Advertisement

Sonda ಸ್ವರ್ಣವಲ್ಲೀಯಲ್ಲಿ ಜ.22ಕ್ಕೆ 24 ಗಂಟೆ ಶ್ರೀರಾಮ ಭಕ್ತಿ ಜಾಗರಣ: ಸ್ವರ್ಣವಲ್ಲೀ ಶ್ರೀ

05:29 PM Jan 19, 2024 | Team Udayavani |

ಶಿರಸಿ: ಅಯೋಧ್ಯಾದಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾ ಮಹೋತ್ಸವದ ಹಿನ್ನಲೆಯಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಇಡೀ ದಿನ ಶ್ರೀರಾಮ ಭಕ್ತಿ ಜಾಗರಣ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ.

Advertisement

ಜನವರಿ 22ರ ಬೆಳಿಗ್ಗೆ 6ರಿಂದ ಜ.23ರ ಬೆಳಿಗ್ಗೆ6 ಗಂಟೆಯ ತನಕ ನಿರಂತರ ಭಜನೆ, ತಾಳಮದ್ದಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಈ ಶ್ರೀರಾಮ ಭಕ್ತಿ ಜಾಗರಣ ಕಾರ್ಯಕ್ರಮ 24 ಗಂಟೆ ನಿರಂತರ ನಡೆಯಲಿದೆ.

ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ‍್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ.

ಬಳಿಕ ಅಂದು ಬೆಳಿಗ್ಗೆಯಿಂದ ರಾತ್ರಿ 9 ಗಂಟೆಯ ತನಕ ಅಖಂಡ ಭಜನೆ ಹಾಗೂ ರಾತ್ರಿ 9 ರಿಂದ ಬೆಳಿಗ್ಗೆ 6ರ ತನಕ ತಾಳಮದ್ದಲೆ ನಡೆಯಲಿದೆ. ಜಿಲ್ಲೆ, ಹೊರ ಜಿಲ್ಲೆ, ಶಿಷ್ಯ ಕಲಾವಿದರೂ ಸೇರಿ ನೂರಕ್ಕೂ ಅಧಿಕ ಕಲಾವಿದರು, ಆಸಕ್ತರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಂದು ಬೆಳಿಗ್ಗೆ 6ರಿಂದ ರಾಘಮಿತ್ರ ಪ್ರತಿಷ್ಠಾನ, 7ರಿಂದ ಮಿತ್ರಾ ಮ್ಯೂಸಿಕಲ್ಸ, 8ರಿಂದ ಹುಳಗೋಳ ಯುವಕ, ಯುವತಿ ಮಂಡಳಿ, 9ರಿಂದ ಮೋಗದ್ದೆ ಸೋಮೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ.

Advertisement

ಬೆಳಿಗ್ಗೆ 10ರಿಂದ ಇನ್ನರ್ ವೀಲ್ ಕ್ಲಬ್, 11ರಿಂದ ಝೇಂಕಾರ ಭಜನಾ ಮಂಡಳಿ ಉಂಚಳ್ಳಿ ಹಾಗೂ ಮಧ್ಯಾಹ್ನ 12ರಿಂದ ಮಾತೃವೃಂದ ಸೋಂದಾದಿಂದ ಭಜನೆ ನಡೆಯಲಿದೆ.

ಮಧ್ಯಾಹ್ನ 2ರಿಂದ ಉಮಾಮಹೇಶ್ವರ ಮಹಿಳಾ ಮಂಡಳಿ ನಾಡಿಗಗಲ್ಲಿ, 3ರಿಂದ ಗೋಪಿನಮರಿ ಶ್ರೀಮಾತಾ ಮಹಿಳಾ ಸಂಘ, ಸಂಜೆ 4ರಿಂದ ಲಯನೆಸ್ ಕ್ಲಬ್‌, 5ಕ್ಕೆ ವಿಶ್ವಭಾರತಿ ಭಜನಾ ಮಂಡಳಿ ಸಂಗಡಿಗರಿಂದ, 6ಕ್ಕೆ ಶ್ರೀರಾಜಾರೇಜಶ್ವರಿ ಮಹಿಳಾ ಮಂಡಳಿಯಿಂದ ಹಾಗೂ ರಾತ್ರಿ 7:3೦ರಿಂದ ರಾಜರಾಜೇಶ್ವರಿ ಯುವಕ ಮಂಡಳಿಯಿಂದ ಭಜನೆ ನಡೆಯಲಿದೆ.

