶೆಟ್ಟಿ ಅವರ ಮೃತದೇಹವನ್ನು ಬುಧವಾರ ಹುಟ್ಟೂರಿಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ಕೋವಿಡ್ ಬಾಧೆ ತೀವ್ರವಾಗಿರುವ ಮಹಾರಾಷ್ಟ್ರದಿಂದ ಬಂದಿರುವುದಕ್ಕೆ ಸ್ಥಳೀಯರಿಂದ ವಿರೋಧವೂ ವ್ಯಕ್ತವಾಯಿತು.ಮೃತದೇಹದೊಂದಿಗೆ ಬಂದಿರುವ 6 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.
ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅನುಷಾ ಶೆಟ್ಟಿ, ಅಜೆಕಾರು ಠಾಣಾ ಎಸ್‌ಐ ಸುದರ್ಶನ್, ಪಂಚಾಯತ್ ಪಿಡಿಒ ತಿಲಕ್‌ರಾಜ್, ಗ್ರಾಮ ಕರಣಿಕ ರಿಯಾಜ್ ಉಪಸ್ಥಿತಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಮತ್ತಿಬ್ಬರನ್ನೂ ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ.
ಬೆಳ್ಮಣ್: 16 ಮಂದಿಗೆ ಕ್ವಾರಂಟೈನ್
ಬೆಳ್ಮಣ್: ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ನಂದಳಿಕೆ ಗ್ರಾಮಕ್ಕೆ ಬಂದ ಸುಮಾರು 16 ಮಂದಿ ಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ನಂದಳಿಕೆಯಲ್ಲಿ ತಂದೆಯ ಅಂತ್ಯಸಂಸ್ಕಾರಕ್ಕೆ ಮುಂಬಯಿ ಹಾಗೂ ಬೆಂಗಳೂರಿನಿಂದ ಬಂದ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಐವರಿಗೆ, ಇನ್ನೊಂದು ಪ್ರಕರಣದಲ್ಲಿ ಹಾಸನ ದಿಂದ ಬಂದ ಐವರನ್ನು ನಿಗಾದಲ್ಲಿಡಲಾಗಿದೆ.