Advertisement

ಸಿರಿಯಾದ ಅಲ್‌ ಬಾಬ್‌ ಪಟ್ಟಣದ ಮೇಲೆ ಟರ್ಕಿ ದಾಳಿ: 24 ಮಂದಿ ಸಾವು

03:23 PM Feb 16, 2017 | Team Udayavani |

ಬೇರೂತ್‌ : ಇಸ್ಲಾಮಿಕ್‌ ಐಸಿಸ್‌ ಉಗ್ರರ ವಶದಲ್ಲಿರುವ ಸಿರಿಯಾದಲ್ಲಿನ ಪಟ್ಟಣವೊಂದರ ಮೇಲೆ ಟರ್ಕಿ ನಡೆಸಿರುವ ಭೀಕರ ಬಾಂಬ್‌ ದಾಳಿಗೆ 24 ಪೌರರು ಬಲಿಯಾಗಿರುವುದಗಿ ವರದಿಯಾಗಿದೆ

Advertisement

ಆದರೆ ಟರ್ಕಿ ಸೇನೆಯು, ತನ್ನೀ ಕಾರ್ಯಾಚರಣೆಯಲ್ಲಿ ಕೇವಲ ಐಸಿಸ್‌ ಉಗ್ರರು ಮಾತ್ರವೇ ಸತ್ತಿದ್ದಾರೆ ಎಂದು ಹೇಳಿಕೊಂಡಿದೆ.

ಸಿರಿಯದ ಮಾನವ ಹಕ್ಕುಗಳ ವಿಚಕ್ಷಣಾ ಕೇಂದ್ರ ತಿಳಿಸಿರುವ ಪ್ರಕಾರ ಐಸಿಸ್‌ ಉಗ್ರರ ವಶದಲ್ಲಿರುವ ಸಿರಿಯ ಅಲ್‌ ಬಾಬ್‌ ಪಟ್ಟಣದ ಮೇಲೆ ಟರ್ಕಿ ಸೇನೆ ಕಳೆದ 24 ತಾಸುಗಳಲ್ಲಿ  ನಡೆಸಿದ ವಾಯು ದಾಳಿ ಮತ್ತು ಶೆಲ್‌ ದಾಳಿಯಲ್ಲಿ 11 ಮಕ್ಕಳು ಸೇರಿದಂತೆ 24 ಪೌರರು ಮೃತಪಟ್ಟಿದ್ದಾರೆ. 

ಸರಕಾರಿ ಒಡೆತನದ ಅನಾದೋಲು ಸುದ್ದಿ ಸಂಸ್ಥೆಯು “ಟರ್ಕಿ ಸೇನಾ ಕಾರ್ಯಾಚರಣೆಯಲ್ಲಿ 15 ಉಗ್ರರು ಮೃತಪಟ್ಟಿದ್ದಾರೆ’ ಎಂದು ವರದಿ ಮಾಡಿದೆ. ಉತ್ತರ ಸಿರಿಯ ಅಲೆಪ್ಪೋ ಪ್ರಾಂತ್ಯದಲ್ಲಿನ ಅಲ ಬಾಬ್‌, ಐಸಿಸ್‌ ಉಗ್ರರ ವಶದಲ್ಲಿರುವ ಕಟ್ಟಕಡೆಯ ಪಟ್ಟಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next