Advertisement
ವೈದ್ಯರು : ಜಿಲ್ಲೆಯಲ್ಲಿ ಕೋವಿಡ್ ತಡೆಗೆ ಅಖಾಡಕ್ಕಿಳಿದ ವೈದ್ಯರ ತಂಡ ಕೋವಿಡ್ ಟೆಸ್ಟ್, ಸೋಂಕಿತರಿಗೆ ಚಿಕಿತ್ಸೆ ನೀಡುವುದು, ಜಿಲ್ಲಾ ಗಡಿ ಭಾಗಗಳಲ್ಲಿ ಕುಳಿತು ಹೊರಗಿ ನಿಂದ ಬರುವವರ ಆರೋಗ್ಯ ಪರೀಕ್ಷಿಸುವಕಾರ್ಯದಲ್ಲಿ ಸಕ್ರಿಯವಾಗಿತ್ತು. ಈ ವೇಳೆ ಕೆಲಸದ ಒತ್ತಡದಿಂದ ಮಾನಸಿಕ ಖನ್ನತೆಗೆ ಒಳಗಾಗಿ ಡಾ| ನಾಗೇಶ್ ಮತ್ತು ಡಾ| ನಾಗೇಂದ್ರ ಮೃತಪಟ್ಟಿದ್ದರು. ಬಳಿಕ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಚಂದ್ರಮೋಹನ್ ಹಾಗೂ ಡಾ.ವೆಂಕಟೇಶ್ ಅವರಿಗೂ ಸೋಂಕು ಹರಡಿ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಹುತಾತ್ಮ ರಾದ ನಾಲ್ವರು ವೈದ್ಯರಿಗೂ ಸರ್ಕಾರದಿಂದ ಪರಿಹಾರ ಲಭ್ಯವಾಗಿದೆ.
Related Articles
Advertisement
ಯಾವ ಇಲಾಖೆಯವರು ಕೋವಿಡ್ ಯೋಧರು? : ಕೋವಿಡ್ ನಂಥ ತೀವ್ರ ತರಹದ ಸಾಂಕ್ರಾಮಿಕಕಾಯಿಲೆ ಹರಡುತ್ತಿರುವ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ. ಆರೋಗ್ಯ, ಪೊಲೀಸ್, ಹೋಂ ಗಾರ್ಡ್,ಕಂದಾಯ, ಪೌರ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಈ ಕೋವಿಡ್ ವಾರಿಯರ್ಸ್ ವ್ಯಾಪ್ತಿಗೆ ಬರುತ್ತಾರೆ. ಕೋವಿಡ್ ಯೋಧರಾಗಿ ಸೇವೆ ಸಲ್ಲಿಸುತ್ತಿರುವವರುಕೋವಿಡ್ ಸೋಂಕಿಗೊಳಗಾಗಿ ಮೃತಪಟ್ಟಲ್ಲಿ, ಅವರಕುಟುಂಬಕ್ಕೆ 30 ಲಕ್ಷ ರೂ. ಪರಿಹಾರವನ್ನು ವಿಮೆಯ ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ.
ಚಾಲಕ, ನಿರ್ವಾಹಕರು : ಮೈಸುರು ಜಿಲ್ಲೆಯಲ್ಲಿ ಲಾಕ್‌ಡೌನ್ ನಂತರ ಸಾರಿಗೆ ಬಸ್ ಗಳ ಸೇವೆ ಪುನಾರಂಭವಾದಾಗ ಕೋವಿಡ್ ಸೊಂಕಿಗೆ 05 ಮಂದಿ ಮೃತಪಟ್ಟಿದ್ದಾರೆ. ಮೈಸೂರು ಗ್ರಾಮಾಂತರ ವಿಭಾಗದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಾಸುದೇವನ್, ನಿರ್ವಾಹಕರಾಗಿದ್ದ ವಿಜಯ್ ಕುಮಾರ್ ಸೋಂಕಿಗೆ ಬಲಿಯಾಗಿದ್ದಾರೆ. ಜೊತೆಗೆ ಮೈಸೂರು ನಗರ ವಿಭಾಗದಲ್ಲಿ ನಿರ್ವಾಹಕರಾದರಾಮಕೃಷ್ಣ, ಮಹದೇವು ಹಾಗೂ ಒಬ್ಬ ಚಾಲಕ ಮೃತಪಟ್ಟಿದ್ದಾರೆ. ಆದರೆ, ಇವರಿಗೆ ಇಲಾಖೆಯಿಂದ ಪರಿಹಾರ ಸಿಕ್ಕಿದೆ. ಸರ್ಕಾರದಿಂದ ವಿಶೇಷ ಪರಿಹಾರ ಲಭ್ಯವಾಗಿಲ್ಲ.
24 ಹುತಾತ್ಮರ ಪೈಕಿ 11 ಮಂದಿಗೆ ಪರಿಹಾರ : ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಒಟ್ಟು 24 ಕೋವಿಡ್ ವಾರಿಯರ್ಸ್‌ಗಳು ಮೃತಪಟ್ಟಿದ್ದಾರೆ. ಈ ಪೈಕಿ 11 ಮಂದಿಗೆ ಪರಿಹಾರ ಸಿಕ್ಕದ್ದರೆ, ಉಳಿದ 13 ಮಂದಿಗೆ ವಂಶವೃಕ್ಷ ಸೇರಿದಂತೆ ಇತರೆ ದಾಖಲೆಗಳನ್ನು ಒದಗಿಸುವಲ್ಲಿ ವಿಳಂಬ ಆಗಿರುವುದ ರಿಂದ ಪರಿಹಾರ ವಿತರಣೆ ತಡವಾಗಿದೆ ಎಂದು ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
-ಸತೀಶ್ ದೇಪುರ