Advertisement

ಕೋವಿಡ್19 ವೈರಸ್ ಮುನ್ನೆಚ್ಚರಿಕೆಗೆ ರಾಜ್ಯದೆಲ್ಲೆಡೆ ಲಾಕ್ ಡೌನ್ ಮಾಡಬೇಕೆನ್ನುವ ಆಗ್ರಹ

04:51 PM Mar 24, 2020 | keerthan |

ಮಣಿಪಾಲ: ಕೋವಿಡ್ -19 ವೈರಸ್ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಲಾಕ್ ಡೌನ್ ಮಾಡಬೇಕೆನ್ನುವ ಆಗ್ರಹದ ಕುರಿತಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಉತ್ತರಗಳು ಇಲ್ಲಿದೆ.

Advertisement

ವಸಂತಿ ಕೆಬಿ: ಸರಿಯಾದ ಕ್ರಮ ಲಾಕ್ ಡೌನ್ ಆದರೆ ಸರ್ಕಾರ ಆಹಾರ ಪೂರೈಕೆ ಕೂಡಾ ಒದಗಿಸಬೇಕು ದುಡಿದು ತಿನ್ನುವ ಜನರಿಗೆ ತುಂಬಾ ಕಷ್ಟಕರವಾದ ಜೀವನ.

ಭುವನೇಂದ್ರ ಶಿವಪುರ: ಲಾಕ್ ಡೌನ್ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ಭೀಕರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಮನೆಯ ಓರ್ವರು ಹೊರಹೋಗಿ ಖರೀದಿಸಿದರೆ ಒಳ್ಳೆಯದು. ಅನಗತ್ಯ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತಾತ್ಕಾಲಿಕವಾಗಿ ಮುಚ್ಚಿಸಬೇಕು. ಚಿಕಿತ್ಸೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತಡಮಾಡದೇ ಒದಗಿಸಬೇಕು.

ಜಗದೀಶ್ ಕಪರು: ಸರಕಾರ ಲಾಕ್ ಡೌನ್ ನಿರ್ಧಾರವನ್ನು ತೆಗೆದುಕೊಂಡದ್ದು ಒಂದು ಮಹಾಮಾರಿ ಕೊರೋನದ ವಿರುದ್ಧದ ಹೋರಾಟ ಎಂದೇ ಹೇಳಬಹುದು. ಜನರು ಇದಕೆ ಸ್ವಯಂ ಬೆಂಬಲವನ್ನು ನೀಡಬೇಕು ಮತ್ತು ಅಗತ್ಯವಿದ್ದರೆ ಮಾತ್ರ ಮನೆ ಇಂದ ಹೊರಗೆ ಬರಬೇಕು .

ಮಂಜುನಾಥ್ ಮೂರ್ತಿ:ನಿತ್ಯ ಕೆಲಸ್ಸಕ್ಕೆ ಹೋಗೋ ಜನಕ್ಕೆ ಮಾಲೀಕರಿಂದ ತೊಂದರೆ ಆಗದಂತೆ ಮಾಡಿ ರಜೆ ಮಾಡಿದ ದಿನಗಳ ಸಂಬಳ ಕಡಿತಗೊಳಿಸದೆ ಸಂಬಳ ಕೊಡುವಂತೆ ತಿಳಸಬೇಕು. ಮಾಲೀಕರು ತಾಳ್ಮೆಯಿಂದ ವರ್ತಿಸಬೇಕು.

Advertisement

ರಮೇಶ್ ಭಟ್ ನಕ್ರೆ: ಲಾಕ್ ಡೌನ್ ತಡವಾಯಿತು.ಅಗತ್ಯ ವಸ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆಮನೆಗೆ ಸರಬರಾಜು ಮಾಡಿದರೆ ಜನ ಅದಕ್ಕೋಸ್ಕರವೂ ತಿರುಗಾಡುವುದು ಉಳಿಯುತ್ತದೆ.ಪೆಟ್ರೋಲ್ ಅಂಬುಲೆನ್ಸ್,ಅಗತ್ಯ ಸೇವಾ ವಾಹನಗಳಿಗೆ ಮಾತ್ರ ಸಿಗುವಂತಾಗಲಿ.ಕರೆಂಟ್, ಇಂಟರ್ನೆಟ್ ಸಮರ್ಪಕವಾಗಿದ್ದು ಲಾಕ್ ಡೌನ್ ಮಾಡಲೇಬೇಕು.

ಸಣ್ಣಮಾರಪ್ಪ. ಚಂಗಾವರ: ಪರಿಸ್ಥಿತಿ ಮಿತಿ ಮೀರುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಸರ್ಕಾರಗಳು ಆರ್ಥಿಕ ದೃಷ್ಟಿಯಿಂದ ವಿಳಂಬ ಮಾಡಿದರೆ. ವೈರಸ್ ಹರಡುವಿಕೆ ಜಾಸ್ತಿಯಾಗಿ ದುಪ್ಪಟ್ಟು ಹೊಡೆತ ಬೀಳಬಹುದು.

ಮಂಜುನಾಥ್ ಜವರನಹಳ್ಳಿ ಬೋರೇಗೌಡ: ಜನವರಿ 30 ಕ್ಕೆ ಮೊದಲ ಪ್ರಕರಣ ಕಂಡುಬಂದ ಕೂಡಲೇ ವಿಮಾನ ನಿಲ್ದಾಣಗಳನ್ನು ಮುಚ್ಚಬೇಕಿತ್ತು. ಈಗಲೂ ಸರಿ ಲಾಕ್ ಡೌನ್ ಆಗಲೀ

ಪ್ರೇಮ್ ಪ್ರಸಾದ್ ಶೆಟ್ಟಿ: ಕಳೆದ 2 ತಿಂಗಳಿನಿಂದ ಹೊರ ದೇಶದಿಂದ ಬಂದಿರುವ ಯಾತ್ರಿಕರನ್ನು/ಸ್ವದೇಶಿಗರನ್ನು ಪತ್ತೆ ಹಚ್ಚಿ ಅವರನ್ನು ಒಮ್ಮೆ ತಪಾಸಣೆಗೊಳಪಡಿಸಿ, ವೈರಸ್ ಲಕ್ಷಣ ಕಂಡುಬಂದಲ್ಲಿ ಅಂಥವರನ್ನು ಆಸ್ಪತ್ರೆಗಳಲ್ಲಿ ರೋಗ ಲಕ್ಷಣ ನಾಶ ಆಗುವವರೆಗೆ ಇರಿಸಿದರೆ ಹತೋಟಿಗೆ ತರಬಹುದು.

ದಾವೂದ್ ಕೂರ್ಗ್: ವಿದೇಶಗಳಲ್ಲಿ ಇರುವಷ್ಟು ಸುಸಜ್ಜಿತ ಆಸ್ಪತ್ರೆ, ಹಾಸಿಗೆಗಳು ಭಾರತದಲ್ಲಿ ಇಲ್ಲ. ರೋಗ ಬಂದು ವಾಸಿಯಾಗುವುದು ದೂರದ ಮಾತು. ಮುನ್ನೆಚ್ಚರಿಕೆ ತೆಗೆದು ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ 1 ತಿಂಗಳು ಬಂದ್ ಮಾಡಿದ್ರೂ ಒಳ್ಳೆಯದೇ. ಆದ್ರೆ ದಿನಗೂಲಿ ನೌಕರರ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next