ಮುಂಬಯಿ: ದಹಿ ಹಂಡಿ ಆಚರಣೆ ವೇಳೆ ಮುಂಬಯಿಯಲ್ಲಿ ಗೋವಿಂದ ತಂಡಗಳ 24 ಕ್ಕೂ ಹೆಚ್ಚು ಸದಸ್ಯರು ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ.
ಅವರಲ್ಲಿ 19 ಮಂದಿಯನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದ್ದು, ಐವರು ಗೋವಿಂದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಉಚಿತ ಚಿಕಿತ್ಸೆಗೆ ಆದೇಶ
ದಹಿ ಹಂಡಿಗೆ ಸಾಹಸ ಕ್ರೀಡೆ ಸ್ಥಾನಮಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದರು. ಸರಕಾರಿ ನಿರ್ಣಯ (ಜಿಆರ್) ಅಥವಾ ಆದೇಶವು ಎಲ್ಲಾ ಸರಕಾರಿ, ನಾಗರಿಕ ಮತ್ತು ಜಿಲ್ಲಾ ಪರಿಷತ್ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಈ ಘಟನೆಗಳ ಸಂದರ್ಭದಲ್ಲಿ ಗಾಯಗೊಂಡ ಭಾಗವಹಿಸುವವರಿಗೆ ಉಚಿತ ಚಿಕಿತ್ಸೆ ನೀಡಲು ಸೂಚನೆ ನೀಡಿದೆ.
ಇದನ್ನೂ ಓದಿ: ಸರ್ಕಾರ ಗೂಂಡಾಗಿರಿಯ ಹಾವಿಗೆ ಹಾಲೆರೆಯುತ್ತಿದೆ: ಕಾಂಗ್ರೆಸ್