ಹಾರ್ಮೋನಿಯಂದಲ್ಲಿ ಪ್ರಕಾಶ ಹೆಗಡೆ ಯಡಹಳ್ಳಿ, ಮಹೇಶ ಭಟ್ಟ ದಾಯಿಮನೆ, ಪ್ರದೀಪ ಭಟ್ಟ ಸಂಪೇಸರ, ತಬಲಾದಲ್ಲಿ ಆನಂದ ಭಟ್ಟ, ಕಿರಣ ಕಾನಗೋಡು, ಕೆ.ಟಿ.ಭಟ್ಟ ಎಪ್ಡಿಮಠ, ವೆಂಕಟ್ರಮಣ ಹೆಗಡೆ ವಾಜಗದ್ದೆ ಭಾಗವಹಿಸುವರು.

ಸ್ವರ್ಣವಲ್ಲೀ ಯಕ್ಷ ಶಾಲ್ಮಲಾದ ನೇತೃತ್ವದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ತನಕ ಸರಣಿ ತಾಳಮದ್ದಲೆ ಶ್ರೀರಾಮನ ಆಧರಿಸಿ ನಡೆಯಲಿದ್ದು, ಗಣಪತಿ ಭಟ್ಟ ಮೊಟ್ಟೆಗದ್ದೆ, ಸತೀಶ ದಂಟಕಲ್, ಅನಂತ ದಂತಳಿಕೆ, ನರಸಿಂಹ ಭಟ್ಟ ಹಂಡ್ರಮನೆ, ಶ್ರೀಪತಿ ಕಂಚಿಮನೆ, ಕೃಷ್ಣ ಹೆಗಡೆ ಜೋಗಿನಮನೆ, ವಿಘ್ನೇಶ್ವರ ಕೆಸರಕೊಪ್ಪ, ಪ್ರಶಾಂತ ಕೈಗಡಿ ಇತರರು ಹಿಮ್ಮೇಳದಲ್ಲಿ ಸಹಕಾರ ನೀಡಲಿದ್ದಾರೆ. ಅರ್ಥಧಾರಿಗಳಾಗಿ ಎಂ.ಎನ್.ಹೆಗಡೆ ಹಲವಳ್ಳಿ, ಆರ್.ಎಸ್.ಹೆಗಡೆ ಭೈರುಂಬೆ, ನರಸಿಂಹ ಭಟ್ಟ, ಡಿ.ಕೆ.ಗಾಂವಕರ, ಬಾಲಚಂದ್ರ ಭಟ್ಟ ಕರಸುಳ್ಳಿ, ಮಹೇಶ ಭಟ್ಟ, ಕರುಣಾಕರ ಹೆಗಡೆ, ಮಂಜುನಾಥ ಗೊರಮನೆ, ಗಣಪತಿ ಗುಂಜಗೋಡ, ಸುಬ್ರಾಯ ಕೆರೆಕೊಪ್ಪ., ಜಿ.ಜಿ.ಹೆಗಡ, ಪದ್ಮನಾಭ ಅರೆಕಟ್ಟ, ಶ್ರೀನಿವಾಸ ಮತ್ತಿಘಟ್ಟ, ಭಾಸ್ಕರ ಗಾಂವಕರ್, ಶ್ರೀಪಾದ ಭಟ್ಟ, ಸದಾಶಿವ ಮಲವಳ್ಳಿ, ಪ್ರವೀಣ ಹೆಗಡೆ ಮನ್ಮನೆ ಹಾಗೂ ಇತರರು ಭಾಗವಹಿಸುವರು ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next